ಸಂಗೀತಾ ಭಟ್ ವಿರುದ್ಧ ಗುರುಪ್ರಸಾದ್ ಕಿಡಿ, ಇದಕ್ಕೆ ಡಾಲಿ ಧನಂಜಯ್ ಹೇಳಿದ್ದೇನು?
ಎರಡನೇ ಸಲ ಚಿತ್ರದ ನಟಿ ಸಂಗೀತಾ ಭಟ್ ವಿರುದ್ಧ ತಾವು ಪತಿವ್ರತೆ ಅಂತ ತೋರಿಸಿಕೊಳ್ಳಲು ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಕೀಳು ಮಟ್ಟದಲ್ಲಿ ಟೀಕೆ ಮಾಡಿದ್ದ ನಿರ್ದೇಶಕ ಗುರುಪ್ರಸಾದ್...

Published On :
ಬೆಂಗಳೂರು: ಎರಡನೇ ಸಲ ಚಿತ್ರದ ನಟಿ ಸಂಗೀತಾ ಭಟ್ ವಿರುದ್ಧ ತಾವು ಪತಿವ್ರತೆ ಅಂತ ತೋರಿಸಿಕೊಳ್ಳಲು ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಕೀಳು ಮಟ್ಟದಲ್ಲಿ ಟೀಕೆ ಮಾಡಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಡಾಲಿ ಧನಂಜಯ್ ಕಿಡಿಕಾರಿದ್ದಾರೆ.
ನಿರ್ದೇಶಕ ಗುರುಪ್ರಸಾದ್ ರ ಎಲ್ಲಾ ಹೇಳಿಕೆಗಳನ್ನು ನಾನು ವಿರೋಧಿಸುತ್ತೇನೆ. ಇವರ ಹೇಳಿಕೆಯಿಂದಾಗಿ ಸಂಗೀತಾ ಭಟ್ ಸೇರಿದಂತೆ ಎರಡನೇ ಸಲ ಚಿತ್ರದಲ್ಲಿ ಕೆಲಸ ಮಾಡಿದ್ದ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ ಎಂದರು.
ಗುರುಪ್ರಸಾದ್ ಅವರಿಗೆ ನೈತಿಕತೆ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಮನುಷ್ಯನಿಗೆ ಅಷ್ಟು ಸೇಡು ಇರಬಾರದು. ನೀವು ನಿಮ್ಮ ಸುತ್ತಮುತ್ತಲಿನ ನಾಲ್ಕು ಜನರನ್ನು ತುಳಿಯಲು ಯತ್ನಿಸುತ್ತಿದ್ದೀರಿ. ಆದರೆ ನಿಮ್ಮನ್ನು ಸಹ ತುಳಿಯುವವರೂ ಇರುತ್ತಾರೆ. ಇವಾಗಲಾದರೂ ನಾಲ್ಕು ಜನ ನಿಮ್ಮ ಪರವಾಗಿ ಮಾತನಾಡುವವರನ್ನು ಉಳಿಸಿಕೊಳ್ಳಿ. ಈ ರೀತಿಯ ವರ್ತನೆಯನ್ನು ಬಿಟ್ಟು ನೆಮ್ಮದಿಯಾಗಿ ಉಸಿರಾಡುವುದನ್ನು ಕಲಿತುಕೊಳ್ಳಲಿ ಎಂದು ಧನಂಜಯ್ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


