ಸಿನಿಮಾ ಸುದ್ದಿ

ಸೋಲ್ಡ್ ಚಿತ್ರದಲ್ಲಿ ಕಾವ್ಯಾ ಶೆಟ್ಟಿ ಪತ್ತೇದಾರಿಕೆ!

ಸಂಹಾರ ಚಿತ್ರದ ನಾಯಕಿ ಕಾವ್ಯಾ ಶೆಟ್ಟಿ ಅವರು ಇದೀಗ ಸೋಲ್ಡ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರದಲ್ಲಿ ಅವರು ಮಕ್ಕಳ ಕಳ್ಳಸಾಗಣಿಕೆ ಕುರಿತು ಪತ್ತೇದಾರಿಕೆ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ...

ಸೋಲ್ಡ್ ಚಿತ್ರದಲ್ಲಿ ಕಾವ್ಯಾ ಶೆಟ್ಟಿ ಪತ್ತೇದಾರಿಕೆ!
ಕಾವ್ಯಾ ಶೆಟ್ಟಿ
Published On :
ಸಂಹಾರ ಚಿತ್ರದ ನಾಯಕಿ ಕಾವ್ಯಾ ಶೆಟ್ಟಿ ಅವರು ಇದೀಗ ಸೋಲ್ಡ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರದಲ್ಲಿ ಅವರು ಮಕ್ಕಳ ಕಳ್ಳಸಾಗಣಿಕೆ ಕುರಿತು ಪತ್ತೇದಾರಿಕೆ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನವ ನಿರ್ದೇಶಕಿ ಪ್ರೇರಣಾ ಅಗರ್ ವಾಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಚಿತ್ರಕ್ಕೆ ಕಾವ್ಯಾ ಶೆಟ್ಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರ ಮಾನವ ಸಾಗಾಣಿಕೆ ಕುರಿತು ಚಿತ್ರಕಥೆಯನ್ನು ಹೊಂದಿದೆ. 
ಸಂಹಾರ ಚಿತ್ರದ ನಂತರ ಕಾವ್ಯಾ ಶೆಟ್ಟಿ ಕಥೆಗಳು ಇಷ್ಟವಾಗದೇ ಇದ್ದ ಕಾರಣ ಸ್ವಲ್ಪ ಸಮಯ ತೆಗೆದುಕೊಂಡಿದ್ದರು. ಇದೀಗ ಅವರಿಗೆ ಸೂಕ್ತವಾದ ಕಥೆ ಸಿಕ್ಕಿದ್ದರಿಂದ ಸೋಲ್ಡ್ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. 
ಸೋಲ್ಡ್ ಚಿತ್ರದ ಕಥಾವಸ್ತು ತುಂಬ ಗಂಭೀರವಾಗಿರುವುದರಿಂದ ಶೂಟಿಂಗ್ ಗೂ ಮುನ್ನ ಒಂದಷ್ಟು ಅಧ್ಯಯನ ನಡೆಸುವುದು ಅವಶ್ಯಕವಾಗಿತ್ತು. ಹೀಗಾಗಿ ಕೆಲ ಡಾಕ್ಯುಮೆಂಟರಿಗಳನ್ನು ನೋಡಿಕೊಂಡು ಮಾನವ ಕಳ್ಳಸಾಗಣಿಕೆ ಬಗ್ಗೆ ತಿಳಿದುಕೊಂಡೆ ಎಂದು ಕಾವ್ಯಾ ಶೆಟ್ಟಿ ಹೇಳಿದ್ದಾರೆ. 
ಮಕ್ಕಳು ಮತ್ತು ಹುಡುಗಿಯರು ಹೇಗೆ ಅಪಹರಣಕ್ಕೀಡಾಗುತ್ತಾರೆ ಮತ್ತು ಹೇಗೆ ಅವರನ್ನು ಮಾರಾಟ ಮಾಡಲಾಗುತ್ತದೆ ಎಂಬುದನ್ನು ಆಧರಿಸಿ ಈ ಚಿತ್ರ ತಯಾರಾಗುತ್ತಿದೆ. ಈ ಚಿತ್ರದಲ್ಲಿ ಮೂರು ಪಾತ್ರಗಳು ಮುಖ್ಯವಾಗಿರಲಿದೆ ಎಂದು ಕಾವ್ಯಾ ಶೆಟ್ಟಿ ಹೇಳಿದ್ದಾರೆ. 
ಇತ್ತೀಚೆಗಷ್ಟೇ ಈ ಚಿತ್ರ ಚಿತ್ರೀಕರಣ ಶುರುವಾಗಿದೆ. ಚಿತ್ರವನ್ನು ಹೋರ್ನ್ ಓಕೆ ಫಿಲ್ಮ್ಸ್ ಅಡಿಯಲ್ಲಿ ದೀಪಂ ಕೊಹ್ಲಿ ಅವರು ನಿರ್ಮಾಣ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.