ಕಿಚ್ಚ ಸುದೀಪ್-ದರ್ಶನ್ ಮಧ್ಯೆ 'ಮದಕರಿ ನಾಯಕ'ನ ಕಿಚ್ಚು, ಮೀಸೆ ತಿರುವಿದ ನಾಯಕರು!
ಸ್ಯಾಂಡಲ್ವುಡ್ ನ ದೋಸ್ತ್ ಗಳಾದ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯೆ ಮದಕರಿ ನಾಯಕ ಚಿತ್ರ ಮತ್ತೊಮ್ಮೆ ಸ್ಟಾರ್ ವಾರ್ ಗೆ ವೇದಿಕೆಯಾಗಿದೆ...

Published On :
ಬೆಂಗಳೂರು: ಸ್ಯಾಂಡಲ್ವುಡ್ ನ ದೋಸ್ತ್ ಗಳಾದ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯೆ ಮದಕರಿ ನಾಯಕ ಚಿತ್ರ ಮತ್ತೊಮ್ಮೆ ಸ್ಟಾರ್ ವಾರ್ ಗೆ ವೇದಿಕೆಯಾಗಿದೆ.
ಸದ್ಯ ಕಿಚ್ಚ ಸುದೀಪ್ ಹಾಗೂ ದರ್ಶನ್ ಒಬ್ಬರಿಗೊಬ್ಬರು ಮುಖ ನೋಡದಷ್ಟು ಬದ್ಧ ವೈರಿಗಳಾಗಿದ್ದು ಅದಕ್ಕೆ ಮದಕರಿ ನಾಯಕ ಚಿತ್ರ ಮತ್ತಷ್ಟು ತುಪ್ಪ ಸುರಿಯುವ ಸಾಧ್ಯತೆಗಳಿವೆ.
ಸ್ಯಾಂಡಲ್ವುಡ್ ನ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈಗಾಗಲೇ ಗಂಡುಗಲಿ ಮದಕರಿ ನಾಯಕ ಚಿತ್ರವನ್ನು ದರ್ಶನ್ ಗಾಗಿ ಮಾಡುವುದು ಪ್ರಕಟಿಸಿದ್ದಾರೆ. ಹೀಗಿರುವಾಗ ನಟ ಸುದೀಪ್ ಕೂಡ ಮದಕರಿ ನಾಯಕ ಚಿತ್ರದಲ್ಲಿ ನಟಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮದಕರಿ ನಾಯಕ ಇಬ್ಬರು ನಾಯಕರ ನಡುವಿನ ಕಲಹಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವ ಕಿಚ್ಚ ಸುದೀಪ್, ಮದಕರಿ ನಾಯಕ ಚಿತ್ರದಲ್ಲಿ ನಟಿಸಬೇಕೆನ್ನುವುದು ನನ್ನ ಬಹುದಿನಗಳ ಕನಸು. ಈ ಚಿತ್ರದಲ್ಲಿ ನಟಿಸಲು ನಾನು ಉತ್ಸುಕ ಮತ್ತು ಆಸಕ್ತಿಯಿಂದ ಇದ್ದೇನೆ. ಒಂದೇ ಕಥೆಯಲ್ಲಿ ಎರಡು ಚಿತ್ರ ಮಾಡಬಾರದು ಎಂದೇನೂ ಇಲ್ಲ ಎನ್ನುವ ಮೂಲಕ ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದಾರೆ.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಗಂಡುಗಲಿ ಮದಕರಿ ನಾಯಕ ಚಿತ್ರವನ್ನು ನಿರ್ಮಿಸಲು ರಾಕ್ ಲೈನ್ ವೆಂಕಟೇಶ್ ಮುಂದಾಗಿದ್ದಾರೆ. ಈ ಬೆನ್ನಲ್ಲೇ ಸುದೀಪ್ ಅವರು ಮದಕರಿ ನಾಯಕನ ಜೀವನ ಕುರಿತ ಚಿತ್ರದಲ್ಲಿ ನಟಿಸಲು ಮುಂದಾಗಿದ್ದು ಅದಕ್ಕೆ ದುರ್ಗದ ಹುಲಿ ಇಲ್ಲವೆ, ನಾಯಕ ಎಂದು ಹೆಸರಿಡಲು ನಿರ್ಧರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


