ಸಿನಿಮಾ ಸುದ್ದಿ

ಚೇತರಿಸಿಕೊಳ್ಳುತ್ತಿರುವ ದರ್ಶನ್: ಶೀಘ್ರವೇ ಯಜಮಾನ ಚಿತ್ರದ ಡಬ್ಬಿಂಗ್ ಆರಂಭ

:ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೊಂದು ಸಿಹಿ ಸುದ್ದಿ, ಅಪಘಾತವಾದ ನಂತರ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ದರ್ಶನ್ ತಾವು ಹಿಂದೆ ...

ಚೇತರಿಸಿಕೊಳ್ಳುತ್ತಿರುವ ದರ್ಶನ್: ಶೀಘ್ರವೇ ಯಜಮಾನ ಚಿತ್ರದ ಡಬ್ಬಿಂಗ್ ಆರಂಭ
ದರ್ಶನ್
Published On :
ಬೆಂಗಳೂರು:ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೊಂದು ಸಿಹಿ ಸುದ್ದಿ, ಅಪಘಾತವಾದ ನಂತರ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ದರ್ಶನ್ ತಾವು ಹಿಂದೆ ಮಾಡಿಕೊಂಡ ಕಮಿಟ್ ಮೆಂಟ್ ಗಳನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ.
ನಾನು ತುಂಬಾ ಚೆನ್ನಾಗಿದ್ದೇನೆ, ಕೇವಲ ಬ್ಯಾಂಡೇಜ್ ಮಾತ್ರ ಹಾಕಿಕೊಂಡಿದ್ದೇನೆ, ಇನ್ನು ಕೆಲವೇ ದಿನಗಳು ಮಾತ್ರ, ಹೊಲಿಗೆಗಳನ್ನು ತೆಗೆಯಲಾಗುತ್ತದೆ, ವೈದ್ಯರ ಸಲಹೆ ಮೇರೆಗೆ  ನಾನು ಮತ್ತೆ ಕೆಲಸ ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.
ಮೈಸೂರಿನಿಂದ ಕಾರ್ಯಕ್ರಮವೊಂದರಲ್ಲಿ ಪಾಲ್ಗೋಳ್ಳಲು ರಾಕ್ ಲೈನ್ ವೆಂಕಟೇಶ್ ಜೊತೆ ಚಿತ್ರದುರ್ಗಕ್ಕೆ ತೆರಳಿದ್ದಾರೆ. ಹೀಗಾಗಿ ಬಾಕಿ ಉಳಿದಿರುವ ಕೆಲಸ ಮಗಿಸಲು ಮುಂದಾಗಿದ್ದಾರೆ, ಯಜಮಾನ ಚಿತ್ರದ ಡಬ್ಬಿಂಗ್ ನಲ್ಲಿ ಮುಂದಿನ ವಾರ ಭಾಗಿಯಾಗಲಿದ್ದಾರೆ, ಅಕ್ಟೋಬರ್ 20 ರಂದು ಒಂದು ಹಾಡಿನ ಚಿತ್ರೀಕರಣಕ್ಕಾಗಿ ದಿನಾಂಕ ನಿಗದಿ ಪಡಿಸಲಾಗಿತ್ತು, ಹೀಗಾಗಿ ನವೆಂಬರ್ 20 ರಂದು ಡೇಟ್ ಫಿಕ್ಸ್ ಮಾಡಲಾಗಿದೆ.
ಶೈಲಜಾ ನಾಗ್ ಮತ್ತು ಬಿ, ಸುರೇಶ್ ನಿರ್ಮಾಣದ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಇನ್ನು 2 ಹಾಡುಗಳು ಬಾಕಿಯಿವೆ. ಇತ್ತೀಚೆಗೆ ನಡೆದ ಅಪಘಾತದಲ್ಲಿ ದರ್ಶನ್ ಬಲಗೈ ಮೂಳೆ ಮುರಿದು ಗಾಯಗೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.