ಸಿನಿಮಾ ಸುದ್ದಿ

ಗುಲ್ಟು ನಂತರ ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸಲಿರುವ ನವೀನ್ ಶಂಕರ್

ತಮ್ಮ ಚೊಚ್ಚಲ ಚಿತ್ರ ಗುಲ್ಟು ಮೂಲಕ ಭಾರೀ ಸುದ್ದಿಯಾದವರು ನಟ ನವೀನ್ ಶಂಕರ್. ಸೈಬರ್ ...

ಗುಲ್ಟು ನಂತರ ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸಲಿರುವ ನವೀನ್ ಶಂಕರ್
ಗುಲ್ಟು ಚಿತ್ರದ ಪೋಸ್ಟರ್
Published On :

ತಮ್ಮ ಚೊಚ್ಚಲ ಚಿತ್ರ ಗುಲ್ಟು ಮೂಲಕ ಭಾರೀ ಸುದ್ದಿಯಾದವರು ನಟ ನವೀನ್ ಶಂಕರ್. ಸೈಬರ್ ಕ್ರೈಮ್ ಬಗ್ಗೆ ಜನಾರ್ದನ್ ಚಿಕ್ಕಣ್ಣ ಮಾಡಿರುವ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮಾತ್ರವಲ್ಲದೆ ನಟ ನವೀನ್ ಶಂಕರ್ ಕೂಡ ಮೊದಲ ಚಿತ್ರದ ಮೂಲಕ ಭರವಸೆ ಮೂಡಿಸಿದ್ದಾರೆ.

ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅವರಿಗೆ ಹಲವು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. 50 ದಿನಗಳ ಪ್ರದರ್ಶನ ಪೂರೈಸುತ್ತಿರುವ ಗುಲ್ಟು ಒಂದೆಡೆಯಾದರೆ ನವೀನ್ ರೊಮಾಂಟಿಕ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಮೂರು ವಿಭಿನ್ನ ವಿಷಯಗಳ ಕಥೆಯನ್ನು ಕೇಳಿದ ನವೀನ್ ಪ್ರೀತಿ, ಪ್ರೇಮ ಕುರಿತ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರತಂಡ ಈ ಬಗ್ಗೆ ಇನ್ನೂ ಘೋಷಣೆ ಮಾಡಿಲ್ಲ. ಆದರೆ ಸಿಟಿ ಎಕ್ಸ್ ಪ್ರೆಸ್ ಗೆ ಕೆಲವು ಮಾಹಿತಿ ಸಿಕ್ಕಿದೆ.

Story image



ಇನ್ನೂ ಹೆಸರಿಡದ ಚಿತ್ರವನ್ನು ದತ್ತಾತ್ರೇಯ ಎಂಬ ಹೊಸ ನಿರ್ದೇಶಕರು ನಿರ್ದೇಶಿಸುತ್ತಿದ್ದಾರೆ. ಪರಮೇಶ್ ನಿರ್ಮಾಣದ ಚಿತ್ರ ಪಿ2 ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿದೆ. ಪರಮೇಶ್ ಈ ಹಿಂದೆ ಗಣಪ, ಪಾರಿಜಾತ, ಜೀವ ಮತ್ತು ಪಲ್ಲಕ್ಕಿ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಮುಂಗಾರು ಮಳೆ ಖ್ಯಾತಿಯ ಮನೋಮೂರ್ತಿ ಸಂಗೀತ ಒದಗಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.