ಸಿನಿಮಾ ಸುದ್ದಿ

#Metoo: ಬಾಲಿವುಡ್ 'ಸಂಸ್ಕಾರಿ ಬಾಬೂಜಿ' ನಟ ಅಲೋಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಬಾಲಿವುಡ್ ನಲ್ಲಿ ಅತ್ಯಂತ ಸಭ್ಯ ಹಾಗೂ ಸಂಸ್ಕಾರಿ ನಟ ಎಂದೇ ಖ್ಯಾತಿಪಡೆದಿರುವ ಅಲೋಕ್ ನಾಥ್ ವಿರುದ್ಧ ಐಸಿಪಿ ಸೆಕ್ಷನ್ 376ರ ಅಡಿಯಲ್ಲಿ ಮುಂಬೈ ಪೊಲೀಸರು ಅತ್ಯಾಚಾರ ಪ್ರಕರಣವೊಂದನ್ನು ಬುಧವಾರ ದಾಖಲಿಸಿದ್ದಾರೆ...

#Metoo: ಬಾಲಿವುಡ್ 'ಸಂಸ್ಕಾರಿ ಬಾಬೂಜಿ' ನಟ ಅಲೋಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಅಲೋಕ್ ನಾಥ್
Published On :
ಮುಂಬೈ: ಬಾಲಿವುಡ್ ನಲ್ಲಿ ಅತ್ಯಂತ ಸಭ್ಯ ಹಾಗೂ ಸಂಸ್ಕಾರಿ ನಟ ಎಂದೇ ಖ್ಯಾತಿಪಡೆದಿರುವ ಅಲೋಕ್ ನಾಥ್ ವಿರುದ್ಧ ಐಸಿಪಿ ಸೆಕ್ಷನ್ 376ರ ಅಡಿಯಲ್ಲಿ ಮುಂಬೈ ಪೊಲೀಸರು ಅತ್ಯಾಚಾರ ಪ್ರಕರಣವೊಂದನ್ನು ಬುಧವಾರ ದಾಖಲಿಸಿದ್ದಾರೆ. 
20 ವರ್ಷಗಳ ಹಿಂದೆ ಅಲೋಕ್ ನಾಥ್ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದರು ಎಂದು ಲೇಖಕಿ ಹಾಗೂ ನಿರ್ಮಾಪಕಿ ವಿಂತಾ ನಂದಾ ಅವರು ಈ ಹಿಂದೆ ಆರೋಪ ಮಾಡಿದ್ದರು. 
ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ವಿಂತಾ ನಂದಾ ಅವರು, ಈ ಸಂದರ್ಭಕ್ಕಾಗಿ ನಾನು 19 ವರ್ಷಗಳ ಕಾಲ ಕಾಯಬೇಕಾಯಿತು. 1990ರ ದಶಕದ ಖ್ಯಾತ ಸಂಸ್ಕಾರಿ ಮತ್ತು ಸುವಿಖ್ಯಾತ ಟಿವಿ ನಟನಿಂದ ನನ್ನ ಮೇಲೆ 2 ದಶಕಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಹೇಳಿಕೊಂಡಿದ್ದರು. ವಿಂತಾ ನಂದಾ ಅವರ ಈ ಆರೋಪ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. 
ಬಳಿಕ ಅಲೋಕ್ ನಾಥ್ ಅವರು ವಿಂತಾ ನಂದಾ ಅವರಿಗೆ ಮಾನನಷ್ಟ ಮೊಕದ್ದಮೆ ದಾಖಲಿಸಿ, ನೋಟಿಸ್ ಜಾರಿ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.