ಶೂಟಿಂಗ್ ವೇಳೆ ಬಿಗ್ ಬಿ ಅಸ್ವಸ್ಥ: ಜೋಧ್ ಪುರ್ ಆಸ್ಪತ್ರೆಗೆ ದಾಖಲು
ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಶೂಟಿಂಗ್ ವೇಳೆ ನಟ ಅಮಿತಾಬ್ ಬಚ್ಚನ್ ಅಸ್ವಸ್ಥರಾದ ಕಾರಣ ಅವರನ್ನು ಜೋಧ್ ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ....

Published On :
ಜೋಧ್ ಪುರ: ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಶೂಟಿಂಗ್ ವೇಳೆ ನಟ ಅಮಿತಾಬ್ ಬಚ್ಚನ್ ಅಸ್ವಸ್ಥರಾದ ಕಾರಣ ಅವರನ್ನು ಜೋಧ್ ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಬೆಳಗ್ಗೆ ತಮ್ಮ ಬ್ಲಾಗ್ ನಲ್ಲಿ ಸ್ವತಃ ಅಮಿತಾಬ್ ಬಚ್ಚನ್ ಅವರೇ ಬರೆದುಕೊಂಡಿದ್ದಾರೆ, ಶೂಟಿಂಗ್ ವೇಳೆ ಏನಾಯಿತು ಎಂಬುದರ ಬಗ್ಗೆ ಬಿಗ್ ಯಾವುದೇ ವಿವರ ನೀಡಿಲ್ಲ,
ಅಲ್ಲಿಯೇ ಇದ್ದ ವೈದ್ಯರ ತಂಡ ಪರೀಕ್ಷಿಸಿ ಜೋಧ್ ಪುರ ಆಸ್ಪತ್ರೆಗೆ ದಾಖಲಿಸಿತು, ನಾನು ಸದ್ಯ ವಿಶ್ರಾಂತಿ ತೆಗೆದುಕೊಳ್ಳಬೇಕು, ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತೇನೆ ಎಂದು ಹೇಳಿದ್ದಾರೆ.
ಏನನ್ನಾದರೂ ಸಾಧನೆ ಮಾಡಬೇಕು ಎಂದಾಗ ಇಂಥಹ ಹೋರಾಟ ನಡೆಯುವ ಅವಶ್ಯಕತೆಯಿದೆ. ಯಾವುದೇ ಹೋರಾಟವಿಲ್ಲದೇ ನೋವಿಲ್ಲದೇ ಕಣ್ಣೀರು ಹಾಗೂ ಬೆವರು ಹನಿಯಿಲ್ಲದೇ ಏನನ್ನೂ ಸಾಧಿಸಲಾಗದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Amitabh Bachchanಅಮಿತಾಬ್ ಬಚ್ಚನ್ಆಸ್ಪತ್ರೆಜೋಧ್ ಪುರThugs Of HindostanJodhpur. Hospitalಥಗ್ಸ್ ಆಫ್ ಹಿಂದೂಸ್ತಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


