ಸ್ಲೋ ಅಂಡ್ ಸ್ಟಡಿ ವಿನ್ ದಿ ರೇಸ್: ಲಾಸ್ಯ ನಾಗ್ ಸಿದ್ದಾಂತ
ಬಿಗ್ ಬಾಸ್ ಮನೆಗೆ ತೆರಳಿದ್ದ, ಶ್ರದ್ಧಾ ಶ್ರೀನಾಥ್ ಹಾಗೂ ಹಿತ ಚಂದ್ರಶೇಖರ್ ಈಗಾಗಲೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ, ...

Published On :
ಬೆಂಗಳೂರು: ಬಿಗ್ ಬಾಸ್ ಮನೆಗೆ ತೆರಳಿದ್ದ, ಶ್ರದ್ಧಾ ಶ್ರೀನಾಥ್ ಹಾಗೂ ಹಿತ ಚಂದ್ರಶೇಖರ್ ಈಗಾಗಲೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ, ಆದರೆ ಇವರುಗಳ ಜೊತೆ ಬಿಗ್ ಬಾಸ್ ಮನೆಗೆ ತೆರಳಿದ್ದ ಲಾಸ್ಯ ನಾಗ್ ನಿಧಾನವಾಗಿ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.
ಬೇರೆ ನಟಿಯರಿಗೆ ದೊಡ್ಡ ದೊಡ್ಡ ಆಫರ್ ಗಳು ಸಿಕ್ಕಿವೆ, ಆದರೆ ನಿಧಾನವಾಗಿ ಇಂಡಸ್ಟ್ರಿಯಲ್ಲಿ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ, ಸ್ಲೋ ಅಂಡ್ ಸ್ಟಡಿ ವಿನ್ ದಿ ರೇಸ್ ಎಂಬ ಗಾದೆ ಮಾತಿನಂತೆ ನಡೆಯಲು ತೀರ್ಮಾನಿಸಿದ್ದಾರೆ. ದೊಡ್ಡ ಪರದೆ ಮೇಲೆ ತಮ್ಮನ್ನು ನೋಡಲು ಲಾಸ್ಯ ಕಾಯುತ್ತಿದ್ದಾರೆ.
ಮಂಗಳವಾರ ರಜಾದಿನ, ಅಸತೋಮ ಸದ್ಗಮಯ ಸಿನಿಮಾದಲ್ಲಿ ರಾಧಿಕಾ ಚೇತನ್ ಜೊತೆ ಪರದೆ ಹಂಚಿಕೊಂಡಿದ್ದಾರೆ,ಇನ್ನೂ ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್ ಹಾಗೂ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾಗಳಲ್ಲಿ ಲಾಸ್ಯ ನಟಿಸುತ್ತಿದ್ದಾರೆ.
ಆದರೆ ಯುವಿನ್ ಮೊದಲ ನಿರ್ದೇಶನದ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿರುವ ಲಾಸ್ಯ ತುಂಬಾ ಉತ್ಸುಕರಾಗಿದ್ದಾರೆ.
ಮೊದಲ ಸಿನಿಮಾ ಶೂಟಿಂಗ್ ಶೆಡ್ಯೂಲ್ ಮುಗಿಸಿರುವ ಲಾಸ್ಯ ಏಪ್ರಿಲ್ 2 ರಿಂದ ತಮ್ಮ2 ನೇ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ, ಮಂಗಳವಾರ ರಜಾದಿನ ತುಂಬಾ ಸ್ವಾರಸ್ಯಕರ ಕಥೆಯಾಗಿದೆ, ಇದು ಕಮರ್ಷಿಯಲ್ ಸಿನಿಮಾವಲ್ಲ, ಎಲ್ಲ ಪಾತ್ರಗಳು ಮನರಂಜನೆ ನೀಡುತ್ತವೆ ಹಾಗೂ ಆಸಕ್ತಿದಾಯಕವಾಗಿವೆ, ಈ ಸಿನಿಮಾದಲ್ಲಿ ವ್ಯಕ್ತಿಯೊಬ್ಬರ ಸಾಧನೆ ಹಾಗೂ ಪ್ರಯಾಣದ ಕಥೆಯಾಗಿದೆ ಎಂದು ಹೇಳಿದ್ದಾರೆ.
ಈ ಸಿನಿಮಾದ ಹೀರೋ ಹೆಸರನ್ನು ಲಾಸ್ಯ ಬಹಿರಂಗ ಪಡಿಸಿಲ್ಲ, ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್ ಜೊತೆ ನಟಿಸುತ್ತಿದ್ದಾರೆ. ರೇಸ್ ನಲ್ಲಿ ತಾನು ಹಿಂದೆ ಇರುವುದಾಗಿ ಒಪ್ಪಿಕೊಂಡಿರುವ ಲಾಸ್ಯ, ತಮ್ಮ ಸ್ನೇಹಿತರಾದ ಸಂಯುಕ್ತ ಹೆಗಡೆ, ಶ್ರದ್ಧಾ ಶ್ರೀನಾಥ್ ಮತ್ತು ಶೃತಿ ಹರಿಹರನ್ ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.
ನಿಧಾನವಾಗಿ ನೀವು ಕೆಲಸ ಆರಂಭಿಸಿದರೇ ಉತ್ತಮ ಮಾರ್ಗದಲ್ಲಿ ಒಳ್ಳೆಯ ಹೆಸರು ಗಳಿಸಬಹುದಾಗಿದೆ, ಇದರಿಂದ ನಾನು ಸಂತೋಷವಾಗಿದ್ದೇನೆ, ಆದರೆ ತಮ್ಮ ಸಿನಿಮಾ ಪ್ರಯಾಣ ಯಶಸ್ವಿಯಾಗಿರುತ್ತದೆ ಎಂದು ಹೇಳಿದ್ದಾರೆ, ಹಾದಿ ಕಠಿಣವಾಗಿದ್ದರೇ ಉತ್ತಮ ಪಾಠ ಕಲಿಯುತ್ತೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


