ಮಾರ್ಷಲ್ ಆರ್ಟ್ಸ್ ಪ್ರವೀಣ 'ಚೀತಾ ಯಜ್ಞೇಶ್ ಶೆಟ್ಟಿ' ಹಾಲಿವುಡ್ ಗೆ ಎಂಟ್ರಿ!
ಮಾರ್ಷಲ್ ಆರ್ಟ್ ಮೂಲಕ ಹೆಸರು ಮಾಡಿರುವ, ಬಾಲಿವುಡ್‌ನಲ್ಲಿ ಹಲವು ಚಿತ್ರ ಮಾಡಿರುವ ಖ್ಯಾತ ಸಿನಿಮಾ ನಿರ್ದೇಶಕ, ಮೂಲತಃ ಕಾರ್ಕಳ ನಿವಾಸಿ ಚೀತಾ ...

Published On :
ಮಂಗಳೂರು: ಮಾರ್ಷಲ್ ಆರ್ಟ್ ಮೂಲಕ ಹೆಸರು ಮಾಡಿರುವ, ಬಾಲಿವುಡ್‌ನಲ್ಲಿ ಹಲವು ಚಿತ್ರ ಮಾಡಿರುವ ಖ್ಯಾತ ಸಿನಿಮಾ ನಿರ್ದೇಶಕ, ಮೂಲತಃ ಕಾರ್ಕಳ ನಿವಾಸಿ ಚೀತಾ ಯಜ್ಞೇಶ್ ಶೆಟ್ಟಿ ಹಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ.
ಹಾಲಿವುಡ್‌ನಲ್ಲಿ ಸುಮಾರು 100ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹಿ ಇಸ್ ಬ್ಯಾಕ್ ಸಿನಿಮಾವನ್ನು ಯಜ್ಞೇಶ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ., ಹಾಲಿವುಡ್ ನಟ ಬ್ರೂಸ್ಲಿ ಪ್ರೇರಣೆಯಿಂದ ಬದಲಾಗುವ ಯುವಕನೊಬ್ಬನ ಕತೆಯಾಧಾರಿತವಾಗಿ ‘ಹಿ ಈಸ್ ಬ್ಯಾಕ್’ ಚಿತ್ರ ರೂಪುಗೊಳ್ಳಲಿದೆ.
ಫೆಬ್ರವರಿಯಲ್ಲಿ ಶೂಟಿಂಗ್ ಆರಂಭಿಸಲಿರುವ ಚಿತ್ರ ಮುಂದಿನ ವರ್ಷಾಂತ್ಯಕ್ಕೆ ಜಗತ್ತಿನಾದ್ಯಂತ ತೆರೆಕಾಣುವ ನಿರೀಕ್ಷೆಯಿದೆ. ಥಾಯ್ಲೆಂಡ್, ರಷ್ಯಾ, ಯುಎಸ್‌ಎಯಲ್ಲಿ ಶೂಟಿಂಗ್ ನಡೆಯಲಿದೆ.
ಹಾಲಿವುಡ್ ಸಿನಿಮಾ ಮಾಡಬೇಕು ಎಂಬ ತುಡಿತವಿತ್ತು. ಅದು ಈ ಚಿತ್ರದೊಂದಿಗೆ ಸಾಕಾರಗೊಳ್ಳುತ್ತಿದ್ದು, ಚಿತ್ರ ಚೀನಾ ಸಹಿತ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಅಫಘಾನಿಸ್ತಾನದ ಅಬ್ಬಾಸ್ ಆಲಿಝಾದಾ ಬ್ರೂಸ್ಲಿ ರೀತಿ ಅಭಿನಯಿಸಲಿದ್ದು, ರಷ್ಯಾದ ಪ್ರಖ್ಯಾತ ಮನೆತನದವರ ಪುತ್ರಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ದುಬೈ ಬುರ್ಜ್ ಖಲೀಫಾದಲ್ಲಿ ನೆರವೇರಿದ್ದು, ಡಾ.ಬಿ.ಆರ್.ಶೆಟ್ಟಿ, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Hollywoodಹಾಲಿವುಡ್martial artsಮಾರ್ಷಲ್ ಆರ್ಟ್ಸ್Chitah Yajnesh ShettyHe is Backಚೀತಾ ಯಜ್ಞೇಶ್ ಶೆಟ್ಟಿಹಿ ಇಸ್ ಬ್ಯಾಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


