ಕನ್ನಡಿಗರ ವಿರೋಧದ ನಡುವೆ ಕಿಚ್ಚ ಸುದೀಪ್ ಅಭಿನಯದ ಸೈರಾ ನರಸಿಂಹರೆಡ್ಡಿ ಕನ್ನಡಕ್ಕೆ ಡಬ್?
ಡಬ್ಬಿಂಗ್ ಕುರಿತಂತೆ ಕರ್ನಾಟಕದಲ್ಲಿ ಭಾರೀ ವಿರೋಧದ ನಡುವೆಯೂ ತಮಿಳಿನ ನಟ ಅಜಿತ್ ಕುಮಾರ್ ನಟನೆಯ ವಿವೇಗಂ ಚಿತ್ರವು ಕನ್ನಡಕ್ಕೆ ಕಮಾಂಡೋ ಹೆಸರಿನಲ್ಲಿ ಡಬ್ ಆಗಿ ಬಂದ...

Published On :
ಡಬ್ಬಿಂಗ್ ಕುರಿತಂತೆ ಕರ್ನಾಟಕದಲ್ಲಿ ಭಾರೀ ವಿರೋಧದ ನಡುವೆಯೂ ತಮಿಳಿನ ನಟ ಅಜಿತ್ ಕುಮಾರ್ ನಟನೆಯ ವಿವೇಗಂ ಚಿತ್ರವು ಕನ್ನಡಕ್ಕೆ ಕಮಾಂಡೋ ಹೆಸರಿನಲ್ಲಿ ಡಬ್ ಆಗಿ ಬಂದ ಬೆನ್ನಲ್ಲೇ ಇದೀಗ ತೆಲುಗಿನ ಬಹುನಿರೀಕ್ಷಿತ ಸೈರಾ ನರಸಿಂಹ ರೆಡ್ಡಿ ಚಿತ್ರವು ಕನ್ನಡಕ್ಕೆ ಡಬ್ ಆಗಲಿದೆ ಎಂದು ಹೇಳಲಾಗುತ್ತಿದೆ.
ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿದ್ದು ನಟ, ನಿರ್ಮಾಪಕ ರಾಮ್ ಚರಣ್ ತೇಜ್ ನಿರ್ಮಿಸುತ್ತಿದ್ದು ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗುತ್ತಿದೆ ಎಂದು ತಮ್ಮದೇ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾರೆ.
ಸೈರಾ ನರಸಿಂಹ ರೆಡ್ಡಿ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇನ್ನು ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವ ಆಲೋಚನೆಯನ್ನು ರಾಮ್ ಚರಣ್ ತೇಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ತೆಲುಗಿನಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ಕನ್ನಡ, ತಮಿಳು ಮತ್ತು ಮಲಯಾಳಂನಲ್ಲೂ ಏಕಕಾಲಕ್ಕೆ ರಿಲೀಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Chiranjeeviಚಿರಂಜೀವಿಕಿಚ್ಚ ಸುದೀಪ್Kiccha sudeepSye Raa Narasimha ReddyKannada Dubbingಸೈರಾ ನರಸಿಂಹ ರೆಡ್ಡಿಕನ್ನಡ ಡಬ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


