ಸಿನಿಮಾ ಸುದ್ದಿ

'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಗ್ಲಾಮರ್'ಗಿಂತಲೂ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯ: ಆಶಿಕಾ ರಂಗನಾಥ್

ಟ್ರೈಲರ್ ಹಾಗೂ ಸಿಲ್ಸ್ ಗಳಿಂದಲೇ ಹೆಸರು ಮಾಡುತ್ತಿರುವ ತಾಯಿಗೆ ತಕ್ಕ ಮಗ ಚಿತ್ರತಂಡ ಚಿತ್ರ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದು, ಚಿತ್ರದಲ್ಲಿ ಗ್ಲಾಮರ್'ಗಿಂತಲೂ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ಚಿತ್ರದ ನಾಯಕಿ ಆಶಿಕಾ ರಂಗನಾಥ್ ಅವರು ಹೇಳಿದ್ದಾರೆ...

'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಗ್ಲಾಮರ್'ಗಿಂತಲೂ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯ: ಆಶಿಕಾ ರಂಗನಾಥ್
ಆಶಿಕಾ ರಂಗನಾಥ್
Published On :
ಟ್ರೈಲರ್ ಹಾಗೂ ಸಿಲ್ಸ್ ಗಳಿಂದಲೇ ಹೆಸರು ಮಾಡುತ್ತಿರುವ ತಾಯಿಗೆ ತಕ್ಕ ಮಗ ಚಿತ್ರತಂಡ ಚಿತ್ರ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದು, ಚಿತ್ರದಲ್ಲಿ ಗ್ಲಾಮರ್'ಗಿಂತಲೂ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ಚಿತ್ರದ ನಾಯಕಿ ಆಶಿಕಾ ರಂಗನಾಥ್ ಅವರು ಹೇಳಿದ್ದಾರೆ. 
ಚಿತ್ರದ ಶೀರ್ಷಿಕೆಯೇ ತಾಯಿ ಹಾಗೂ ಮಗನ ನಡುವಿನ ಬಾಂಧವ್ಯ ಎಷ್ಟಿರುತ್ತದೆ ಎಂಬುದನ್ನು ಹೇಳುತ್ತದೆ. ಅಜಯ್ ರಾವ್ ಹಾಗೂ ಸುಮಲತಾ ಅವರು ತಾಯಿ, ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅತ್ಯುತ್ತಮವಾಗಿ ಬಂದಿದೆ. ನನ್ನ ಪಾತ್ರ ಕೂಡ ಚಿತ್ರದಲ್ಲಿ ಪ್ರಮುಖವಾಗಿದೆ ಎಂದು ಹೇಳಿದ್ದಾರೆ. 
ತಮ್ಮ ಚಿತ್ರಗಳಲ್ಲಿ ನಿರ್ದೇಶಕ ಶಶಾಂಕ್ ಅವರು, ಹೀರೋ ಹಾಗೂ ಹಿರೋಯಿನ್ ಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತಲೇ ಬಂದಿದ್ದಾರೆ. ನಿರ್ದೇಶಕತೆಯ ವಿಧಾನಗಳನ್ನು ಶಶಾಂಕ್ ಅವರು ಅನುಸರಿಸಿದ್ದಾರೆ. ಡ್ರಾಮಾ, ರೊಮ್ಯಾನ್ಸ್, ಆ್ಯಕ್ಷನ್, ರಿಲೇಷನ್ ಶಿಪ್ ಎಲ್ಲಾ ರೀತಿಯ ಭಾವನೆಗಳೂ ಚಿತ್ರದಲ್ಲಿದೆ. ಚಿತ್ರಕ್ಕೆ ನನ್ನ ಪಾತ್ರ ಸಂಪೂರ್ಣ ಚಿತ್ರಣವನ್ನು ನೀಡಲಿದೆ ಎಂದು ಸುಮಲತಾ ಅವರೂ ಕೂಡ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. 
ತಾಯಿಗೆ ತಕ್ಕ ಮಗ ಚಿತ್ರ ನನ್ನ 6ನೇ ಚಿತ್ರ. ಚಿತ್ರದಿಂದ ಉತ್ತಮ ಹೆಸರು ಗಳಿಸುವ ನಿರೀಕ್ಷೆಗಳಿವೆ. ಈ ಹಿಂದೆ ನಾನು ಮಾಡಿದ್ದ ಎಲ್ಲಾ ಚಿತ್ರಗಳ ಪಾತ್ರಗಳು ಕಾಲೇಜು ಹುಡುಗಿ, ಯುವತಿಯಾಗಿ ನಟಿಸಿದ್ದರೆ. ಚಿತ್ರದಲ್ಲಿ ಸರಸ್ವತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.