ಸಿನಿಮಾ ಸುದ್ದಿ

ಸೂಪರ್ ಡಿಲಕ್ಸ್ ನಲ್ಲಿ ಶಿಲ್ಪ ಆಗಿರುವ ವಿಜಯ್ ಸೇತುಪತಿ ಫಸ್ಟ್ ಲುಕ್ ಬಿಡುಗಡೆ

ತಮಿಳು ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಪ್ರಸಿದ್ಧಿಪಡೆದಿರುವ ವಿಜಯ್ ಸೇತುಪತಿ ಅವರ ಸೂಪರ್ ಡಿಲಕ್ಸ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಸೂಪರ್ ಡಿಲಕ್ಸ್ ನಲ್ಲಿ ಶಿಲ್ಪ ಆಗಿರುವ ವಿಜಯ್ ಸೇತುಪತಿ ಫಸ್ಟ್ ಲುಕ್ ಬಿಡುಗಡೆ
ಸೂಪರ್ ಡಿಲಕ್ಸ್ ನಲ್ಲಿ ಶಿಲ್ಪ ಆಗಿರುವ ವಿಜಯ್ ಸೇತುಪತಿ ಫಸ್ಟ್ ಲುಕ್ ಬಿಡುಗಡೆ
Published On :
ತಮಿಳು ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಪ್ರಸಿದ್ಧಿಪಡೆದಿರುವ ವಿಜಯ್ ಸೇತುಪತಿ ಅವರ ಸೂಪರ್ ಡಿಲಕ್ಸ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. 
ಚಿತ್ರದಲ್ಲಿ ಲಿಂಗಾಂತರಗೊಂಡ (ಮಹಿಳೆಯ ಪಾತ್ರ) ಪಾತ್ರದಲ್ಲಿ ಅಭಿನಯಿಸಿರುವ ವಿಜಯ್ ಸೇತುಪತಿ. ತಮ್ಮ ಪಾತ್ರ ಶಿಲ್ಪಾ ಬಗ್ಗೆ ಮಾತನಾಡಿದ್ದು, ತಮಗೆ ಅತ್ಯಂತ ಪ್ರಮುಖವಾದ ಪಾತ್ರ ಎಂದು ಹೇಳಿದ್ದಾರೆ. ಚಿತ್ರಕಥೆ ಬಗ್ಗೆ ಕಾಮರಾಜ ಅವರು ಹೇಳಿದ್ದಾಗ ನಾನು "ನನಗೆ ಸಂಭಾವನೆ ಎಷ್ಟು ಕೊಡಬೇಕೆನಿಸುತ್ತದೋ ಅಷ್ಟು ಕೊಡಿ ಆದರೆ ಈ ಪಾತ್ರವನ್ನು ಮಾತ್ರ ನನಗೇ ಕೊಡಬೇಕು" ಎಂದು ಕೇಳಿದ್ದೆ ಎಂದಿದ್ದಾರೆ. 
ಚಿತ್ರದ ನಟನೆ ವೇಳೆ ನನ್ನಲ್ಲಿದ್ದ ಸ್ತ್ರೀ ಸಹಜಗುಣದ ಪರಿಚಯವಾಯಿತು. ಮಹಿಳೆಯಾಗಿ ಹುಟ್ಟುವುದು ವರ ಎಂದೆನಿಸಿತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದೇ ವೇಳೆ ಲಿಂಗಾತರಗೊಂಡವರು ಎದುರಿಸುವ ಸಮಸ್ಯೆಗಳ ಬಗ್ಗೆಯೂ ಮಾತನಾಡಿರುವ ವಿಜಯ್ ಸೇತುಪತಿ, ಪ್ರತಿಯೊಬ್ಬರಿಗೂ ಲಿಂಗಾಂತರಿಗಳಾಗುವುದು ಅವರ ತಪ್ಪಲ್ಲ ಎಂದು ತಿಳಿದಿರುತ್ತದೆ ಆದರೆ ಎಲ್ಲರೂ ಅವರನ್ನು ಸಮಾಜದಿಂದ ದೂರ ಇರಿಸುತ್ತಾರೆ ಎಂದು ವಿಜಯ್ ಸೇತುಪತಿ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.