ಸೂರಿ ಹೊಸ ಚಿತ್ರದ ಶೀರ್ಷಿಕೆ 'ಪಾಪ್ ಕಾರ್ನ್ ಮಂಕಿ ಟೈಗರ್'
ನಿರ್ದೇಶಕ ಸೂರಿ ತಮ್ಮ ಚಿತ್ರದ ಕಥೆ, ನಿರ್ದೇಶನ ಶೈಲಿಯಿಂದ ಮಾತ್ರವಲ್ಲದೆ ಶೀರ್ಷಿಕೆಯಿಂದಲೂ ಕೂಡ...

ನಿರ್ದೇಶಕ ಸೂರಿ ತಮ್ಮ ಚಿತ್ರದ ಕಥೆ, ನಿರ್ದೇಶನ ಶೈಲಿಯಿಂದ ಮಾತ್ರವಲ್ಲದೆ ಶೀರ್ಷಿಕೆಯಿಂದಲೂ ಕೂಡ ಕುತೂಹಲ ಮೂಡಿಸುತ್ತಾರೆ. ಟಗರು ಚಿತ್ರದ ಶೀರ್ಷಿಕೆ ಕೂಡ ಸಾಕಷ್ಟು ಕುತೂಹಲ ಮೂಡಿಸಿತ್ತು.
ಆ ಚಿತ್ರವೀಗ ಶತದಿನೋತ್ಸವ ಆಚರಣೆಯತ್ತ ಮುನ್ನುಗ್ಗುತ್ತಿದೆ. ಇದೀಗ ತಮ್ಮ ಮುಂಬರುವ ಚಿತ್ರದಲ್ಲಿ ಕೂಡ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. ಧನಂಜಯ್ ನಟನೆಯ ಚಿತ್ರಕ್ಕೆ ಸೂರಿ ಅವರು 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಹೆಸರು ಸೂಚಿಸಿದ್ದಾರೆ. ಅದಕ್ಕೆ ಹೆಸರು ನೀಡಿದ್ದು ಅವರ ಆರು ವರ್ಷದ ಪುತ್ರ ಪೃಥ್ವಿ.
ಸೂರಿಯವರು ತಮ್ಮ ಮಗನಿಗೆ ಹೇಳಿದ ಹಲವು ಕಥೆಗಳನ್ನು ಒಟ್ಟು ಸೇರಿಸಿ ಪೃಥ್ವಿ ತನ್ನ ತಂದೆಗೆ ಕಥೆ ಹೇಳಿದನಂತೆ. ಇದಕ್ಕೆ ಏನು ಟೈಟಲ್ ಎಂದು ಮಗನಲ್ಲಿ ಕೇಳಿದಾಗ ಅವನು ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್ ಎಂದನು. ಆ ಹೆಸರಿನ ಬಗ್ಗೆ ಹಲವು ಬಾರಿ ಯೋಚನೆ ಮಾಡಿದೆ. ಇದಕ್ಕೆ ತಕ್ಕ ಚಿತ್ರಕಥೆ ಸಿಕ್ಕಿದಾಗ ಈ ಶೀರ್ಷಿಕೆ ಇಷ್ಟವಾಗಿ ಅದೇ ಹೆಸರನ್ನು ನೀಡಿದೆ ಎನ್ನುತ್ತಾರೆ.
ಗೀತಾ ಶಿವರಾಜ್ ಕುಮಾರ್ ಅರ್ಪಣೆಯ ಈ ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಮಾಸ್ತಿ ಮಂಜು ಅವರ ಸಂಭಾಷಣೆ, ಚರಣ್ ರಾಜ್ ಸಂಗೀತ, ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಚರಣ್ ಈಗಾಗಲೇ ಟಗರುವಿನಲ್ಲಿ ಕೆಲಸ ಮಾಡಿದ್ದಾರೆ. ಶೇಖರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ನಟ ಧನಂಜಯ್ ಜೊತೆಗೆ ಶುದ್ಧಿ ಖ್ಯಾತಿಯ ನಟಿ ನಿವೇದಿತಾ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ನಿವೇದಿತಾ ಅವರು ದೇವಿಕಾ ಪಾತ್ರದಲ್ಲಿ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


