ಸಿನಿಮಾ ಸುದ್ದಿ

ಶಿವಣ್ಣನ 'ರುಸ್ತುಮ್' ತಂಡ ಬಿಹಾರಕ್ಕೆ ತೆರಳಲು ಸಜ್ಜು

ಒನ್ ಬಿಗ್ ಹ್ಯಾಪಿ ಆಂಡ್ ನಾಟಿ ಫ್ಯಾಮಿಲಿ"- "ರುಸ್ತುಮ್" ಚುಇತ್ರದ ಮೂಲಕ ನಿರ್ದೇಶಕರ ಕ್ಯಾಪ್ ಧರಿಸುತ್ತಿರುವ ಸಾಹಸ ನಿರ್ದೇಶಕ ರವಿ ವರ್ಮಾ ತಮ್ಮ ಚಿತ್ರತಂಡದ ಕುರಿತಂತೆ ಟ್ವೀಟ್....

ಶಿವಣ್ಣನ 'ರುಸ್ತುಮ್' ತಂಡ ಬಿಹಾರಕ್ಕೆ ತೆರಳಲು ಸಜ್ಜು
ಬಿಹಾರದತ್ತ ತೆರಳಲು ಸಜ್ಜಾದ ಶಿವಣ್ಣನ 'ರುಸ್ತುಮ್' ತಂಡ
Published On :
ಬೆಂಗಳೂರು: "ಒನ್ ಬಿಗ್ ಹ್ಯಾಪಿ ಆಂಡ್ ನಾಟಿ ಫ್ಯಾಮಿಲಿ"- "ರುಸ್ತುಮ್" ಚುಇತ್ರದ ಮೂಲಕ ನಿರ್ದೇಶಕರ ಕ್ಯಾಪ್ ಧರಿಸುತ್ತಿರುವ ಸಾಹಸ ನಿರ್ದೇಶಕ ರವಿ ವರ್ಮಾ ತಮ್ಮ ಚಿತ್ರತಂಡದ ಕುರಿತಂತೆ ಟ್ವೀಟ್ ಮಾಡಿಕೊಂಡದ್ದು ಹೀಗೆ.
ಬಾಲಿವುಡ್ ನಟ ವಿವೇಕ್ ಒಬೆರಾಯ್ ಇದೀಊಗ ರುಸ್ತುಮ್ ತಂಡ ಸೇರಿಕೊಂಡಿದ್ದು ಬೆಂಗಳೂರು ದೇವನಹಳ್ಳಿ ಮನೆಯ ಸಮೀಪ ಚಿತ್ರೀಕರಣದಲ್ಲಿ ಭಾಗವಹಿಸಿದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್, ರಚಿತಾರಾಮ್, ಶ್ರದ್ದಾ ಶ್ರೀನಾಥ್, ಮಯೂರಿಯಂತಹಾ ನಾಯಕ, ನಾಯಕಿಯರ ದೊಡ್ಡ ತಾರಾ ಬಳಗವೇ ಇದೆ.
ನಿರ್ದೇಶಕರು ಹೇಳಿದಂತೆ ಇದಾಗಲೇ ಚಿತ್ರದ 75 ಬಾಗ ಶೂಟಿಂಗ್ ಮುಗಿದಿದೆ. ಇನ್ನು ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ ಚಿತ್ರೀಕರಣ ಪೂರ್ಣವಾಗಲಿದ್ದು ಬಳಿಕ ಚಿತ್ರತಂಡ ಬಿಹಾರಕ್ಕೆ ತೆರಳಲಿದೆ. ಅಲ್ಲಿ ಸುಮಾರು ಆರರಿಂದ ಏಳು ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆ ಇದೆ.
ಇದಕ್ಕೆ ಮುನ್ನ ತಮ್ಮ ಟ್ವೀಟ್ ನಲ್ಲಿ ನಿರ್ದೇಶಕರು  ಬಿಗ್ ಬ್ಯಾಡ್ ಸ್ಮೈಲಿಂಗ್ ವಿಲಿಯನ್ಸ್ ಆಫ್ ರುಸ್ತುಂ ಎಂದು ರುಸ್ತುಂ ಚಿತ್ರದ ಪಾತ್ರಧಾರಿಗಳು, ತಂಡದ ಸದಸ್ಯರ ಪರಿಚ್ವಯ ಮಾಡಿಸುತ್ತಾರೆ.ಶತ್ರು ತೆಲುಗು ಸಿನಿಮಾ ಖ್ಯಾತಿಯ ಛಾಯಾಗ್ರಾಹಕ ಮಹೇಂದ್ರ ಸಿಂಹ, ಬಾಲಿವುಡ್ ನ ಗಣೇಶ್ ಯಾದವ್, ತಮಿಳಿನ ಮಹೇಂದ್ರನ್, ಪ್ರಖ್ಯಾತ ನಟ, ನಿರ್ದೇಶಕ ಶಿವಮಣಿ, ಹರೀಶ್ ಉತ್ತಮನ್ ಸ್ರಿ ಹಲವರ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ.
ಜಯಣ್ಣ ನಿರ್ಮಾಣ ಸಂಸ್ಥೆಯಡಿಯಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಪೋಲೀಸ್ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ಚಿತ್ರಕ್ಕೆ ಅನೂಪ್ ಸೀಳನ್ ಸಂಗೀತವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.