'ನಟಸಾರ್ವಭೌಮ' ಚಿತ್ರಕ್ಕೆ ಅನುಪಮಾ ಪರಮೇಶ್ವರನ್ ಮತ್ತೊಬ್ಬ ನಾಯಕಿ?
ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಪವನ್ ...

ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಪವನ್ ಒಡೆಯರ್ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ಪ್ರೊಡಕ್ಷನ್ ನಡಿ ನಿರ್ಮಾಣವಾಗುತ್ತಿದ್ದು ಚಿತ್ರದ ಶೂಟಿಂಗ್ ಆರಂಭದಲ್ಲಿ ಇಬ್ಬರು ನಾಯಕಿಯರು ಎಂದು ಚಿತ್ರತಂಡ ಘೋಷಿಸಿತ್ತು.
ಚಿತ್ರದಲ್ಲಿ ಒಬ್ಬರು ನಾಯಕಿ ರಚಿತಾ ರಾಮ್ ಆಗಿದ್ದರೆ, ಇನ್ನೊಬ್ಬರ ಹೆಸರನ್ನು ಚಿತ್ರತಂಡ ಬಹಿರಂಗಪಡಿಸಿರಲಿಲ್ಲ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಅವರನ್ನು ಚಿತ್ರತಂಡ ಸಂಪರ್ಕಿಸಿದೆ.
ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆಯಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅನುಪಮಾ ಪರಮೇಶ್ವರನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಪ್ರೇಮಂ ಎಂಬ ಹಿಟ್ ಚಿತ್ರದ ಮೂಲಕ ಮಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ಅನುಪಮಾ ಟಾಲಿವುಡ್ ನಲ್ಲಿ ಕೂಡ ಹೆಸರು ಗಳಿಸಿದ್ದಾರೆ.
ತೆಲುಗಿನಲ್ಲಿ ಪ್ರೇಮಂ ರಿಮೇಕ್ ನಲ್ಲಿ ನಟಿಸುತ್ತಿರುವ ಅನುಪಮಾ ಧರ್ಮಯೋಗಿ, ಸಾತಮಾನಂ ಭವಟಿ, ಜೊಮೊಂತೆ ಸುವಿಶೇಷಂಗಳ್, ವನ್ನದಿ ಒಕಟೆ ಜಿಂದಗಿ ಮತ್ತು ಇತ್ತೀಚಿನ ಕೃಷ್ಣಾರ್ಜುನ ಯುಧಮ್ ಚಿತ್ರದಲ್ಲಿ ನಾನಿ ಜೊತೆ ನಟಿಸಿದ್ದಾರೆ. ತಮಿಳಿನಲ್ಲಿ ಧನುಷ್ ಜೊತೆ ಕೋಡಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


