ರ್ಯಾಂಬೊ2 ನನ್ನನ್ನು ಉತ್ತಮ ನಟಿಯನ್ನಾಗಿ ರೂಪಿಸಿದೆ: ಆಶಿಕಾ ರಂಗನಾಥ್
ರ್ಯಾಂಬೊ 2 ಚಿತ್ರದ ನಾಯಕಿ ಆಶಿಕಾ ರಂಗನಾಥ್ ಗೆ ಚಿತ್ರ ವಿಶೇಷ ಅನುಭವ ನೀಡಿದೆಯಂತೆ. ಚಿತ್ರೀಕರಣದ ...

ರ್ಯಾಂಬೊ 2 ಚಿತ್ರದ ನಾಯಕಿ ಆಶಿಕಾ ರಂಗನಾಥ್ ಗೆ ಚಿತ್ರ ವಿಶೇಷ ಅನುಭವ ನೀಡಿದೆಯಂತೆ. ಚಿತ್ರೀಕರಣದ ಸಂದರ್ಭದಲ್ಲಿ ತಮಾಷೆಯ ವಾತಾವರಣ ತಮಗೆ ಬೇರೆ ಕಲಾವಿದರೊಂದಿಗೆ ಸುಲಭವಾಗಿ ನಟಿಸಲು ಅವಕಾಶ ಮಾಡಿಕೊಟ್ಟಿತು. ಇಡೀ ಚಿತ್ರದ ಶೂಟಿಂಗ್ ಉತ್ತಮ ಅನುಭವ ಕೊಟ್ಟಿತು, ನಟಿಯಾಗಿ ಉತ್ತಮವಾಗಿ ನಟಿಸಲು ನನಗೆ ಅವಕಾಶ ಸಿಕ್ಕಿತು ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಆಶಿಕಾ ರಂಗನಾಥ್.
ರ್ಯಾಂಬೊ2 ಗೆ ಅವಕಾಶ ಸಿಕ್ಕಿದಾಗ ಹಾಸ್ಯನಟನಾಗಿ ನಂತರ ನಾಯಕ ನಟನಾದ ಶರಣ್ ಜೊತೆ ತಮ್ಮ ಜೋಡಿ ಚೆನ್ನಾಗಿ ಕಾಣಿಸಿಕೊಳ್ಳುತ್ತದೆಯೇ ಇಲ್ಲವೇ ಎಂದು ಆಶಿಕಾಗೆ ಸಂದೇಹವಿತ್ತಂತೆ. ಇದರಲ್ಲಿ ಚಿಕ್ಕಣ್ಣ ಮತ್ತು ಸಾಧುಕೋಕಿಲ ಕೂಡ ಇದ್ದಾರೆ. ಅವರೆಲ್ಲರೂ ಅನುಭವಿ ನಟರು. ಕಾಮಿಡಿಯಲ್ಲಿ ಹೆಸರು ಮಾಡಿದವರು. ಅವರೆಲ್ಲರ ಮಧ್ಯೆ ನನಗೆ ನಟಿಸಲು ಸಾಧ್ಯವಾಗುತ್ತದೆಯೇ ಎಂಬ ಅಳುಕಿತ್ತು.ಆದರೆ ಆ ಅನುಭವಿ ನಟರ ಮಧ್ಯೆ ಇದ್ದುದೇ ನನಗೆ ಸಹಾಯವಾಯಿತು ಎನ್ನುತ್ತಾರೆ.
ಚಿತ್ರದಲ್ಲಿ ಆಶಿಕಾಗೆ ಮೇಕ್ ಓವರ್ ಮಾಡಿದ್ದು ತರುಣ್ ಸುಧೀರ್. ಚಿತ್ರದ ಪ್ರತಿ ದೃಶ್ಯಗಳ ಬಗ್ಗೆ ಅವರು ಕೂಲಂಕಷವಾಗಿ ನೋಡುತ್ತಿದ್ದರು. ತಲೆಯಿಂದ ಹಿಡಿದು ಪಾದದವರೆಗೆ ಸರಿಯಾಗಿ ಕಾಣಬೇಕೆಂದು ಮತ್ತು ಅಭಿನಯದಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಅವರು ಮುಂಜಾಗ್ರತೆ ವಹಿಸುತ್ತಿದ್ದರು. ಇಂತಹ ತಂಡದ ಜೊತೆ ಕೆಲಸ ಮಾಡಲು ಸುಲಭವಾಯಿತು ಎನ್ನುತ್ತಾರೆ ಆಶಿಕಾ.
ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ಇದರಿಂದ ನನಗೆ ಕನ್ನಡ ಚಿತ್ರೋದ್ಯಮದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅನುಕೂಲವಾಯಿತು ಎಂದರು.
ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರದ ನಾಯಕಿಯಾಗಿರುವ ಆಶಿಕಾ ರ್ಯಾಂಬೊ2 ಚಿತ್ರದ ಪ್ರಚಾರಕ್ಕೆ ಬಿಡುವು ಮಾಡಿಕೊಂಡಿದ್ದಾರೆ. ಈ ಮಧ್ಯೆ ಜೂನ್ ನಲ್ಲಿ ನಡೆಯುವ ಬಿ.ಕಾಂ ಪರೀಕ್ಷೆಗೆ ಸಹ ಈ ನಟಿ ತಯಾರಿ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


