ನಾನು ಆರ್ಡಿನರಿಯಲ್ಲ, ನನ್ನದು ಶ್ರೀಮಂತ ಪರಂಪರೆ: ಅಭಿಷೇಕ್
ಅಭಿಷೇಕ್ ಗೌಡ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಚೊಚ್ಚಲ ಚಿತ್ರಕ್ಕೆ ಅಮರ್ ಎಂದು ಈಗಾಗಲೇ ಹೆಸರಿಡಲಾಗಿದ್ದು, ...

Published On :
ಬೆಂಗಳೂರು: ಅಭಿಷೇಕ್ ಗೌಡ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಚೊಚ್ಚಲ ಚಿತ್ರಕ್ಕೆ ಅಮರ್ ಎಂದು ಈಗಾಗಲೇ ಹೆಸರಿಡಲಾಗಿದ್ದು, ಸಹಜವಾಗಿಯೇ ರೆಬೆಲ್‌ಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ನಾಗಶೇಖರ್ ನಿರ್ದೇಶನದ ಅಮರ್ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ, ಕೊಯಮತ್ತೂರಿನಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಆಟೋಮೊಬೈಲ್ ಕ್ಷೇತ್ರ ನನ್ನ ಅಚ್ಚುಮೆಚ್ಚು, ಹೀಗಾಗಿ ನನಗೆ ಸರಿಯಾದ ಕಥೆಯೇ ಸಿಕ್ಕಿದೆ, ನಾನು ಯಾವಾಗಲೂ ಕಾರ ಅನ್ನು ಸ್ಪೀಡ್ ಆಗಿ ಡ್ರೈವ್ ಮಾಡುತ್ತೇನೆ, ನನ್ನ ಅಭಿರುಚಿಗೆ ತಕ್ಕ ಪಾತ್ರದ ಮೂಲಕ ನಾನು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ ಎಂದು ಅಭಿಷೇಕ್ ಹೇಳಿದ್ದಾರೆ.
ಪ್ರತಿಯೊಬ್ಬ ಹೊಸಬರಿಗೂ ಬೈಕ್ ರೈಡಿಂಗ್ ಸವಾಲಾಗಿರುತ್ತದೆ, ಅದೃಷ್ಟವಶಾತ್ ನಾನು ಬೇಗ ಪಿಕ್ ಅಪ್ ಆಗಿದ್ದೇನೆ, ಈ ಸಿನಿಮಾದಲ್ಲಿ ವೃತ್ತಿಪರ ಬೈಕ್ ರೈಡರ್ ಗಳಿದ್ದಾರೆ, ಅವರ ಜೊತೆಗಿನ ನನ್ನ ಚರ್ಚೆ ನನ್ನ ಪಾತ್ರಕ್ಕೆ ಅನುಕೂಲವಾಗಿದೆ.
ಇದಕ್ಕಿಂತ ಉತ್ತಮವಾದದ್ದನ್ನು ನಾನು ಕೇಳುವುದಿಲ್ಲ, ನಿಜಕ್ಕೂ ಒತ್ತಡವಿರುತ್ತದೆ. ಆದರೆ ಚಿತ್ರತಂಡ ರಿಲ್ಯಾಕ್ಸಡ್ ಮತ್ತು ತುಂಬಾ ಸಪೋರ್ಟಿವ್ ಆಗಿದೆ, ಆರಂಭದ ದಿನಗಳಲ್ಲಿ ತುಂಬಾ ತಮಾಷೆಯಿತ್ತು, ಕೆಲವು ಸ್ನೇಹಿತರಿಗೆ ನನ್ನನ್ನು ಪರದೆ ಮೇಲೆ ಕಲ್ಪಿಸಿಕೊಳ್ಳಲು ಸಾದ್ಯವಾಗಿಲ್ಲ, ನನ್ನ ಆಯ್ಕೆ ಅವರಿಗೆಲ್ಲಾ ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ.
ನಾನು ಆರ್ಡಿನರಿ ನ್ಯೂ ಕಮರ್ ಅಲ್ಲ, ನನ್ನ ಪೋಷಕರು ಸ್ಟಾರ್ ಗಳು, ನಾನು ಶ್ರೀಮಂತ ಪರಂಪರೆಯಿಂದ ಬಂದಿದ್ದೇನೆ. ಚಿತ್ರರಂಗಕ್ಕೆ ಬರುವ ಬೇರೆ ಹೊಸಬರಿಗಿಂತ ನಾನು ವಿಭಿನ್ನಅವರು ಎದುರಿಸಬೇಕಾದ ಸಮಸ್ಯೆಗಳು ನನಗಿಲ್ಲ, ಏಕೆಂದರೇ ನಾನು ಕಲಾವಿದರ ಕುಟುಂಬದಿಂದ ಬಂದಿದ್ದೇನೆಸ ನನಗೆ ಜವಾಬ್ದಾರಿಯಿದೆ, ನಾನು ಅಹಂಕಾರದ ವ್ಯಕ್ತಿಯಲ್ಲ, ನನ್ನ ಕಾರ್ಯಕ್ಷಮತೆ ಮೇಲೆ ಈ ಚಿತ್ರದ ಯಶಸ್ಸು ನಿಂತಿದೆ. ಇಲ್ಲಿನ ನನ್ನ ಹೋರಾಟ ಸಂಪೂರ್ಣ ವಿಭಿನ್ನ, ಬೇರೆ ಹೊಸಬರು ಅವಕಾಶಕ್ಕಾಗಿ ಕಾಯುತ್ತಾರೆ, ಜೊತೆಗೆ ಗುರುತಿಸಿಕೊಳ್ಳಲು ಕಷ್ಟ ಎಂದು ಹೇಳಿದ್ದಾರೆ.
ಅಭಿಷೇಕ್ ಮಗುವಾಗಿದ್ದಾಗಲೇ ತನ್ನ ತಂದೆಯ ತಾಯಿಯ ಜೊತೆ ಸಿನಿಮಾ ಸೆಟ್ ಗೆ ಹೋಗುತ್ತಿದ್ದ ಅಭಿಷೇಕ್, ವಯಸ್ಸಿಗೆ ಬಂದ ಮೇಲೆ, ಇದೇ ಕ್ಷೇತ್ರಕ್ಕೆ ಬಂದಿದ್ದಾರೆ. ಸಿನಿಮಾವನ್ನೇ ನನ್ನ ವೃತ್ತಿಯಾಗಿಸಿಕೊಂಡಿದ್ದೇನೆ, ನಾನು ಹೆಚ್ಚಿನ ಪ್ರಯತ್ನವನ್ನು ಹಾಗುತ್ತಿದ್ದೇವೆ, ಅಭಿಮಾನಿಗಳು ಸಿನಿಮಾ ನೋಡುವುದನ್ನು ನಾನು ಇಷ್ಟ ಪಡುತ್ತೆನೆ, ನನ್ನಸಿನಿಮಾ ಕೂಡ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


