ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್: ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ
ಕಳೆದ ಒಂದು ತಿಂಗಳಿನಿಂದ ಹರಿದಾಡುತ್ತಿದ್ದ ಸ್ಯಾಂಡಲ್ ವುಡ್ ನ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ...

ಕಳೆದ ಒಂದು ತಿಂಗಳಿನಿಂದ ಹರಿದಾಡುತ್ತಿದ್ದ ಸ್ಯಾಂಡಲ್ ವುಡ್ ನ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಬ್ರೇಕಪ್ ಆದ ವಿಷಯ ಮತ್ತೆ ಸುದ್ದಿಯಾಗಿದೆ. ಕೊನೆಗೂ ಅದಕ್ಕೆ ಫುಲ್ ಸ್ಟಾಪ್ ಕೊಡುವ ಹಂತ ಬಂದಿದೆ. ಈ ಬಗ್ಗೆ ಸ್ವತಃ ನಟಿ ರಶ್ಮಿಕಾ ಮಂದಣ್ಣ ತೆಲುಗು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಸುದ್ದಿ ನಿನ್ನೆಯಿಂದ ಹರಿದಾಡುತ್ತಿದೆ.
ತೆಲುಗು ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ತನ್ನ ಪ್ರೀತಿ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. "ಅಪ್ಪ ಅಮ್ಮನ ಜತೆಗೆ ನನಗೆ ಬಹಳ ಸಲುಗೆಯಿಂದ ಇರುತ್ತೇನೆ. ನನ್ನ ಬಗ್ಗೆ ಅವರಿಗೆ ನಂಬಿಕೆಯಿದೆ. ನಾನು ಅಮ್ಮನ ಜೊತೆ ಬಹಳ ಫ್ರೆಂಡ್ಲಿಯಾಗಿ ಇರುತ್ತೇನೆ. ನನ್ನ ಮನಸ್ಸಿನ ಏನೇ ಭಾವನೆಗಳನ್ನು ನಾನು ಮೊದಲು ಹಂಚಿಕೊಳ್ಳುವುದು ಅಮ್ಮನಲ್ಲಿಯೇ. ಎಲ್ಲರಿಗೂ ಬಾಯ್‌ಫ್ರೆಂಡ್ಸ್ ಇರುತ್ತಾರೆ. ನನಗ್ಯಾಕೆ ಇಲ್ಲಮ್ಮಾ. ನನಗೂ ಬಾಯ್‍ಫ್ರೆಂಡ್ ಬೇಕು" ಎಂದು ಅಮ್ಮನನ್ನು ಬಹಳಷ್ಟು ಸಲ ಕೇಳಿದ್ದೇನೆ.
ಯಾರಾದರೂ ಹುಡುಗ ಕಂಡರೆ ಈ ಹುಡುಗ ಚೆನ್ನಾಗಿದ್ದಾನೆ, ಆ ಹುಡುಗ ಚೆನ್ನಾಗಿದ್ದಾನೆ ಎಂದು ಸಾಕಷ್ಟು ಮಂದಿಯನ್ನು ತೋರಿಸುತ್ತಿದ್ದೆ. ಅಮ್ಮನೂ ತಮಾಷೆಯಾಗಿಯೇ ತೆಗೆದುಕೊಳ್ಳುತ್ತಿದ್ದರು. ಕಿರಿಕ್ ಪಾರ್ಟಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ನಟ ರಕ್ಷಿತ್ ಶೆಟ್ಟಿ ಬಗ್ಗೆ ಅಭಿಮಾನ ಉಂಟಾಯಿತು. ಮುಂದೆ ಸ್ನೇಹಿತರಾದೆವು, ನಂತರ ಅದು ಪ್ರೀತಿಯಾಗಿ ಬದಲಾಯಿತು. ಅಪ್ಪ-ಅಮ್ಮನಿಗೆ ಜೀವನದಲ್ಲಿ ಅನುಭವವಿರುತ್ತದೆ, ನಮಗೆ ಈ ವಯಸ್ಸಿನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ, ಯಾಕೆಂದರೆ ಆ ವಯಸ್ಸಲ್ಲಿ ನಮ್ಮ ಕಣ್ಣಿಗೆ ಎಲ್ಲರೂ ಒಳ್ಳೆಯವರಾಗಿಯೇ ಕಾಣಿಸುತ್ತಾರೆ. ಆದರೆ ಅಪ್ಪ ಅಮ್ಮ ಮಾತ್ರ ನಮಗೆ ಯಾವುದು ಒಳ್ಳೆಯದು ಎಂದು ಆಲೋಚಿಸುತ್ತಾರೆ ಎಂದು ರಕ್ಷಿತ್ ಶೆಟ್ಟಿ ಜೊತೆಗಿನ ಸಂಬಂಧ ವಿಷಯವನ್ನು ಮೊದಲು ಅಮ್ಮನ ಬಳಿ ಹೇಳಿದ್ದೆ, "ನಾನು ತೆಗೆದುಕೊಂಡ ನಿರ್ಧಾರ ಸರಿಯೇ ಎಂದು ಕೇಳಿದೆ. ಆಗ ಅಮ್ಮ ನನ್ನ ಅಭಿಪ್ರಾಯಕ್ಕೆ ಬೆಲೆ ಕೊಟ್ಟು ನಿನ್ನಿಷ್ಟದಂತೆಯೇ ಆಗಲಿ ಎಂದರು.
ಆದರೆ ನಮ್ಮ ಸಂಬಂಧ ನಿಶ್ಚಿತಾರ್ಥದ ನಂತರ ಸರಿಹೋಗಲಿಲ್ಲ, ಭಿನ್ನಾಭಿಪ್ರಾಯಗಳು ಬರಲಾರಂಭಿಸಿದವು. ಒಂದು ಸಂಬಂಧ ಚೆನ್ನಾಗಿ ಹೋಗುವುದಿಲ್ಲ ಎಂದು ಗೊತ್ತಾದ ತಕ್ಷಣ ಅದನ್ನು ಮುರಿಯುವುದು ಒಳ್ಳೆಯದು, ಇಲ್ಲದಿದ್ದರೆ ಭವಿಷ್ಯದಲ್ಲಿ ತುಂಬಾ ಕಷ್ಟವಾಗುತ್ತದೆ ಎಂದು ಅನಿಸಿತು ಎಂದು ರಶ್ಮಿಕಾ ಹೇಳಿದ್ದಾರೆ.
ಈ ಘಟನೆ ಬಳಿಕವೂ ರಶ್ಮಿಕಾಗೆ ಪ್ರೀತಿ ಮೇಲೆ ನಂಬಿಕೆ ಹೊರಟು ಹೋಗಿಲ್ಲವಂತೆ. ಪ್ರೀತಿಯ ಬಗ್ಗೆ ನನ್ನ ನಂಬಿಕೆ ಬದಲಾಗಿಲ್ಲ. ಪ್ರೀತಿ ದೊಡ್ಡದು. ಅದು ನೋಡುವ ಕಣ್ಣುಗಳನ್ನು, ಅನುಭವಿಸುವವರನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ ಕಿರಿಕ್ ಪಾರ್ಟಿಯ ಈ ಚೆಲುವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


