ಸಿನಿಮಾ ಸುದ್ದಿ

'ದಾರಿ ತಪ್ಪಿಸು ದೇವರೇ' ಸಿನಿಮಾದಲ್ಲಿ ಶೃತಿ ಹರಿಹರನ್ ಬದಲಿಗೆ ರಾಶಿ ಮಹಾದೇವ್

ಬಿಎಸ್ ಲಿಂಗದೇವರು ನಿರ್ದೇಶನದ ದಾರಿ ತಪ್ಪಿಸು ದೇವರೇ ಸಿನಿಮಾದಲ್ಲಿ ಶೃತಿ ಹರಿಹರನ್ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಆದರೆ ಸದ್ಯ ಶೃತಿ ...

'ದಾರಿ ತಪ್ಪಿಸು ದೇವರೇ' ಸಿನಿಮಾದಲ್ಲಿ ಶೃತಿ ಹರಿಹರನ್ ಬದಲಿಗೆ ರಾಶಿ ಮಹಾದೇವ್
ರಾಶಿ ಮಹಾದೇವ್
Published On :
ಬೆಂಗಳೂರು: ಬಿಎಸ್ ಲಿಂಗದೇವರು ನಿರ್ದೇಶನದ ದಾರಿ ತಪ್ಪಿಸು ದೇವರೇ ಸಿನಿಮಾದಲ್ಲಿ ಶೃತಿ ಹರಿಹರನ್ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಆದರೆ ಸದ್ಯ ಶೃತಿ ಬದಲು ರಾಶಿ ಮಹದೇವ್ ನಟಿಸುತ್ತಿದ್ದಾರೆ ಎಂದು ನಿರ್ದೇಶಕರೇ ತಿಳಿಸಿದ್ದಾರೆ.
ರಾಶಿ, ಈ ಹಿಂದೆ ವಿಜಯ್ ರಾಘವೇಂದ್ರ ನಟನೆಯ ಪರದೇಶಿ c/o ಲಂಡನ್ ಸಿನಿಮಾದಲ್ಲಿ ನಟಿಸಿದ್ದು, ಇದು ಆಕೆಯ ಎರಡನೇ ಸಿನಿಮಾವಾಗಿದೆ, ನಾಯಕಿ ಆಯ್ಕೆಯನ್ನು ನಿರ್ಮಾಪಕರು ಫೈನಲ್ ಮಾಡಿದ್ದಾರೆ, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ,
ನವೆಂಬರ್ ನಲ್ಲಿ ಸಿನಿಮಾ ಆರಂಭಿಸುವ ಯೋಜನೆ ಇತ್ತು, ಆದರೆ ಕಾರಣಾಂತರಗಳಿಂದ ಶೂಟಿಂಗ್ ಮುಂದೂಡಲಾಗಿದೆ, ಸಿನಿಮಾದಲ್ಲಿ ರಾಶಿ ಮಲೆನಾಡಿನ ಮಾರ್ಡನ್ ಯುವತಿ ಪಾತ್ರದಲ್ಲಿ ನಟಿಸಿದ್ದಾರೆ, ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ, ಚಿಕ್ಕಮಗಳೂರು, ಕಾರ್ಕಳ, ತೀರ್ಥಹಳ್ಳಿ ಸುತ್ತಮುತ್ತ ಶೂಟಿಂಗ್ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.