ಸಿನಿಮಾ ಸುದ್ದಿ

ಸಂಗೀತಾ ಭಟ್, ಬಾಲು ನಾಂಗೇಂದ್ರ ಹೊಸ ಚಿತ್ರಕ್ಕೆ ಶೀರ್ಷಿಕೆ ಸಿಕ್ಕಿತು

ಸಂಗೀತಾ ಭಟ್ ಹಾಗೂ ಬಾಲು ನಾಂಗೇಂದ್ರ ಅವರ ಮುಂಬರುವ ಚಿತ್ರಕ್ಕೆ ಕುತೂಹಲಕಾರಿ ಶೀರ್ಷಿಕೆ ಸಿಕ್ಕಿದೆ.

ಸಂಗೀತಾ ಭಟ್, ಬಾಲು ನಾಂಗೇಂದ್ರ ಹೊಸ ಚಿತ್ರಕ್ಕೆ ಶೀರ್ಷಿಕೆ ಸಿಕ್ಕಿತು
ಬಾಲು ನಾಗೇಂದ್ರ
Published On :
ಬೆಂಗಳೂರು:  ಸಂಗೀತಾ ಭಟ್ ಹಾಗೂ ಬಾಲು ನಾಂಗೇಂದ್ರ ಅವರ ಮುಂಬರುವ ಚಿತ್ರಕ್ಕೆ ಕುತೂಹಲಕಾರಿ ಶೀರ್ಷಿಕೆ ಸಿಕ್ಕಿದೆ. ಸದಸ್ಯರೆಲ್ಲರೊಡನೆ ಚರ್ಚಿಸಿದ ಬಳಿಕ ಚಿತ್ರಕ್ಕೆ ’ಕಪಟ ನಾಟಕ ಸೂತ್ರಧಾರಿ’ ಎಂದು ಹೆಸರಿಡಲು ಚಿತ್ರತಂಡವು ತೀರ್ಮಾನಿಸಿದೆ.
ಕೆ.ವೇಣುಗೋಪಾಲ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ರಥಮ ಚಿತ್ರ ಇದಾಗಿದ್ದು ಮಹಿಳಾ ಕೇಂದ್ರಿತವಾಗಿರುವ ಈ ಚಿತ್ರದ ಕಥೆ ಕೇಳಿದ ನಾಯಕಿ ಸಂಗೀತಾಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಗಮನಿಸಬೇಕಾಂದ ಅಂಶವೆಂದರೆ ಕೇವಲ ವಾರಾಂತ್ಯಗಳಲ್ಲಷ್ಟೇ ಚಿತ್ರೀಕರಣ ನಡೆಸಲಾಗಿದೆ.
ಸಂಗೀತಾ ಇಲ್ಲಿ ಮದ್ಯಮವರ್ಗದ ಹುಡುಗಿಯಾಗಿ ಅಭಿನಯಿಸಿಉತ್ತಿದ್ದಾರೆ. ಗಾರ್ಮೆಂಟ್ ಉದ್ಯೋಗಿಯಾಗಿ ಕಾಣಿಸಿಕೊಳ್ಳುತ್ತಿರುವ ಇವರು ಆಟೋ ಚಾಲಕನಾಗಿ ಕಾಣಿಸಿಕೊಳ್ಳುತ್ತಿರುವ ಬಾಲು ನಾಗೇಂದ್ರಗೆ ಸಾಥ್ ನೀಡಲಿದ್ದಾರೆ.
Story image
ಇದಾಗಲೇ ’ಅನುಕ್ತ’, ’ಆಯ್ದು ಉಳಿದವರು’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಸಂಗೀತಾಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಧ್ಯ ನಾವು ’ಕಪಟ ನಾಟಕ ಸೂತ್ರಧಾರಿ’ ಚಿತ್ರ ಎಂದು ಬಿಡುಗಡೆಯಾಗಲಿದೆ, ಹೇಗೆ ಸದ್ದು ಮಾಡಲಿದೆ ಎಂದು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.