ಸಿನಿಮಾ ಸುದ್ದಿ

ನಾನು ಕೂಡ ಈಗ ದಕ್ಷಿಣ ಭಾರತದ ನಾಯಕಿ: ಧನ್ಯ ಬಾಲಕೃಷ್ಣ

ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಧನ್ಯ ಬಾಲಕೃಷ್ಣ ಮೂಲತ ಬೆಂಗಳೂರಿನವರಾದ ಧನ್ಯ ಇದೀಗ ಮೊಟ್ಟ ಮೊದಲ ಬಾರಿಗೆ ಕನ್ನಡ ...

ನಾನು ಕೂಡ ಈಗ ದಕ್ಷಿಣ ಭಾರತದ ನಾಯಕಿ: ಧನ್ಯ ಬಾಲಕೃಷ್ಣ
ಧನ್ಯ ಬಾಲಕೃಷ್ಣ
Published On :
ಬೆಂಗಳೂರು: ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಧನ್ಯ ಬಾಲಕೃಷ್ಣ ಮೂಲತ ಬೆಂಗಳೂರಿನವರಾದ ಧನ್ಯ ಇದೀಗ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ರಿಷಿ ಜೊತೆ ಇನ್ನೂ ಟೈಟಲ್ ಇಡದ ಸಿನಿಮಾದಲ್ಲಿ  ನಟಿಸುತ್ತಿದ್ದಾರೆ.ಮಲಯಾಳಂ ಸ್ಟಾರ್‌‌ ನಿವೀನ್ ಪೌಲಿ  ಮತ್ತು ನಟನತಾರಾ ಸಿನಿಮಾದಲ್ಲಿ 2ನೇ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿರುವ ಧನ್ಯ ನಾಲ್ಕು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. 
ರಂಗಭೂಮಿ ಹಿನ್ನೆಲೆಯ ಧನ್ಯ ಮೊದಲಿಗೆ 2011 ರಲ್ಲಿ  ಎ.ಆರ್ ಮುರುಗದಾಸ್ ಅವರ ತಮಿಳು ಸಿನಿಮಾದಲ್ಲಿ ನಟಿಸಿದ್ದರು,ಆರು ವರ್ಷಗಳ ನಂತರ ಕನ್ನಡದಲ್ಲಿ ನಟಿಸುತ್ತಿದ್ದಾರೆ,
ಗಿರಿರಾಜ್ ಅವರ ವೆಬ್ ಸಿರೀಸ್ ನಲ್ಲಿ ಕೆಲಸ ಮಾಡಿರುವ ಧನ್ಯ, ಮೊದಲ ಬಾರಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ, ನನ್ನ ಮಾತ-ಭಾಷೆ ಕನ್ನಡವಾಗಿರುವುದರಿಂದ ಡೈಲಾಗ್ ಡೆಲಿವರಿ  ತುಂಬಾ ನೈಜವಾಗಿರುತ್ತದೆ  ಬೇರೆ ಭಾಷೆಗಳಿಗಿಂತ ಕನ್ನಡವೇ ನನಗೆ ಹೆಚ್ಚು ಇಷ್ಟ, 
ಸದ್ಯ ಹಲವು ಆಫರ್ ಗಳು ಧನ್ಯ ಬಳಿಯಿವೆ,  ತೆಲುಗಿನ ಮತ್ತೊಂದು ಸಿನಿಮಾದಲ್ಲಿ ಕೂಡ ಧನ್ಯ ನಟಿಸುತ್ತಿದ್ದಾರೆ, ಪ್ರಶಾಂತ್ ರೆಡ್ಡಿ ಮತ್ತು ದೇವರಾಜ್ ಆರ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ನವೆಂಬರ್ ಮೊದಲ ವಾರದಲ್ಲಿ ಶೂಟಿಂಗ್ ಆರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.