ಗೋವಾ ಬೀಚ್‌ನಲ್ಲಿ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರತಂಡ
ಪ್ರೀತಂ ಗುಬ್ಬಿ ನಿರ್ದೇಶನದ ಜಾನಿ ಮೇರಾ ನಾಮ್ ಚಿತ್ರದ ಸೀಕ್ವೆಲ್ ಜಾನಿ ಜಾನಿ ಎಸ್ ಪಪ್ಪಾ ಚಿತ್ರದ ಶೂಟಿಂಗ್ ಗೋವಾದ ಕಡಲ ಕಿನಾರೆಯಲ್ಲಿ ಭರದಿಂದ ಸಾಗುತ್ತಿದೆ...

Published On :
ಪ್ರೀತಂ ಗುಬ್ಬಿ ನಿರ್ದೇಶನದ ಜಾನಿ ಮೇರಾ ನಾಮ್ ಚಿತ್ರದ ಸೀಕ್ವೆಲ್ ಜಾನಿ ಜಾನಿ ಎಸ್ ಪಪ್ಪಾ ಚಿತ್ರದ ಶೂಟಿಂಗ್ ಗೋವಾದ ಕಡಲ ಕಿನಾರೆಯಲ್ಲಿ ಭರದಿಂದ ಸಾಗುತ್ತಿದೆ.
ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ ಚಿತ್ರದ ಹಾಡೊಂದನ್ನು ನಿರ್ದೇಶಕ ಪ್ರೀತಂ ಗುಬ್ಬಿ ಅವರು ಗೋವಾದಲ್ಲಿ ಚಿತ್ರೀಕರಿಸುತ್ತಿದ್ದಾರೆ. ಹಾಡಿನ ಚಿತ್ರೀಕರಣ ಕುರಿತಂತೆ ಕೆಲ ಫೋಟೋಗಳನ್ನು ಚಿತ್ರ ತಂಡ ಸಿಟಿ ಎಕ್ಸ್ ಪ್ರೆಸ್ ಜತೆ ಹಂಚಿಕೊಂಡಿದೆ.
ಚಿತ್ರ ಪೋಸ್ಟ್ ಪ್ರೊಡೆಕ್ಷನ್ ಅಂತಿಮ ಹಂತದಲ್ಲಿದೆ. ಚಿತ್ರವನ್ನು ಸೆನ್ಸಾರ್ ಬೋರ್ಡ್ ಗೆ ಕಳುಹಿಸುವ ಮುನ್ನ ಕೆಲ ಹಾಡುಗಳನ್ನು ಚಿತ್ರದ ಫೈನಲ್ ಕಾಪಿಗೆ ಜೋಡಿಸಬೇಕಿದೆ ಎಂದು ನಿರ್ದೇಶಕ ಪ್ರೀತಂ ಗುಬ್ಬಿ ಹೇಳಿದ್ದಾರೆ. ಇನ್ನು ಮಾರ್ಚ್ 10ರಂದು ಅದ್ಧೂರಿಯಾಗಿ ಆಡಿಯೋ ಲಾಂಚ್ ಮಾಡಲು ನಿರ್ಮಾಪಕರು ರೆಡಿಯಾಗಿದ್ದು ಚಿತ್ರದ ಮಾರ್ಚ್ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದರು.
ಇನ್ನು ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದು ಹಾಡುಗಳು ಕೇಳಲು ಹಿಂಪಾಗಿದೆ. ದುನಿಯಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ, ದತ್ತಾತ್ರೆಯ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sandalwoodದುನಿಯಾ ವಿಜಯ್Rachita Ramರಚಿತಾ ರಾಮ್duniya vijayಸ್ಯಾಂಡಲ್ವುಡ್Preetham Gubbiಪ್ರೀತಂ ಗುಬ್ಬಿJohhny Johnny Yes Papaಜಾನಿ ಜಾನಿ ಎಸ್ ಪಪ್ಪಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


