ಇಸ್ಲಾದ್ದೀನ್ ನಿರ್ದೇಶನದ ಸಿನಿಮಾದಲ್ಲಿ ಸಿದ್ ಆಗಿ ನಟಿಸಲಿರುವ ನಟ ರಿಷಿ
ಆಪರೇಶನ್ ಅಲಮೇಲಮ್ಮ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪಾದಾರ್ಪಣೆ ಮಾಡಿದ ನಟ ರಿಷಿ...

ಆಪರೇಶನ್ ಅಲಮೇಲಮ್ಮ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪಾದಾರ್ಪಣೆ ಮಾಡಿದ ನಟ ರಿಷಿ ಇಸ್ಲಾದ್ದೀನ್ ನಿರ್ದೇಶನದ ಚಿತ್ರಕ್ಕಾಗಿ ಸಿದ್ ಆಗಿ ಬದಲಾಗುತ್ತಿದ್ದಾರೆ. ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟ ರಿಷಿಯ ಮುಂದಿನ ಚಿತ್ರದ ಬಗ್ಗೆ ಸದ್ಯದಲ್ಲಿಯೇ ಅಧಿಕೃತ ಘೋಷಣೆ ಹೊರಬೀಳಲಿದೆ.
ಅಮ್ರೇಜ್ ಸೂರ್ಯವಂಶ ನಿರ್ದೇಶನದಲ್ಲಿ ಸಿದ್ ಚಿತ್ರ ಮೂಡಿಬರಲಿದೆ. ರಿಷಿ ಮತ್ತು ಇಸ್ಲಾದ್ದೀನ್ ಉತ್ತಮ ಸ್ನೇಹಿತರು.
ಆಪರೇಷನ್ ಅಲಮೇಲಮ್ಮ ಮೂಲಕ ಗುರುತಿಸಿಕೊಂಡಿರುವ ನಟ ರಿಷಿ ತಮ್ಮ ಮುಂದಿನ ಚಿತ್ರವನ್ನು ಆರಿಸಿಕೊಳ್ಳುವಲ್ಲಿ ಜಾಗರೂಕರಾಗಿದ್ದಾರೆ. ಈ ಮಧ್ಯೆ ಹೇಮಂತ್ ಎ ರಾವ್ ನಿರ್ದೇಶನದ ಕವಲು ದಾರಿಯ ಶೂಟಿಂಗ್ ಮುಗಿಸಿದ್ದಾರೆ. ಮಂಜು ಮಾಂಡವ್ಯ ನಿರ್ದೇಶನದ ಶ್ರೀ ಭರತ ಬಾಹುಬಲಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ರಿಷಿ ಜಾಕಬ್ ವರ್ಗೀಸ್ ನಿರ್ಮಾಣದ ಮತ್ತೊಂದು ಇನ್ನೂ ಹೆಸರಿಡದ ಚಿತ್ರಕ್ಕೆ ಜೊತೆಯಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


