ಕೆಜಿಎಫ್ ಬಿಡುಗಡೆಗೂ ಮುನ್ನವೇ ಛಾಯಾಗ್ರಾಹಕ ಭುವನ್ ಗೌಡಗೆ ಹೆಚ್ಚಿದ ಡಿಮ್ಯಾಂಡ್!
ಕೆಜಿಎಫ್ ಟ್ರೇಲರ್ ಬಿಡುಗಡೆಯಾಗಿ ದೇಶಾದ್ಯಂತ ಭಾರೀ ಹವಾ ಸೃಷ್ಟಿ ಮಾಡಿದೆ. ಮಿಲಿಯನ್ ಗಿಂತಲೂ ಅಧಿಕ ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ. ...

Published On :
ಬೆಂಗಳೂರು: ಕೆಜಿಎಫ್ ಟ್ರೇಲರ್ ಬಿಡುಗಡೆಯಾಗಿ ದೇಶಾದ್ಯಂತ ಭಾರೀ ಹವಾ ಸೃಷ್ಟಿ ಮಾಡಿದೆ. ಮಿಲಿಯನ್ ಗಿಂತಲೂ ಅಧಿಕ ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ.
ಯಶ್ ನಟನೆಯ ಕೆಜಿಎಫ್ ಚಿತ್ರದ ಬಗ್ಗೆ ಚರ್ಚೆಗಳು ಆರಂಭವಾಗಿವೆ, ಸಿನಿಮಾ ನಿರ್ಮಾಣದ ಗುಣಮಟ್ಟ ಹಾಗೂ ನಿರ್ದೇಶನದ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ, ಚಿತ್ರದ ಛಾಯಾಗ್ರಹಣ ಸಂಬಂಧ ಛಾಯಾಗ್ರಾಹಕ ಭುವನ್ ಗೌಡ ಬಗ್ಗೆ ಎಲ್ಲೆಡೆ ಹೊಗಳಿಕೆ ಮಾತುಗಳು ಕೇಳಿ ಬರುತ್ತಿವೆ, ದಕ್ಷಿಣ ಭಾರತ ಹಾಗೂ ಬಾಲಿವುಡ್ ಸಿನಿಮಾ ನಿರ್ಮಾಪಕರುಗಳಿಂದ ಭುವನ್ ಗೆ ನಿರಂತರ ಕರೆ ಬರುತ್ತಿವೆ, ಆದರೆ ಕೆಜಿಎಫ್ ಸಿನಿಮಾ ಬಿಡುಗಡೆ ಆಗುವವರೆಗೂ ಕಾಯಲು ಭುವನ್ ನಿರ್ಧರಿಸಿದ್ದು ಸದ್ಯಕ್ಕೆ ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊಂಡಿಲ್ಲ,
ಎಲ್ಲಾ ಭಾಷೆಗಳಲ್ಲೂ ನನ್ನ ಕೆಲಸ ಗಮಿನಿಸಿ ಬೆನ್ನು ತಟ್ಟುತ್ತಿದ್ದಾರೆ ಇದಕ್ಕೆ ನನ್ನ ಧನ್ಯವಾದಗಳು, ಮುಂದಿನ ಚಿತ್ರವನ್ನು ನಾನು ಒಪ್ಪಿಕೊಳ್ಳುವುದಕ್ಕು ಮುಂಚೆ ಕೆಜಿಎಫ್ ರಿಲೀಸ್ ಆಗಬೇಕು ಎಂದು ಭುವನ್ ಗೌಡ ಹೇಳಿದ್ದಾರೆ.
ಉಗ್ರಂ ಮೂಲಕ ವೃತ್ತಿ ಆರಂಭಿಸಿದ ಭುವನ್ ಪ್ರಶಾಂತ್ ನೀಲ್ ಜೊತೆ ಎರಡನೇ ಸಿನಿಮಾ ದಲ್ಲಿ ಭಾಗಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


