ವಿಮರ್ಶಕರು ನನ್ನ ವಿರುದ್ಧ ಬರೆದಾಗ, ಪ್ರತಿ ಬಾರಿ ಅದನ್ನು ಎದುರಿಸಿ ಬಂದಿದ್ದೇನೆ: ರಜನಿಕಾಂತ್
ಇತ್ತೀಚಿನ ತಮ್ಮ ಸಿನಿಮಾಗಳು ಯಶಸ್ಸು ಕಾಣದ ಕುರಿತು ಮಾತನಾಡಿರುವ ಸೂಪರ್ ಸ್ಟಾರ್ ...

ಇತ್ತೀಚಿನ ತಮ್ಮ ಸಿನಿಮಾಗಳು ಯಶಸ್ಸು ಕಾಣದ ಕುರಿತು ಮಾತನಾಡಿರುವ ಸೂಪರ್ ಸ್ಟಾರ್ ರಜನಿಕಾಂತ್ ವಿಮರ್ಶಕರು ತಮ್ಮ ವಿರುದ್ಧ ಬರೆಯಲು ಪ್ರಯತ್ನಸುತ್ತಿದ್ದರು. ಆದರೆ ನಾನು ಪ್ರತಿ ಬಾರಿಯೂ ಮತ್ತಷ್ಟು ಗಟ್ಟಿಯಾಗುತ್ತಿದ್ದೆ, ಟೀಕೆ, ಸವಾಲುಗಳನ್ನು ಎದುರಿಸಿ ಹಿಮ್ಮೆಟ್ಟಿ ಬಂದಿದ್ದೇನೆ ಎಂದು ಹೇಳಿದ್ದಾರೆ.
ತಮ್ಮ ಪುತ್ರಿ ಸೌಂದರ್ಯ ನಿರ್ದೇಶಿಸಿದ್ದ ಕೊಚಾಡಿಯಾನ್, ಕೆ.ಎಸ್.ರವಿಕುಮಾರ್ ಅವರ ನಿರ್ದೇಶನದ ಲಿಂಗ ಮೊದಲಾದ ಚಿತ್ರಗಳು ಯಶಸ್ಸು ಗಳಿಸಲಿಲ್ಲ. ಕೊಚಾಡಿಯನ್ ಚಿತ್ರದ ಅಂತಿಮ ಆವೃತ್ತಿ ನೋಡಿದ ನಂತರ ಹೆಚ್ಚು ಜಾಗೃತನಾದೆ ಎಂದರು.
ನನ್ನ ಮಗಳು ಸೌಂದರ್ಯ ಅತಿ ಜಾಣವಂತೆ. ಬುದ್ದಿವಂತರ ಜೊತೆ ಕೆಲಸ ಮಾಡುವುದು ಸುಲಭ. ಆದರೆ ಅತಿ ಬುದ್ಧಿವಂತರ ಜೊತೆ ಕೆಲಸ ಮಾಡುವಾಗ ಹುಷಾರಾಗಿರಬೇಕು. ಚಿತ್ರದ ಅಂತಿಮ ಆವೃತ್ತಿಯನ್ನು ವಿಸ್ತರಿಸಲು ಪೋಸ್ಟ್ ಪ್ರೊಡಕ್ಷನ್ ಬಜೆಟ್ ನ್ನು ಆಕೆ ಪಟ್ಟಿ ಮಾಡಿದಳು. ಆದರೆ ನನಗೆ ಈ ಚಿತ್ರ ಗೆಲ್ಲುವುದಿಲ್ಲ ಎಂದು ಚೆನ್ನಾಗಿ ಗೊತ್ತಾಗಿತ್ತು. ಹೀಗಾಗಿ ನಾನು ಅದೇ ಆವೃತ್ತಿಯಲ್ಲಿ ಚಿತ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಜನಿಕಾಂತ್ ಹೇಳಿದರು.
ತಮ್ಮ ಮುಂಬರುವ ಚಿತ್ರ 'ಕಾಳ'ದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂತೋಷ್ ನಾರಾಯಣ್ ಇದಕ್ಕೆ ಸಂಗೀತ ಒದಗಿಸಿದ್ದಾರೆ. ನದಿಯ ಅಂತರಜೋಡಣೆ ಉಪ ಪ್ರಧಾನ ತೆರೆಯ ಮೇಲೆ ಬರಬೇಕಾಗಿದ್ದರಿಂದ ಲಿಂಗ ಸಿನಿಮಾ ಮಾಡಲು ಒಪ್ಪಿಕೊಂಡೆ ಎಂದು ರಜನಿಕಾಂತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


