ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್ನಲ್ಲಿ 2.0 ಮತ್ತು ಭೈರವಗೀತ ಮುಖಾಮುಖಿ: ರಜನಿಗೆ ಸೆಡ್ಡು ಹೊಡಿತಾರ ಡಾಲಿ ಧನಂಜಯ್!

ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಡಾಲಿ ಧನಂಜಯ್ ಅಭಿನಯದ ಭೈರವಗೀತ ಚಿತ್ರ ಮತ್ತು ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರಗಳು ನವೆಂಬರ್...

ಬಾಕ್ಸ್ ಆಫೀಸ್ನಲ್ಲಿ 2.0 ಮತ್ತು ಭೈರವಗೀತ ಮುಖಾಮುಖಿ: ರಜನಿಗೆ ಸೆಡ್ಡು ಹೊಡಿತಾರ ಡಾಲಿ ಧನಂಜಯ್!
ಭೈರವಗೀತ, 2.0 ಸ್ಟಿಲ್ಸ್
Published On :
ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಡಾಲಿ ಧನಂಜಯ್ ಅಭಿನಯದ ಭೈರವಗೀತ ಚಿತ್ರ ಮತ್ತು ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರಗಳು ನವೆಂಬರ್ 20ರಂದೇ ಬಿಡುಗಡೆಯಾಗುತ್ತಿದ್ದು ಬಾಕ್ಸ್ ಆಫೀಸ್ ನಲ್ಲಿ ಯಾರು ಗೆಲ್ಲುತ್ತಾರೋ ನೋಡಬೇಕಿದೆ. 
ರಾಮಗೋಪಾಲ ವರ್ಮಾ ನಿರ್ಮಾಣದ ಭೈರವಗೀತ ಚಿತ್ರ ನವೆಂಬರ್ 23ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರತಂಡ ನವೆಂಬರ್ 20ರಂದೇ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದು ಕಲೆಕ್ಷನ್ ಲೆಕ್ಕಾಚಾರ ಶುರುವಾಗಿದೆ.
ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರ ಭಾರೀ ಬಜೆಟ್ ನ ಚಿತ್ರವಾಗಿದೆ. ಭಾರತೀಯ ಚಿತ್ರರಂಗದ ದುಬಾರಿ ಬಜೆಟ್ ನ ಚಿತ್ರ ಎಂಬ ಹೆಗ್ಗಳಿಕೆ ಇದೆ. ಹೀಗಾಗಿ ದೇಶದ್ಯಾಂತ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 2.0 ಚಿತ್ರ ತೆರೆ ಕಾಣಲಿದೆ. 
ಒಟ್ಟಿನಲ್ಲಿ ಸಣ್ಣ ಬಜೆಟ್ ಚಿತ್ರವಾಗಿರುವ ಭೈರವಗೀತ ಚಿತ್ರ ಭಾರೀ ಬಜೆಟ್ ನ ಚಿತ್ರಕ್ಕೆ ಸೆಡ್ಡು ಹೊಡಿಯುತ್ತಾ ಅಂತ ಮುಂದಿನ ದಿನಗಳಲ್ಲಿ ಕಲೆಕ್ಷನ್ ನೋಡಿದರೆ ಗೊತ್ತಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.