ರಾಮಧಾನ್ಯ ಮೂಲಕ ಹೊಸ ಇಮೇಜ್ ಸೃಷ್ಟಿಸುವ ಕಾತರದಲ್ಲಿ ಯಶಸ್
ಲವರ್ ಬಾಯ್ ಇಮೇಜ್ ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಯಶಸ್ ಗೆ ರಾಮಧಾನ್ಯ...

ಲವರ್ ಬಾಯ್ ಇಮೇಜ್ ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಯಶಸ್ ಗೆ ರಾಮಧಾನ್ಯ ಚಿತ್ರ ಒಳ್ಳೆಯ ಯಶಸ್ಸು ನೀಡಬಹುದು ಎಂಬ ವಿಶ್ವಾಸವಿದೆ. ನಾಗೇಶ್ ಪಿಎನ್ ನಿರ್ದೇಶನದ ರಾಮಧನ್ಯದಲ್ಲಿ ಐತಿಹಾಸಿಕ ಕಥೆಯಿದ್ದು ಯಶಸ್ ಇದರಲ್ಲಿ ಮೂರು ವಿಭಿನ್ನ ಗೆಟಪ್ ಗಳಲ್ಲಿ ಅಭಿನಯಿಸುತ್ತಿದ್ದಾರೆ.
ಕನಕದಾಸ ಕುರಿತ ಚಿತ್ರವಿದು. ಇಂದಿನ ಜನಾಂಗಕ್ಕೂ ಈ ಚಿತ್ರ ಪ್ರಸ್ತುತವಾಗಿದೆ. ಇದರಲ್ಲಿ ಯೋಧ ತಿಮ್ಮಪ್ಪ ನಾಯಕ ಕನಕದಾಸನಾಗಿ ಬದಲಾದ ಕಥೆಯನ್ನು ಮತ್ತು ಕೃಷ್ಣ ದೇವರಿಗೆ ಹತ್ತಿರವಾದ ಕಥೆಯನ್ನು ವಿವರಿಸಲಾಗಿದೆ. ಇನ್ನೊಂದು ರೀತಿಯಲ್ಲಿ ಕೃಷ್ಣ ದೇವರಿಗೆ ಈ ಕಥೆ ಹತ್ತಿರವಾಗಿದೆ ಎನ್ನುತ್ತಾರೆ ಯಶಸ್. ನಾಳೆ ಈ ಚಿತ್ರ ಬಿಡುಗಡೆಯಾಗುತ್ತಿದೆ.
ಈ ಪಾತ್ರಕ್ಕಾಗಿ ಅಧಿಕ ಸಿದ್ದತೆ ಬೇಕಾಯಿತಂತೆ. ಇತಿಹಾಸದ ಗೆಟಪ್ ನಲ್ಲಿ ಪಾತ್ರವಿದ್ದರೂ ಕೂಡ ಚಿತ್ರದಲ್ಲಿ ಮನರಂಜನೆಯಿದೆ. ಈ ಚಿತ್ರಕ್ಕಾಗಿ ರಾಜ್ ಕುಮಾರ್ ಅವರ ಐತಿಹಾಸಿಕ ಸಿನಿಮಾಗಳನ್ನು ನೋಡಿ ಕೆಲವು ಅಂಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಅವರು ಕೂಡ ಕನಕದಾಸನ ಪಾತ್ರ ಮಾಡಿದ್ದಾರೆ. ಹಾಗಾಗಿ ತುಂಬಾ ಸಿದ್ದತೆ ಮಾಡಿಕೊಂಡೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


