#MeToo: ಸ್ಯಾಂಡಲ್ ವುಡ್ ಹಿರಿಯ ನಟರ ಮೌನಕ್ಕೆ ಅಚ್ಚರಿ ವ್ಯಕ್ತಪಡಿಸಿದ ರಾಗಿಣಿ
ಸ್ಯಾಂಡಲ್ ವುಡ್ ನ ಯಾವ ಒಬ್ಬ ಹಿರಿಯ ನಟರೂ ಮಿ ಟೂ ಅಭಿಯಾನದ ಪರವಾಗಿ ಅಥವಾ...

Published On :
ಹುಬ್ಬಳ್ಳಿ: ಸ್ಯಾಂಡಲ್ ವುಡ್ ನ ಯಾವ ಒಬ್ಬ ಹಿರಿಯ ನಟರೂ ಮಿ ಟೂ ಅಭಿಯಾನದ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡದಿರುವುದು ನನಗೆ ಅಚ್ಚರಿ ಮೂಡಿಸಿದೆ ಎಂದು ನಟಿ ರಾಗಿಣಿ ದ್ವಿವೇದಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ತಮ್ಮ ಮುಂದಿನ ಚಿತ್ರ 'ದಿ ಟೆರರಿಸ್ಟ್' ಪ್ರಚಾರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಗಿಣಿ, ಮಿ ಟೂ ನಂತರ ಸ್ಯಾಂಡಲ್ ವುಡ್ ನಲ್ಲಿ ಇದುವರೆಗೆ ಕೇವಲ ಒಂದೇ ಒಂದು ಲೈಂಗಿಕ ಕಿರುಕುಳ ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ. ಸಮಯ ಬಂದಾಗ ಎಲ್ಲಾ ಹಿರಿಯ ನಟರೂ ಇದಕ್ಕೆ ಪ್ರತಿಕ್ರಿಯಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇದೇ ವೇಳೆ ಸಂಗೀತ ಭಟ್ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಗಿಣಿ, ಅಂತಹ ಕೆಟ್ಟ ಅನುಭವ ಯಾರಿಗೂ ಆಗಬಾರದು. ಯಾರಾದರೂ ನಮಗೆ ಕಿರುಕುಳ ನೀಡಿದರೆ ತಕ್ಷಣ ಮುಂದೆ ಬಂದು ಮಾತನಾಡಬೇಕು ಎಂದರು.
ಒಂದು ಒಳ್ಳೆಯ ಉದ್ದೇಶದಿಂದ ಮಿ ಟೂ ಅಭಿಯಾನ ಆರಂಭವಾಗಿದೆ. ಶೋಷಣೆಗೆ ಒಳಗಾದವರು ಮುಂದೆ ಬಂದು ಹೇಳಿಕೆ ನೀಡುತ್ತಿರುವುದು ನೋಡಿ ಖುಷಿಯಾಗುತ್ತಿದೆ. ಶೋಷಣೆಗೆ ಒಳಗಾದ ಎಲ್ಲರೂ ಇಂಥ ಧೈರ್ಯ ತೋರಿಸಲೇಬೇಕು. ಸಮಾಜದಲ್ಲಿ ಇದರಿಂದ ಒಂದು ಉತ್ತಮ ಬದಲಾವಣೆ ತರಲು ಸಾಧ್ಯ ಎಂದರು.
ನಾನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗುತ್ತಾ ಬಂದಿದ್ದು ಸದ್ಯ ನನಗೆ ಯಾವುದೇ ಅಂತಹ ಕೆಟ್ಟ ಅನುಭವ ಆಗಿಲ್ಲ. ನನಗೆ ನನ್ನದೇ ಆದ ಕೆಲಸದ ನಿಯಮಗಳಿವೆ. ಹಾಗಾಗಿ ಕೆಲಸ ಅಥವಾ ವೈಯಕ್ತಿಕ ಜೀವನಲ್ಲಿ ನಾನು ಯಾವುದೇ ಕಾರಣಕ್ಕೂ ಇಂತಹ ತೊಂದರೆಯನ್ನು ಫೇಸ್ ಮಾಡಲಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


