ಸಿನಿಮಾ ಸುದ್ದಿ

ಶ್ರೀಮುರುಳಿ ಹೊಸ ಚಿತ್ರ: 43 ಟೈಟಲ್ ಗಳಲ್ಲಿ 'ಭರಾಟೆ' ಫೈನಲ್!

43 ಟೈಟಲ್ ಗಳಲ್ಲಿ ಶ್ರೀಮುರುಳಿ ಭರಾಟೆ ಎಂಬ ಶೀರ್ಷಿಕೆ ಫೈನಲ್ ಮಾಡಿದ್ದಾರೆ. ಜೋರು ಎಂಬ ಪದಕ್ಕೆ ಪರ್ಯಾಯ ಪದ ಹೇಳಿ....

ಶ್ರೀಮುರುಳಿ ಹೊಸ ಚಿತ್ರ: 43 ಟೈಟಲ್ ಗಳಲ್ಲಿ 'ಭರಾಟೆ' ಫೈನಲ್!
ಶ್ರೀ ಮುರುಳಿ
Published On :
ಬೆಂಗಳೂರು: 43 ಟೈಟಲ್ ಗಳಲ್ಲಿ ಶ್ರೀಮುರುಳಿ  ಭರಾಟೆ ಎಂಬ ಶೀರ್ಷಿಕೆ ಫೈನಲ್ ಮಾಡಿದ್ದಾರೆ. ಜೋರು ಎಂಬ ಪದಕ್ಕೆ ಪರ್ಯಾಯ ಪದ ಹೇಳಿ, ಅದೇ ನನ್ನ ಮುಂದಿನ ಚಿತ್ರದ ಶೀರ್ಷಿಕೆ’ ಹೀಗೆಂದು ಶ್ರೀಮುರಳಿ ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಅವರ ಅಭಿಮಾನಿವರ್ಗದಲ್ಲಿ ಅವರ ಈ ಮಾತು ಕುತೂಹಲಕ್ಕೆ ಕಾರಣವಾಗಿತ್ತು. ಹಲವರು ಏನೇನೋ ಪದಗಳನ್ನು ಹುಡುಗಿ ಊಹೆಯನ್ನೂ ಮಾಡಿದ್ದರುಶ್ರೀಮುರಳಿ ಹೊಸ ಸಿನಿಮಾದ ಹೆಸರು ‘ಭರಾಟೆ’. 
ಭರ್ಜರಿ’ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ,ಇದು ಪಕ್ಕಾ ಎಂಟರ್‌ಟೈನ್ಮೆಂಟ್ ಪ್ಯಾಕೇಜ್ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.ಶ್ರೀಮುರಳಿ ಅವರಿಗೆ ಪಕ್ಕಾ ಮಾಸ್‌ ಅಭಿಮಾನಿಗಳಿದ್ದಾರೆ. ನಾನು ನನ್ನ ಹಿಂದಿನ ಎರಡೂ ಸಿನಿಮಾಗಳಲ್ಲಿ ಫ್ಯಾಮಿಲಿ ಎಮೊಶನ್ಸ್‌ ಇದ್ದವು. ಭರಾಟೆಯಲ್ಲಿ ಈ ಎರಡೂ ಬ್ಲೆಂಡ್ ಆಗಿರುತ್ತವೆ. ಎರಡೂ ವರ್ಗದ ಪ್ರೇಕ್ಷಕರಿಗೆ ತಲುಪುವಂಥ ಸಿನಿಮಾ ಇದು’ ಎನ್ನುತ್ತಾರೆ ಚೇತನ್.
ಬಾಲಿವುಡ್ ನಲ್ಲಿ ಕರಣ್ ಜೋಹರ್ ಕೆ ಅಕ್ಷರದಿಂದ ಚಿತ್ರಕ್ಕೆ ಟೈಟಲ್ ಇಡುವಂತೆ ಕನ್ನಡದಲ್ಲಿ  ಚೇತನ್ ಕುಮಾರ್ ಬ ಹೆಸರಿನಿಂದ ಸಿನಿಮಾ ತಯಾರಿಸಲು ಮುಂದಾಗಿದ್ದಾರೆ. ಬಹದ್ದೂರ್, ಭರ್ಜರಿ ನಂತರ ಈಗ ‘ಭರಾಟೆ’ಯ ಮೇಲೆ ನಿರೀಕ್ಷೆಯ ಗೋಪುರ ನಿರ್ಮಾಣವಾಗಲು ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.