ಸಿನಿಮಾ ಸುದ್ದಿ

ಆರ್ ಜಿವಿಯ ಭೈರವ ಗೀತದಲ್ಲಿ ಧನಂಜಯ್ ಗೆ ಇರಾ ನಾಯಕಿ

ಧನಂಜಯ್ ನಟನೆಯ ಭೈರವ ಗೀತ ಚಿತ್ರಕ್ಕೆ ಹೊಸ ನಾಯಕಿ ಇರಾ ಆಗಮನವಾಗಿದೆ...

ಆರ್ ಜಿವಿಯ ಭೈರವ ಗೀತದಲ್ಲಿ ಧನಂಜಯ್ ಗೆ ಇರಾ ನಾಯಕಿ
ನಟಿ ಇರಾ ಮತ್ತು ಎಡ ಚಿತ್ರದಲ್ಲಿ ಭೈರವಗೀತ ಚಿತ್ರದ ಮೊದಲ ನೋಟ
Published On :

ಧನಂಜಯ್ ನಟನೆಯ ಭೈರವ ಗೀತ ಚಿತ್ರಕ್ಕೆ ಹೊಸ ನಾಯಕಿ ಇರಾ ಆಗಮನವಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರವನ್ನು ಹೊಸಬ ನಿರ್ದೇಶಕ ಸಿದ್ದಾರ್ಥ ನಿರ್ದೇಶಿಸುತ್ತಿದ್ದಾರೆ. ಹೈದರಾಬಾದ್ ನ ಹಳ್ಳಿ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರ ನಿರ್ಮಾಣದ ಚಿತ್ರದಲ್ಲಿ ವೃತ್ತಿ ಜೀವನ ಆರಂಭಿಸಿರುವ ಇರಾಗೆ ಆರಂಭದಲ್ಲಿಯೇ ಉತ್ತಮ ಚಿತ್ರ ಸಿಕ್ಕಿದೆ ಎನ್ನಬಹುದು. ನಟನೆಯ ಕೆಲವು ತರಬೇತಿ ಪಡೆದುಕೊಂಡಿರುವ ಇರಾ ಭೈರವ ಗೀತಕ್ಕೆ ಕಾಲಿಟ್ಟಿದ್ದಾರೆ. ಭಾಸ್ಕರ್ ಕೂಡ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಹಿಂಸಾಚಾರ ಪೀಡಿತ ವರ್ಗದಲ್ಲಿ ಒಂದು ಪ್ರೀತಿ ಪ್ರೇಮದ ಕಥೆ ಹೇಳುವ ಚಿತ್ರ ಭೈರವ ಗೀತ. ಚಿತ್ರ ನಿರ್ದೇಶಕರು ಕಲ್ಪನೆ ಮಾಡಿಕೊಂಡಂತೆ ಪಾತ್ರವನ್ನು ನಿಭಾಯಿಸಲು ನಾನು ಸಮರ್ಥನಾಗಿದ್ದೇನೆ ಎಂದು ಭಾವಿಸುತ್ತೇನೆ. ಪಾತ್ರದಲ್ಲಿ ನಟನೆಗೆ ಅವಕಾಶವಿದೆ ಎನ್ನುತ್ತಾರೆ ಇರಾ.

ಊಳಿಗಮಾನ್ಯ ಮನಸ್ಸಿನ ದಬ್ಬಾಳಿಕೆಗಾರರ ಮತ್ತು ದೀನರ ನಡುವಿನ ಯುದ್ಧದಲ್ಲಿ ಬಂಡಾಯಗಾರನಾಗಿ ಬದಲಾಗುವ ಕಥೆಯನ್ನು ಭೈರವ ಗೀತ ಒಳಗೊಂಡಿದೆ. ದಬ್ಬಾಳಿಕೆ ಮಾಡುವ ಭೂ ಮಾಲೀಕನ ಮಗಳ ಪಾತ್ರವನ್ನು ನಿಭಾಯಿಸುತ್ತಿದ್ದೇನೆ ಎಂದು ಇರಾ ತಮ್ಮ ಪಾತ್ರದ ಬಗ್ಗೆ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.