ಸಿನಿಮಾ ಸುದ್ದಿ

ಜೂನ್ 28ಕ್ಕೆ ವಿಲ್ಲನ್ ಟೀಸರ್ ರಿಲೀಸ್: ಟೀಸರ್ ನೋಡಲು ಪ್ರವೇಶ ಶುಲ್ಕ ನಿಗದಿ ಯಾಕೆ ಗೊತ್ತೆ?

ಬಹು ನಿರೀಕ್ಷಿತ ದಿ ವಿಲ್ಲನ್ ಸಿನಿಮಾ ಟೀಸರ್ ಜೂನ್ 28ಕ್ಕೆ ಬಿಡುಗಡೆಯಾಗಲಿದ್ದು, ಶಿವರಾಜ್ ಕುಮಾರ್ ಮತ್ತು ಪ್ರೇಮ್ ಅಭಿಮಾನಿಗಳು ಸಖತ್ ...

ಜೂನ್ 28ಕ್ಕೆ ವಿಲ್ಲನ್ ಟೀಸರ್ ರಿಲೀಸ್: ಟೀಸರ್ ನೋಡಲು ಪ್ರವೇಶ ಶುಲ್ಕ ನಿಗದಿ ಯಾಕೆ ಗೊತ್ತೆ?
ವಿಲ್ಲನ್ ಸ್ಟಿಲ್
Published On :
ಬೆಂಗಳೂರು: ಬಹು ನಿರೀಕ್ಷಿತ ದಿ ವಿಲ್ಲನ್ ಸಿನಿಮಾ ಟೀಸರ್ ಜೂನ್ 28ಕ್ಕೆ ಬಿಡುಗಡೆಯಾಗಲಿದ್ದು, ಶಿವರಾಜ್ ಕುಮಾರ್  ಮತ್ತು ಪ್ರೇಮ್ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ.
ಅಭಿಮಾನಿಗಳಿಗೆ ಪ್ರೇಮ್ ಡಬಲ್ ಗಿಫ್ಟ್ ನೀಡುತ್ತಿದ್ದಾರೆ, ನಿರ್ದೇಶಕ ಪ್ರೇಮ್ 2 ಟೀಸರ್ ರಿಲೀಸ್ ಮಾಡುತ್ತಿದ್ದಾರೆ, ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರ ಪ್ರತ್ಯೇಕ ಟೀಸರ್  ಅನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿ ಜಿ,ಟಿ ಮಾಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ
ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಟೀಸರ್ ರಿಲೀಸ್ ಗೆ ಪ್ರವೇಶ ದರ ನಿಗದಿ ಮಾಡಲಾಗಿದೆ, ಟೀಸರ್ ನೋಡಲು ಬರುವವರು 500 ರು ಪ್ರವೇಶ ಶುಲ್ಕ ಪಾವತಿಸಬೇಕು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
ಟೀಸರ್ ಗೆ ಪ್ರವೇಶ ಶುಲ್ಕ ನಿಗದಿ ಮಾಡಿರುವುದಕ್ಕೆ ಕಾರಣವಿದೆ, ಇದು ಸಾಮಾಜಿಕ ಉದ್ದೇಶಕ್ಕಾಗಿ. ಈ ಹಣದಿಂದ ಚಿತ್ರರಂಗದಲ್ಲಿ  ಹಣಾಕಾಸಿನ ಸಮಸ್ಯೆ ಎದುರಿಸುತ್ತಿದ್ದು ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ನಿರ್ದೇಶಕರ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. 
ವಿಲ್ಲನ್ ಸಿನಿಮಾದಲ್ಲಿ ಆಮಿ ಜಾಕ್ಸನ್ ಹಾಗೂ ಮಿಥುನ್ ಚಕ್ರವರ್ತಿ ತೆಲುಗು ನಟ ಶ್ರೀಕಾಂತ್ ಮುಂತಾದವರು ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.