ಸಿನಿಮಾ ಸುದ್ದಿ

ರಜನಿಕಾಂತ್ ಅವರನ್ನು ಸೂಪರ್ ಸ್ಟಾರ್ ಮಾಡಿದ ಹಿರಿಯ ನಿರ್ದೇಶಕ ಜೆ.ಮಹೇಂದ್ರನ್ ಇನ್ನಿಲ್ಲ

ಕಾಲಿವುಡ್ ನ ಹಿರಿಯ ಸಿನಿಮಾ ನಿರ್ದೇಶಕ ಜೆ. ಮಹೇಂದ್ರನ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. 79 ವರ್ಷದ ಮಹೇಂದ್ರನ್ ಮುಳ್ಳುಮ್ ಮಲರುಮ್, ಉದಿರಿ ಪೂಕ್ಕಳ್ ಎಂಬಂತಹ ಎವರ್ ಗ್ರೀನ್ ಸಿನಿಮಾ ನೀಡಿದ್ದಾರೆ...

ರಜನಿಕಾಂತ್ ಅವರನ್ನು ಸೂಪರ್ ಸ್ಟಾರ್ ಮಾಡಿದ ಹಿರಿಯ ನಿರ್ದೇಶಕ ಜೆ.ಮಹೇಂದ್ರನ್ ಇನ್ನಿಲ್ಲ
ಜೆ.ಮಹೇಂದ್ರನ್
Published On :
ಚೆನ್ನೈ: ಕಾಲಿವುಡ್ ನ ಹಿರಿಯ ಸಿನಿಮಾ ನಿರ್ದೇಶಕ ಜೆ. ಮಹೇಂದ್ರನ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.
79 ವರ್ಷದ ಮಹೇಂದ್ರನ್ ಮುಳ್ಳುಮ್ ಮಲರುಮ್,  ಉದಿರಿ ಪೂಕ್ಕಳ್ ಎಂಬಂತಹ ಎವರ್ ಗ್ರೀನ್ ಸಿನಿಮಾ ನೀಡಿದ್ದಾರೆ, ತೀವ್ರ ಆನಾರೋಗ್ಯದ ಕಾರಣ ಮಹೇಂದ್ರನ್ ಅವರನ್ನು  ಮಾರ್ಚ್ 27 ರಂದು ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಹೇಂದ್ರನ್ ಅವರ ಪುತ್ರ ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ತಿಳಿಸಿದ್ದಾರೆ, ನೆಂಜತ್ತೆಯ್ ಕಿಲ್ಲಾದೆ  ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. 
ರಜನಿಕಾಂತ್ ಅವರ ಆರಂಭಿಕ ದಿನಗಳಲ್ಲಿ ಅವರಿಗೆ ಮಾರ್ಗದರ್ಶಕರಾಗಿದ್ದರು. ತಮ್ಮ ಯಶಸ್ಸಿಗೆ  ಹಿರಿಯ ನಿರ್ದೇಶಕರೇ ಕಾರಣ ಎಂದು ಹಲವು ಬಾರಿ ರಜನಿಕಾಂತ್ ಹೇಳಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯಿಂದ ಮಹೇಂದ್ರನ್ ಅವರ ನಿವಾಸದಲ್ಲಿ  ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು, ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.