ಸಿನಿಮಾ ಸುದ್ದಿ

ಕ್ರಿಸ್ಟೋಫರ್‌ ನೊಲನ್‌- ಕಮಲಹಾಸನ್ ಭೇಟಿ: ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳ ಮಹಾಪೂರ!

ಬ್ಯಾಟ್‌ ಮ್ಯಾನ್‌ ಚಿತ್ರ ಸರಣಿಯ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಅವರನ್ನು ಹಿರಿಯ ನಟ ಕಮಲ ಹಾಸನ್ ಭೇಟಿಮಾಡಿದ್ದಾರೆ. ...

ಕ್ರಿಸ್ಟೋಫರ್‌ ನೊಲನ್‌- ಕಮಲಹಾಸನ್ ಭೇಟಿ: ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳ ಮಹಾಪೂರ!
ಕಮಲ ಹಾಸನ್-ಕ್ರಿಸ್ಟೋಫರ್‌ ನೊಲನ್‌-
Published On :
ನವದೆಹಲಿ: ಬ್ಯಾಟ್‌ ಮ್ಯಾನ್‌ ಚಿತ್ರ ಸರಣಿಯ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಅವರನ್ನು ಹಿರಿಯ ನಟ ಕಮಲ ಹಾಸನ್ ಭೇಟಿಮಾಡಿದ್ದಾರೆ. 
ಕ್ರಿಸ್ಟೋಫರ್‌ ನೊಲನ್‌ ಅವರ ಭೇಟಿಯ ಫೋಟೋವನ್ನು ನಟ ಕಮಲ ಹಾಸನ್‌ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. 
‘ರಿಫ್ರೇಮಿಂಗ್‌ ದಿ ಫೀಚರ್‌ ಆಫ್‌ ಫಿಲಂ’ ಕಾರ್ಯಕ್ರಮದ ನಿಮಿತ್ತ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಮತ್ತು ವಿಷುವಲ್‌ ಆರ್ಟಿಸ್ಟ್‌ ಟಕಿಟಾ ದೀನ್‌ ಎರಡು ದಿನ ಭಾರತ ಪ್ರವಾಸಲ್ಲಿದ್ದಾರೆ.
ನಟ–ನಿರ್ದೇಶಕ ಕಮಲ್‌ ಹಾಸನ್‌ ಶನಿವಾರ ನೊಲನ್‌ ಅವರನ್ನು ಭೇಟಿಯಾಗಿದ್ದು, ‘ಅವರ ಡನ್‌ಕಿರ್ಕ್‌ ಸಿನಿಮಾವನ್ನು ಡಿಜಿಟಲ್‌ ಫಾರ್ಮ್ಯಾಟ್‌ನಲ್ಲಿ ನೋಡಿದ್ದಕ್ಕೆ ಕ್ಷಮೆಕೇಳಿ, ಅದಕ್ಕೆ ಪ್ರತಿಯಾಗಿ ಹೇ ರಾಮ್‌ ಚಿತ್ರವನ್ನು ಡಿಜಿಟಲ್‌ ಫಾರ್ಮ್ಯಾಟ್‌ನಲ್ಲಿ ಅವರಿಗಾಗಿ ಕಳುಹಿಸುತ್ತಿದ್ದೇನೆ. ಅವರು ಪಾಪನಾಸಂ ಚಿತ್ರವನ್ನು ನೋಡಿದ್ದಾರೆ ಎಂದು ತಿಳಿದು ಆಶ್ಚರ್ಯ ಉಂಟಾಯಿತು’ ಎಂದು ಟ್ವೀಟ್ ಮಾಡಿದ್ದಾರೆ. 
ಫಿಲಂ ಹೆರಿಟೇಜ್‌ ಫೌಂಡೇಷನ್‌ನ ಸಂಸ್ಥಾಪಕ ನಿರ್ದೇಶಕರಾದ ಶಿವೇಂದರ್‌ ಸಿಂಗ್‌ ದುಂಗಾರ್‌ಪುರ್‌ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ನೊಲನ್‌ ಅವರ ಡನ್‌ಕಿರ್ಕ್ ಮತ್ತು ಇಂಟರ್‌ಸ್ಟೆಲ್ಲರ್‌ ಚಿತ್ರಗಳು ಪ್ರದರ್ಶನ ಕಾಣಲಿವೆ.
ಇನ್ನೂ ಕಮಲ ಹಾಸನ್ ಮತ್ತು ನೊಲನ್ ಭೇಟಿಯಾದ ವಿಷಯ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ, ಇಬ್ಬರು ಮಹಾ ದಿಗ್ಗಜರುಗಳ ಸಂಗಮ ಎಂದೆಲ್ಲಾ ಕಮೆಂಟ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.