ಸೂರಜ್ ಎನ್ನುವ ಹೊಸ ನಟನ ಕೈಯಲ್ಲಿದೆ ಎರಡು ಚಿತ್ರಗಳು
ಸೂರಜ್ ಕುಮಾರ್ ಅದೃಷ್ಟವಂತರಂತೆ ಕಾಣುತ್ತಿದ್ದಾರೆ. ಇನ್ನೂ ಒಂದೂ ಚಿತ್ರದಲ್ಲಿ ಕಾಣಿಸಿಕೊಳ್ಳದಿದ್ದರೂ ಇದಾಗಲೇ ಎರಡು ಚಿತ್ರಗಳು ಇವರ ಕೈಯಲ್ಲಿದೆ.

Published On :
ಬೆಂಗಳೂರು: ಸೂರಜ್ ಕುಮಾರ್ ಅದೃಷ್ಟವಂತರಂತೆ ಕಾಣುತ್ತಿದ್ದಾರೆ. ಇನ್ನೂ ಒಂದೂ ಚಿತ್ರದಲ್ಲಿ ಕಾಣಿಸಿಕೊಳ್ಳದಿದ್ದರೂ ಇದಾಗಲೇ ಎರಡು ಚಿತ್ರಗಳು ಇವರ ಕೈಯಲ್ಲಿದೆ.
"ನಾನು ಕಳೆದ ವಾರಾಂತ್ಯದಲ್ಲಿ ನನ್ನ ಮೊದಲ ಚಲನಚಿತ್ರಕ್ಕೆ ಸಹಿ ಹಾಕಿದ್ದೇನೆ ಮತ್ತು ಮುಂಬರುವ ದಿನಗಳಲ್ಲಿ ಮತ್ತೊಂದು ಚಿತ್ರವನ್ನು ಅಂತಿಮಗೊಳಿಸಲಿದ್ದೇವೆ" ಎಂದು ಸುರಜ್ ಹೇಳಿದ್ದಾರೆ
ಸೂರಜ್ ಸಹಿ ಹಾಕಿರುವ ಮೊದಲ ಚಿತ್ರ ಗೀತರಚನೆಕಾರರಾದ ಸಂತೋಷ್ ನಾಯಕ್ ಅವರಿಗೆ ಸೇರಿದೆ. ಸಂತೋಷ್ ಈ ಚಿತ್ರದ ಮೂಲಕ ಪ್ರಥಮ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ."ಅವರು ಗೀತರಚನೆಕಾರರಾಗಿ ಪ್ರಸಿದ್ದರಾಗಿದ್ದಾರೆ. ಹೆಬ್ಬುಲಿ, ಚೌಕಗಳಂತಹಾ ಚಿತ್ರಕ್ಕೆ ಗೀತರಚನೆ ಮಾಡಿದ್ದಾರೆ. ಆದರೆ ಇದು ಅವರ ಪ್ರಥಮ ನಿರ್ದೇಶನದ ಚಿತ್ರ. ಕಲಾತ್ಮಕ ಹಾಗೂ ನಾಟಕೀಯತೆ ಬೆರೆತ ಕಥೆಯನ್ನು ವರು ಆಯ್ಕೆ ಮಾಡಿಕೊಂಡಿದ್ದಾರೆ.
"ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಏತನ್ಮಧ್ಯೆ, ನಿರ್ಮಾಪಕರು ಪೋಷಕ ನಟರು ಮತ್ತು ತಂತ್ರಜ್ಞರು ಸೇರಿದಂತೆ ಉಳಿದ ಸಿಬ್ಬಂದಿಯನ್ನು ಅಂತಿಮಗೊಳಿಸಬೇಕಿದೆ.ಇನ್ನೊಂದು ತಿಂಗಳಲ್ಲಿ ಎಲ್ಲಾ ಸಿದ್ದತೆಗಳು ಪೂರ್ಣಗೊಂಡು ನಾವು ಚಿತ್ರೀಕರಣಕ್ಕೆ ತೆರಳಲಿದ್ದೇವೆ" ಸೂರಜ್ ಹೇಳಿದರು.
ಇದೇ ವೇಳೆ ಸೂರಜ್ ಎರಡನೇ ಚಿತ್ರದ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಈ ಚಿತ್ರವನ್ನು ಕಥಾ ವಿಚಿತ್ರ ಖ್ಯಾತಿಯ ಅನೂಪ್ ಆಂಥೋನಿ ನಿರ್ದೇಶಿಸುತ್ತಿದ್ದಾರೆ."ನಾನು ಒಪ್ಪಿಕೊಳ್ಳುತ್ತಿರುವ ಎರಡೂ ಚಿತ್ರಗಳು ಆಸಕ್ತಿದಾಯಕ ಕಥೆಯನ್ನೊಳಗೊಂಡಿದೆ.ಯಾವ ಚಿತ್ರ ಮೊದಲು ಪ್ರಾರಂಭಗೊಳ್ಳಲಿದೆ ಕಾದು ನೋಡಬೇಕು." ಅವರು ಹೇಳೀದರು.
ಸಂತೋಷ್ ನಾಯಕ್ ಅವರ ಚಿತ್ರದಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳಲಿರುವ ಸೂರಜ್ ಪಾತ್ರಕ್ಕೆ ವಿಭಿನ್ನ ಛಾಯೆಗಳಿದೆಯಂತೆ.
"ಅನೂಪ್ ಚಿತ್ರವು ಪಕ್ಕಾ ಸ್ಥಳೀಯ ಸಂಬಾಷಣೆ ಹೊಂದಿದೆ.ಎರಡೂ ಚಿತ್ರಗಳು ನನಗೆ ಹೊಸ ಅನುಭವವಾಗಿದೆ. ನಾನು ಈ ಎರಡೂ ಚಿತ್ರಗಳಲ್ಲಿ ಉತ್ಸಾಹದಿಂದ ಅಭಿನಯಿಸುತ್ತೇನೆ"
ಸೂರಜ್, ವರನಟ ರಾಜ್ ಲುಮಾರ್ ಕುಟುಂಬಕ್ಕೆ ಸೇರಿದವರಾಗಿದ್ದು ಇವರ ತಂದೆ ಎಸ್.ಎ. ಶ್ರೀನಿವಾಸ್, ಪಾರ್ವತಮ್ಮ ರಾಜ್ ಕುಮಾರ್ ಅವರ ಸೋದರರಿದ್ದಾರೆ. ಹೀಗಾಗಿ ಅವರಿಗೆ ಚಿತ್ರರಂಗದ ನಂಟೂ ಇದೆ ಎನ್ನುವುದು ವಿಶೇಷ. ಹಾಗೆಯೇ ಈ ಹೊಸ ನಟನಿಗೆ ದರ್ಶ್ನ ಸಹ ಪ್ರೋತ್ಸಾಹ ನೀಡಿ ಹುರಿದುಂಬಿಸಿದ್ದಾರಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Parvathamma Rajkumarಪಾರ್ವತಮ್ಮ ರಾಜ್ ಕುಮಾರ್suraj kumarಸೂರಜ್ ಕುಮಾರ್Santosh NaikAnup Antonyಸಂತೋಷ್ ನಾಯಕ್ಅನೂಪ್ ಆಂಥೋನಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


