'ಸೀತಾರಾಮ ಕಲ್ಯಾಣ'ದಲ್ಲಿ ಅತ್ಯುತ್ತಮ ತಾರಾಗಣ: ನಿರ್ದೇಶಕ ಹರ್ಷ
ಸೀತಾರಾಮ ಕಲ್ಯಾಣದಲ್ಲಿ ಅತ್ಯುತ್ತಮ ತಾರಾಗಣವಿದೆ. ನಾಯಕ ನಟರಾಗಿ ನಿಖಿಲ್ ಕುಮಾರ್ , ನಟಿಯಾಗಿ ರಚಿತಾ ರಾಮ್ ಜೊತೆಗೆ ಎಲ್ಲಾ ಕಲಾವಿದರೂ ಉತ್ತಮವಾಗಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕ ಹರ್ಷ ತಿಳಿಸಿದ್ದಾರೆ

ಬಾಲಿವುಡ್ ನಟರಾದ ಸಂಜಯ್ ಕಪೂರ್ ಹಾಗೂ ಭಾಗ್ಯಶ್ರೀ ಅಭಿನಯದ ಕೊನೆಯ ಶಾಟ್ ತೆಗೆದುಕೊಳ್ಳುವ ಮೂಲಕ ಸೀತಾರಾಮ ಕಲ್ಯಾಣದ ಮಾತಿನ ಭಾಗದ ಚಿತ್ರೀಕರಣವನ್ನು ನಿರ್ದೇಶಕ ಹರ್ಷ ಪೂರ್ಣಗೊಳಿಸಿದ್ದಾರೆ. ಸಂಜಯ್ ಕಪೂರ್ ಮತ್ತು ಭಾಗ್ಯಶ್ರೀ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸೀತಾರಾಮ ಕಲ್ಯಾಣ ಸಂಜಯ್ ಕಪೂರ್ ಅವರಿಗೆ ಮೊದಲ ಸಿನಿಮಾವಾಗಿದ್ದರೆ, ಭಾಗ್ಯಶ್ರೀ ಅವರಿಗೆ ಅಮ್ಮಾವ್ರ ಗಂಡ ನಂತರ ಎರಡನೇ ಕನ್ನಡ ಸಿನಿಮಾವಾಗಿದೆ. ದಕ್ಷಿಣ ಭಾರತದ ಖ್ಯಾತ ನಟ ಶರತ್ ಕುಮಾರ್ ಹಾಗೂ ಮಧೂ ಕೂಡಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗ ನಿರ್ದೇಶಕರು ಬೆಂಗಳೂರಿನಲ್ಲಿ ಎರಡು ಹಾಡುಗಳ ಚಿತ್ರೀಕರಣ ಮಾಡಲಿದ್ದಾರೆ.
ದಿ ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹರ್ಷ , ಸೀತಾರಾಮ ಕಲ್ಯಾಣದಲ್ಲಿ ಅತ್ಯುತ್ತಮ ತಾರಾಗಣವಿದೆ. ನಾಯಕ ನಟರಾಗಿ ನಿಖಿಲ್ ಕುಮಾರ್ , ನಟಿಯಾಗಿ ರಚಿತಾ ರಾಮ್ ಜೊತೆಗೆ ಎಲ್ಲಾ ಕಲಾವಿದರೂ ಉತ್ತಮವಾಗಿ ಅಭಿನಯಿಸಿದ್ದಾರೆ. ಪ್ರತಿಯೊಬ್ಬರು ಪಾತ್ರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ಅಭಿಯಸಿದ್ದಾರೆ ಎಂದು ಹೇಳಿದರು.
ವಿಶೇಷವಾಗಿ ನಾಯಕ ನಿಖಿಲ್ ಕುಮಾರ್ ಅವರ ಪಾತ್ರ ಭಿನ್ನವಾಗಿದೆ. ಪ್ರಬುದ್ಧ ನಟರಂತೆ ಅಭಿನಯಿಸಿದ್ದಾರೆ ಎಂದು ಹೇಳುವ ಹರ್ಷ, ಪ್ರೀತಿ, ಕುಟುಂಬ, ಮತ್ತು ಜನರ ದೃಷ್ಟಿಯಲ್ಲಿ ಯಾವ ರೀತಿ ಇರಬೇಕೋ ಹಾಗೆಯೇ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೀತಾರಾಮ ಕಲ್ಯಾಣದಲ್ಲಿ ಹಾಡುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದ್ದು, ಮೂರು ಗೀತೆಗಳಿದ್ದು, ಯಾವುದೇ ಡ್ಯೂಯಟ್ ಹಾಡು ಇರಲ್ಲ. ಗೀತೆಗಳು ಇಂಪಾಗಿರಲಿವೆ. ನವೆಂಬರ್ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡುವುದಾಗಿ ತಿಳಿಸಿದರು . ಈ ಚಿತ್ರಕ್ಕೆ ಅನೂಪ್ ರೂಬೆನ್ಸ್ ಸಂಗೀತ ಸಂಯೋಜಿಸುತ್ತಿದ್ದು, ಜೆ ಸ್ವಾಮಿ ಅವರ ಛಾಯಾಗ್ರಾಹಣವಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


