ಸಿನಿಮಾ ಸುದ್ದಿ

ಮರ್ಡರ್ ಮಿಸ್ಟ್ರಿ 'ಕವಲುದಾರಿ' ಟ್ರೇಲರ್ ಔಟ್!

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ "ಕವಲುದಾರಿ" ಟ್ರೇಲರ್ ಗುರುವಾರ ಬಿಡುಗಡೆಯಾಗಿದೆ.

ಮರ್ಡರ್ ಮಿಸ್ಟ್ರಿ 'ಕವಲುದಾರಿ' ಟ್ರೇಲರ್ ಔಟ್!
ಮರ್ಡರ್ ಮಿಸ್ಟ್ರಿ 'ಕವಲುದಾರಿ' ಟ್ರೇಲರ್ ಔಟ್!
Published On :
ಬೆಂಗಳೂರು: ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ "ಕವಲುದಾರಿ" ಟ್ರೇಲರ್ ಗುರುವಾರ ಬಿಡುಗಡೆಯಾಗಿದೆ.
"ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಚಿತ್ರದ ಹೆಸರಾಂತ ನಿರ್ದೇಶಕ ಹೇಮಂತ್ ಎಂ. ರಾವ್ ಅವರು ಈ ಚಿತ್ರದ ನಿರ್ದೇಶಕರಾಗಿದ್ದು ಪುನೀತ್‌ ರಾಜ್‌ಕುಮಾರ್‌ ತನ್ನ ಹೋಂ ಪ್ರೊಡಕ್ಷನ್ ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಎರಡು ನಿಮಿಷಗಳ ಟ್ರೇಲರ್ ಬಹಳ ವಿಶೇಷವಾಗಿದ್ದು ನೋಡುಗರಲ್ಲಿ ಚಿತ್ರದ ಕುರಿತು ಅಚ್ಚರಿ ಹಾಗೂ ಕುತೂಹಲ ಮೂಡಿಸುವಂತಿದೆ.
ಅನಂತ್‌ ನಾಗ್‌ ಮತ್ತು ಅಚ್ಯುತ್‌ಕುಮಾರ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಹಾಡುಗಳು ಈಗಾಗಲೇ ಸಾಕಶ್ಃಟು ಜನಪ್ರಿಯವಾಗಿದೆ. ಇನ್ನು "ಕವಲುದಾರಿ" ಚಿತ್ರ ಇದೇ ಏಪ್ರಿಲ್ 12ಕ್ಕೆ ತೆರೆ ಕಾಣಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.