ಕೇರಳದಿಂದ ಕರ್ನಾಟಕಕ್ಕೆ 'ಶಕೀಲಾ 'ಚಿತ್ರದ ಶೂಟಿಂಗ್ ಸ್ಥಳಾಂತರದಿಂದ ಗೊತ್ತಿಲ್ಲದ ಸ್ಥಳಗಳ ಪತ್ತೆ- ನಿರ್ದೇಶಕ
'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರದಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ ಅನೇಕ ಸ್ಥಳಗಳನ್ನು ಪತ್ತೆ ಹಚ್ಚಲು ಅವಕಾಶವಾಯಿತು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.

ಬೆಂಗಳೂರು: ವಿನಾಶಕಾರಿ ಪ್ರವಾಹದ ಕಾರಣದಿಂದ ಬಾಲಿವುಡ್ ಬಯೋಪಿಕ್ 'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರಿಸಿದ್ದರಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ ಅನೇಕ ಸ್ಥಳಗಳನ್ನು ಪತ್ತೆ ಹಚ್ಚಲು ಅವಕಾಶವಾಯಿತು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.
ರಿಚಾ ಛಾಡ್ಡಾ ಅಭಿನಯಿಸುತ್ತಿರುವ ಶಕೀಲಾ , ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿನ ನೀಲಿ ತಾರೆ ಎಂದೇ ಹಣೆಪಟ್ಟಿ ಕಟ್ಟಿಕೊಂಡಿದ್ದ ಶಕೀಲಾ ಜೀವನ ಚರಿತ್ರೆ ಕುರಿತಾದ್ದಾಗಿದೆ.
ಕಥೆ ಹಾಗೂ ಚಿತ್ರೀಕರಣದ ಸ್ಥಳಗಳನ್ನು ಈ ಹಿಂದೆಯೇ ಪೂರ್ಣಗೊಳಿಸಲಾಗಿತ್ತು. ಅದು ನಿತ್ಯ ಕೂಡಾ ನಡೆಯುತ್ತಿರುತ್ತದೆ. ಕೇರಳದಲ್ಲಿ ಮಳೆ ಕಾರಣದಿಂದಾಗಿ ಕೂಡಲೇ ಚಿತ್ರೀಕರಣವನ್ನು ಬದಲಾವಣೆ ಮಾಡಬೇಕಾಗಿದ್ದರಿಂದ ತುಂಬಾ ಕಷ್ಟವಾಯಿತು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಆದರೆ, ಕರ್ನಾಟದಲ್ಲಿ ಇನ್ನೂ ಗೊತ್ತಿಲ್ಲದ ಅನೇಕ ಸ್ಥಳಗಳಿವೆ . ಇಂತಹ ಸ್ಥಳಗಳ ಹುಡುಕಾಟ ನಡೆಸಲು ಕೇರಳ ನೆರವಾಯಿತು . ಕಥೆ ಏನನ್ನೂ ಹೇಳುತ್ತದೆಯೋ ಆ ರೀತಿಯ ಸ್ಥಳಗಳನ್ನು ಪತ್ತೆ ಮಾಡಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಇಂದ್ರಜಿತ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


