ಪೊಗರು ಸಿನಿಮಾದಲ್ಲಿ ಗಡ್ಡಧಾರಿ ಧ್ರುವ ಸರ್ಜಾ ಲುಕ್ ಹೇಗಿದೆ ನೋಡಿ
ನಟ ಧ್ರುವ ಸರ್ಜಾ ಸಾಕಷ್ಟು ದಿನಗಳಿಂದ ಪೊಗರು' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದೀಗ ಈ ಚಿತ್ರದ ಅವರ ಹೊಸ ಲುಕ್ ಜೊತೆ ಪ್ರಯೋಗ ನಡೆಸುತ್ತಿದ್ದಾರೆ...

Published On :
ಬೆಂಗಳೂರು: ನಟ ಧ್ರುವ ಸರ್ಜಾ ಸಾಕಷ್ಟು ದಿನಗಳಿಂದ ಪೊಗರು' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದೀಗ ಈ ಚಿತ್ರದ ಅವರ ಹೊಸ ಲುಕ್ ಜೊತೆ ಪ್ರಯೋಗ ನಡೆಸುತ್ತಿದ್ದಾರೆ, ಶಾಲಾ ದಿನಗಳ ಭಾಗಹದ ಶೂಟಿಂಗ್ ಮುಗಿದಿದ್ದು, ಎರಡನೇ ಶೆಡ್ಯೂಲ್ ಗಾಗಿ ಅಕ್ಟೋಬರ್ 1 ರಿಂದ ಶೂಟಿಂಗ್ ಆರಂಭವಾಗಲಿದೆ.
ಪೊಗರು ಸಿನಿಮಾದಲ್ಲಿ ಧ್ರುವಸರ್ಜಾ ಮೂರು ವಿಭಿನ್ನ ಪಾತ್ರಗಳಲ್ಲಿ ನಟಿಸಲಿದ್ದಾರೆ, ಶಾಲಾ ಬಾಲಕ, ರೆಬೆಲ್ ಮತ್ತು ರೆಗ್ಯೂಲರ್ ಪರ್ಸನ್ ಆಗಿ ಕಾಣಿಸಿಕೊಂಡಿದ್ದಾರೆ, ಕೆಲವು ದಿನ ಶೂಟಿಂಗ್ ನಿಲ್ಲಿಸಲಾಗಿತ್ತು, ಶಾಲಾ ಬಾಲಕನ ಪಾತ್ರಕ್ಕಾಗಿ 30 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದರು, ಮತ್ತೆ ತೂಕ ಹೆಚ್ಚಿಸಿಕೊಳ್ಳಲು ಶೂಟಿಂಗ್ ನಿಲ್ಲಿಸಲಾಗಿತ್ತು. ಈ ಸಮಯದಲ್ಲಿ, ಉದ್ದ ಕೂದಲು ಮತ್ತು ಗಡ್ಡ ಬಿಟ್ಟು ಧ್ರುವ ಸರ್ಜಾ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಮುಂದಿನ ವಾರ ಸೆಟ್ ಗೆ ಧ್ರುವಸರ್ಜಾ ಆಗಮಿಸಲಿದ್ದಾರೆ, ಶೂಟಿಂಗ್ ವಿಳಂಬವಾಗುತ್ತಿರುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿರುವ ಧ್ರುವ ಸರ್ಜಾ ಹೊಸತನ್ನು ತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ,
ನಂದ ಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಗಂಗಾಧರ್ ನಿರ್ಮಾಣ ಚಿತ್ರಕ್ಕಿದೆ. 'ಪೋಗರು' ಸಿನಿಮಾಗೆ ಇನ್ನೂ ನಾಯಕಿ ಆಯ್ಕೆಯಾಗಿಲ್ಲ, ಅರ್ಜುನ್ ಜನ್ಯ ಸಿನಿಮಾಗೆ ಸಂಗಿತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


