ಅರ್ಜುನ್ ಸರ್ಜಾ ವಿರುದ್ಧ ಶೃತಿ MeToo ಆರೋಪ; ವಿಸ್ಮಯ ಚಿತ್ರ ನಿರ್ಮಾಪಕನಿಂದ ಹೊಸ ಬಾಂಬ್!
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ಮಯ ಚಿತ್ರ ನಿರ್ಮಾಪಕ ಉದಯ್ ಕುಮಾರ್...

Published On :
ಬೆಂಗಳೂರು: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ಮಯ ಚಿತ್ರ ನಿರ್ಮಾಪಕ ಉದಯ್ ಕುಮಾರ್ ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು ಅರ್ಜುನ್ ಸರ್ಜಾ ವಿರುದ್ಧ ಶೃತಿ ಮಾಡಿರುವ ಆರೋಪಗಳನ್ನು ಅಲ್ಲಗಳೆದಿದ್ದಾರೆ.
ಉದಯ್ ಕುಮಾರ್ ಅವರು ಶೃತಿ ಶೂಟಿಂಗ್ ಸೆಟ್ ಗೆ ಬಂದದ್ದು ಕೇವಲ 9 ದಿನ ಮಾತ್ರ. ಶೃತಿಗೆ 3 ಲಕ್ಷ ರುಪಾಯಿ ಸಂಭಾವನೆ ನೀಡಲಾಗಿತ್ತು. ಶೃತಿ ಆರೋಪಿಸಿದ ಹಾಗೆ ಯಾವುದೇ ಘಟನೆ ಶೂಟಿಂಗ್ ಸೆಟ್ ನಲ್ಲಿ ನಡೆದಿಲ್ಲ. ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಸುಮಾರು 40 ಜನ ಇರುತ್ತಾರೆ. ಆ ರೀತಿ ನಡೆಯಲು ಸಾಧ್ಯವಿಲ್ಲ ಎಂದರು ಹೇಳಿದರು.
ಶೃತಿ ಸಾಮಾಜಿಕ ಜಾಲತಾಣದಲ್ಲಿ ಏನೋ ಹೇಳಲು ಹೋಗಿ ಅದಕ್ಕೆ ಈಗ ಸ್ಟಿಕ್ ಆಗಿದ್ದಾರೆ. ವೈಯಕ್ತಿಕ ಪ್ರತಿಷ್ಟೆಗೆ ಬಿದ್ದು ಆರೋಪ ಮಾಡಿದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ವಿಸ್ಮಯ ಚಿತ್ರದ ವಿಲನ್ ರೋಲ್ ಗೆ ಮೊದಲು ಚೇತನ್ ರನ್ನು ಆಯ್ಕೆ ಮಾಡಲಾಗಿತ್ತು. ನಂತರ ಜೆಕೆ ಸಾಕಷ್ಟು ಪಾಪುಲರ್ ಆಗಿದ್ದು ಚೇತನ್ ಕೈಬಿಡಲಾಗಿತ್ತು. ಇನ್ನು ಪ್ರೇಮಬರಹ ಚಿತ್ರಕ್ಕೂ ಚೇತನ್ ಹೆಸರು ಕೈಬಿಟ್ಟಿರುವುದರಿಂದ ಚೇತನ್ ಶೃತಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಉದಯ್ ಕುಮಾರ್ ಪೊಲೀಸರ ಮುಂದೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
arjun sarjaಅರ್ಜುನ್ ಸರ್ಜಾCubbon Park policeSruthi Hariharanಶೃತಿ ಹರಿಹರನ್Vismayaವಿಸ್ಮಯಉದಯ್ ಕುಮಾರ್Uday Kumarಕಬ್ಬನ್ ಪಾರ್ಕ್ ಪೊಲೀಸ್MeTooಮೀಟೂ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


