ಸಿನಿಮಾ ಸುದ್ದಿ

ನಾಗತಿಹಳ್ಳಿ ಚಿತ್ರಕ್ಕಾಗಿ 'ರತ್ನ ಶಾಸ್ತ್ರಜ್ಞ'ನಾದ ಅನಂತ್ ನಾಗ್!

ಪ್ರತಿ ಚಿತ್ರಗಳಲ್ಲಿ ವಿಭಿನ್ನ ಶೈಲಿಯ ಪಾತ್ರಗಳಲ್ಲಿ ನಟಿಸಿ ಜನರ ಮನಗೆಲ್ಲುತ್ತಿರುವ ಹಿರಿಯ ನಯ ಅನಂತ್ ನಾಗ್ ಇದೀಗ ಮತ್ತೆ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಬಾರಿ ಕನ್ನಡದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ....

ನಾಗತಿಹಳ್ಳಿ ಚಿತ್ರಕ್ಕಾಗಿ 'ರತ್ನ ಶಾಸ್ತ್ರಜ್ಞ'ನಾದ ಅನಂತ್ ನಾಗ್!
ಮಾನ್ವಿತಾ ಹರೀಶ್, ಅನಂತ್ ನಾಗ್ ಮತ್ತು ವಸಿಷ್ಠ ಸಿಂಹ
Published On :
ಬೆಂಗಳೂರು: ಪ್ರತಿ ಚಿತ್ರಗಳಲ್ಲಿ ವಿಭಿನ್ನ ಶೈಲಿಯ ಪಾತ್ರಗಳಲ್ಲಿ ನಟಿಸಿ ಜನರ ಮನಗೆಲ್ಲುತ್ತಿರುವ ಹಿರಿಯ ನಯ ಅನಂತ್ ನಾಗ್ ಇದೀಗ ಮತ್ತೆ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಬಾರಿ ಕನ್ನಡದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಅವರು ರತ್ನ ಪರೀಕ್ಷಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಲಂಡನ್ ನಲ್ಲಿ ಇದಾಗಲೇ ಮುಗಿದಿದ್ದು ಮಾನ್ವಿತಾ ಹರೀಶ್, ವಸಿಷ್ಟ ಸಿಂಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಚಿತ್ರೀಕರಣದ ಮುಂದಿನ ಹಂತ ಕೆಲ ದಿನಗಳಲ್ಲೇ ಪ್ರಾರಂಭಗೊಳ್ಳಲಿದ್ದು ಬೆಂಗಳೂರಿನಲ್ಲೇ ನಡೆವ ಈ ಭಗದ ಚಿತ್ರೀಕರಣದಲ್ಲಿ ಅನಂತ್ ನಾಗ್ ಪಾಲ್ಗೊಳ್ಳಲಿದ್ದಾರೆ.
ನಿರ್ದೇಶಕ ನಾಗತಿಹಳ್ಳಿ ಮಾತ್ರ ಚಿತ್ರ ಬಿಡುಗಡೆಯವರೆಗೂ ಚಿತ್ರದಲ್ಲಿನ ಅನಂತ್ ನಾಗ್ ಪಾತ್ರದ ಕುರಿತಂತೆ ಯಾವುದೇ ಹೆಚ್ಚು ವಿವರ ನೀಡಲು ಬಯಸುವುದಿಲ್ಲ. ಕನ್ನಡಪ್ರಭಕ್ಕೆ ಮಾನ್ವಿತಾ ಹಾಗೂ ವಸಿಷ್ಟ ಅವರೊಡನೆ ಇರುವ ಅನಂತ್ ನಾಗ್ ಫೋಟೋ ದೊರಕಿದ್ದು ಈ ಬಗ್ಗೆ ನಾಗತಿಹಳ್ಳಿ ಅವರನ್ನು ಪ್ರಶ್ನಿಸಿದಾಗ ಅವರು ಮೌನಕ್ಕೆ ಶರಣಾಗಿದ್ದರು. 
"ಈಗ ನಾನು ಹೇಳುವುದಿಷ್ಟೇ, ಅನಂತ್ ನಾಗ್ ಈ ಚಿತ್ರದಲ್ಲಿ  ರತ್ನಶಾಸ್ತ್ರಜ್ಞರ ಪಾತ್ರ ವಹಿಸಿದ್ದಾರೆ.ಇವರು ಭೂವಿಜ್ಞಾನ ಮೂಲಕ ಕೆಲಸ ನಿರ್ವಹಿಸುವ ರತ್ನಶಾಸ್ತ್ರಜ್ಞ ಹೊರತಾಗಿ ರತ್ನಗಳ ಪರೀಕ್ಷಕನಾಗಿ ಜನರಿಗೆ ಮಾರಾಟ ಮಾಡುವ ರತ್ನದ ವ್ಯ್ಪಾರಿಯಲ್ಲ.ಅವರು ಸ್ಕ್ರಿಪ್ಟ್ ಮತ್ತು ಅವರ ಪಾತ್ರವನ್ನು ತಿಳಿದ ಅನಂತ್ ನಿಜಕ್ಕೂ ರೋಮಾಂಚಿತರಾಗಿದ್ದರು" ನಾಗತಿಹಳ್ಳಿ ಹೇಳಿದ್ದಾರೆ.
ಈ ನಿರ್ದಿಷ್ಟ ಪಾತ್ರಕ್ಕಾಗಿ, ಅಮೆರಿಕಾದ ಖ್ಯಾತ  ರತ್ನವಿಜ್ಞಾನಿ ಡಾ. ಮಂಜುನಾಥ ಅನಂತ್ ಅವರಿಗೆ ರತ್ನಗಳ ಬಳಜ್ಕೆಯ ಕುರಿತಂತೆ ಕೆಲವು ಅಂಶಗಳನ್ನು ಸೂಚಿಸಿದ್ದಾರೆ."ನಾನು ಊಈ ಪಾತ್ರಕ್ಕೆ ಜೀವತುಂಬಲು ಬಯಸುವೆ" ಅನಂತ್ ಹೇಳುತ್ತಾರೆ.
ವೈ.ಎನ್. ಶಂಕರೇಗೌಡ ಈ ಚಿತ್ರದ ನಿರ್ಮಾಪಕರಾಗಿದ್ದು ಅವರ ಪುತ್ರಿ ಕನಸು ಈ ಕಥೆಯನ್ನು ಬರೆದಿದ್ದಾರೆ.ನಿರ್ದೇಶಕರು ತಮ್ಮ  90ರ ದಶಕದ ಸೂಪರ್ ಹಿಟ್ ಚಿತ್ರ "ಅಮೆರಿಕಾ ಅಮೆರಿಕಾ" ರೀತಿಯಲ್ಲಿಯೇ ಈ ಚಿತ್ರವನ್ನು ನಿರ್ದೇಶನ ಮಾಡಬೇಕೆಂದು ಯೋಜಿಸಿದ್ದಾರೆ. ಪ್ರೇಮ ಮತ್ತು ಅಪರಾಧದ ಹಿನ್ನೆಲೆ ಇರುವ ಕಥೆಯನ್ನೊಳಗೊಂಡ ಈ ಚಿತ್ರ ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ಭಿನ್ನತೆಗಳನ್ನು ಕಾಣಿಸಲಿದೆ ಎನ್ನಲಾಗಿದೆ. ಇನ್ನೂ ವಿಶೇಷವೆಂದರೆ ಈ ಚಿತ್ರಕ್ಕೆ  ಬ್ರಿಟಿಷ್ ಛಾಯಾಗ್ರಾಹಕ ವಿಲ್ ಪ್ರೈಸ್ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.