ಸಿನಿಮಾ ಸುದ್ದಿ

'ಸ್ವಾರ್ಥರತ್ನ' ಮೂಲಕ ಸ್ವತಂತ್ರ ನಿರ್ದೇಶಕರಾದ ಚೆಫ್ ಅಶ್ವಿನ್ ಕೊಡಂಗೆ

ತಾರಾ ಹೊಟೇಲ್ ಗಳಲ್ಲಿ ಚೆಫ್ ಆಗಿ ಪ್ರಶಸ್ತಿ ಗಳಿಸಿದ್ದ ಅಶ್ವಿನ್ ಕೊಡಂಗೆ ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ...

'ಸ್ವಾರ್ಥರತ್ನ' ಮೂಲಕ ಸ್ವತಂತ್ರ ನಿರ್ದೇಶಕರಾದ ಚೆಫ್ ಅಶ್ವಿನ್ ಕೊಡಂಗೆ
ಅಶ್ವಿನ್ ಕೊಡಂಗೆ
Published On :

ತಾರಾ ಹೊಟೇಲ್ ಗಳಲ್ಲಿ ಚೆಫ್ ಆಗಿ ಪ್ರಶಸ್ತಿ ಗಳಿಸಿದ್ದ ಅಶ್ವಿನ್ ಕೊಡಂಗೆ ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದು ಸಿನಿಮಾ.

ಅಶ್ವಿನ್ ಕೊಡಂಗೆ ಕಳೆದ ಎಂಟು ವರ್ಷಗಳ ಹಿಂದೆ ಸಿನಿಮಾ ಕ್ಷೇತ್ರದತ್ತ ತನ್ನ ಒಲವು ಮೂಡಿಸಿಕೊಂಡರು. ಇದೀಗ ಸ್ವಾರ್ಥರತ್ನ ಎಂಬ ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ. ಫಸ್ಟ್ ರ್ಯಾಂಕ್ ರಾಜು ಮತ್ತು ರಾಜು ಕನ್ನಡ ಮೀಡಿಯಂ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈ ಮಧ್ಯೆ ಹಿಂದಿಯಲ್ಲಿ ಒಂದು ಸಿನಿಮಾ ದ ಪರ್ಫೆಕ್ಟ್ ಗರ್ಲ್ ಹಾಗೂ ತೆಲುಗು ಚಿತ್ರಕ್ಕೆ ಸಂಭಾಷಣೆ, ಸಾಹಿತ್ಯ ಬರೆದಿದ್ದರು. ಇದೀಗ ಸ್ವಾರ್ಥರತ್ನಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸಿನಿಮಾದ ಮೇಲಿನ ಒಲವಿನಿಂದಾಗಿ ತಮ್ಮ ಗ್ರಿಲ್ಸ್ -ಎನ್-ಊಡಲ್ಸ್ ರೆಸ್ಟೋರೆಂಟ್ ನ್ನು ಮುಚ್ಚಲು ಸಹ ನಿರ್ಧರಿಸಿದ್ದಾರೆ.

ಸ್ವಾರ್ಥರತ್ನ ರೌನಿಂಗ್ ಹಾರ್ಸ್ ಕ್ರಿಯೇಷನ್ ನಡಿ ತಯಾರಾಗುತ್ತಿದ್ದು ಆದರ್ಶ್ ಭಾರದ್ವಾಜ್, ಇಶಿತಾ ವರ್ಷ ನಾಯಕ-ನಾಯಕಿ ಪಾತ್ರ ಮಾಡುತ್ತಿದ್ದಾರೆ. ಸಾಧು ಕೋಕಿಲಾ, ರಮೇಶ್ ಭಟ್, ಸರಿಗಮ ವಿಜಿ, ಮಂದೀಪ್ ರಾಯ್, ಉಮೇಶ್, ರಾಮಚಂದ್ರ ಕೋಡಂಗೆ, ರಾಧಾ ರಾಮಚಂದ್ರ, ಸಪ್ನ ರಾಜ್, ಸ್ನೇಹಾ ಸಿಂಗ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದೊಂದು ಹಾಸ್ಯ ಪ್ರಧಾನ ಚಿತ್ರ ಎನ್ನುತ್ತಾರೆ.

ಚಿತ್ರಕ್ಕೆ ಬಿ ಜೆ ಭರತ್ ಸಂಗೀತ್, ವಿಜಯ್ ಪ್ರಕಾಶ್, ಅರ್ಮನ್ ಮಲಿಕ್, ಚೇತನ್ ನಾಯಕ್, ಮೋಹನ್ ಕೃಷ್ಣ ಹಾಡಲಿದ್ದಾರೆ. ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಜಯಂತ ಕಾಯ್ಕಿಣಿ ಮತ್ತು ಅಶ್ವಿನ್ ಕೊಡಂಗೆ ಅವರ ಸಾಹಿತ್ಯ ಸಂಗೀತಕ್ಕಿದೆ. ಗಿರಿ ಮಹೇಶ್ ಅವರ ಸಂಕಲನ, ರೌಶಮ್ ಕುಮಾರ್ ಝಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.