ಅಂತಿಮ ಹಂತದಲ್ಲಿ 'ನಟ ಸೌರ್ವಭೌಮ' ಶೂಟಿಂಗ್: ಪವನ್ ಒಡೆಯರ್ ಗೆ ನವೆಂಬರ್ 20 ಡೆಡ್ ಲೈನ್
ಪುನೀತ್ ನಟನೆಯ ನಟಸೌರ್ವಭೌಮ ಸಿನಿಮಾ ಶೂಟಿಂಗ್ ಶೀಘ್ರವೇ ಪೂರ್ಣಗೊಳಿಸಿ ನವೆಂಬರ್ 20 ರೊಳಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ...

Published On :
ಬೆಂಗಳೂರು: ಪುನೀತ್ ನಟನೆಯ ನಟಸೌರ್ವಭೌಮ ಸಿನಿಮಾ ಶೂಟಿಂಗ್ ಶೀಘ್ರವೇ ಪೂರ್ಣಗೊಳಿಸಿ ನವೆಂಬರ್ 20 ರೊಳಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ಚಿತ್ರದ ಮೊದಲ ಕಾಪಿ ನೀಡುವುದಾಗಿ ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.
ಕಳೆದ ವಾರ ಮೇಲುಕೋಟೆಯಲ್ಲಿ ಕ್ಲೈಮ್ಯಾಕ್ಸ್ ಫೈಟಿಂಗ್ ಪೂರ್ಣಗೊಂಡಿದೆ, ಇನ್ನೂ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಪರಮೇಶ್ವರನ್, ರಚಿತಾರಾಮ್. ಚಿಕ್ಕಣ್ಣ ಹಾಗೂ ರವಿಶಂಕರ್ ಸೇರಿದಂತೆ ಹಲವು ನಟಿಸಿದ್ದಾರೆ, ಡಿ. ಇಮ್ಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಉಳಿದ ಎರಡು ಹಾಡುಗಳ ಶೂಟಿಂಗ್ ಗಾಗಿ ಲೋಕೇಶನ್ ಇನ್ನೂ ಫೈನಲ್ ಆಗಿಲ್ಲ, ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೂಟಿಂಗ್ ಫೈನಲ್ ಆಗಿದೆ. ಹಾಡುಗಳ ಶೂಟಿಂಗ್ ಭಾರತ ಮತ್ತು ವಿದೇಶದಲ್ಲಿ ನಡೆಯಲಿದೆ, ಇದೊಂದು ಸಾಹಸ ಪ್ರಧಾನವಾದ ಮನರಂಜನೆಯ ಸಿನಿಮಾವಾಗಿದೆ, ಪವರ್ ಸ್ಟಾರ್ ಮತ್ತು ಪೀಟರ್ ಹೇನ್ ಸ್ಟಂಟ್ಸ್ ಚಿತ್ರದ ಹೈಲೈಟ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Puneeth RajkumarRockline Venkateshರಾಕ್ ಲೈನ್ ವೆಂಕಟೇಶ್ಪುನೀತ್ ರಾಜ್ ಕುಮಾರ್ಪವನ್ ಒಡೆಯರ್Pavan Wadeyarನಟಸಾರ್ವಭೌಮNatasarvabhouma
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


