ಸತೀಶ್ ನೀನಾಸಂ ಜನ್ಮದಿನ: ಓಲ್ಡ್ ಮದ್ರಾಸ್ ರೋಡ್ ನತ್ತ ಎಲ್ಲರ ಚಿತ್ತ
ಇಂದು ಕನ್ನಡ ಚಿತ್ರನಟ ಸತೀಶ್ ನೀನಾಸಂ ಅವರ ಹುಟ್ಟು ಹಬ್ಬ. ಈ ವೇಳೆ ಎಲ್ಲರ ಚಿತ್ತ ಓಲ್ಡ್ ಮದ್ರಾಸ್ ರೋಡ್ ನತ್ತ ನೆಟ್ಟಿದೆ.

Published On :
ಬೆಂಗಳೂರು: ಇಂದು ಕನ್ನಡ ಚಿತ್ರನಟ ಸತೀಶ್ ನೀನಾಸಂ ಅವರ ಹುಟ್ಟು ಹಬ್ಬ. ಈ ವೇಳೆ ಎಲ್ಲರ ಚಿತ್ತ ಓಲ್ಡ್ ಮದ್ರಾಸ್ ರೋಡ್ ನತ್ತ ನೆಟ್ಟಿದೆ.
ಇದೇನು? ಓಲ್ಡ್ ಮದ್ರಾಸ್ ರೋಡ್ ಗೆ ಸತೀಶ್ ಗೆ ಏನು ಸಂಬಂಧ ಎಂದುಕೊಳ್ಳಬೇಡಿ. ಸತೀಶ್ ಮುಂದಿನ ಚಿತ್ರದ ಹೆಸರು ’ಓಲ್ಡ್ ಮದ್ರಾಸ್ ರೋಡ್’. ಇದರೊಡನೆ ಇನ್ನೊಂದು ಕುತೂಹಲಕರ ವಿಚಾರವೆಂದರೆ ’ಗೊಂಬೆಗಳ ಲವ್’ ಚಿತ್ರದ ನಾಯಕ ಅರುಣ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಥ್ರಿಲ್ಲರ್ ಕಥೆಯಾಧಾರಿತ ಈ ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತವಿದ್ದು ಅಬಿನ್ ರಾಜೇಶ್ ಛಾಯಾಗ್ರಹಣವಿದೆ. ಚಿತ್ರಕ್ಕೆ ರವಿ ವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ.ಇನ್ನು ಚಿತ್ರ ಬಿಡುಗಡೆಯ ವೇಳೆಗೆ ಚಿತ್ರದ ಸಂಬಂಧ ಇನೂ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಗೋದ್ರಾ, ಚಂಬಲ್, ಅಯೋಗ್ಯ ಚಿತ್ರದಂತೆಯೇ ಓಲ್ಡ್ ಮದ್ರಾಸ್ ರೋಡ್ ಸಹ ಕುತೂಹಲ ಹುಟ್ಟಿಸಿದೆ. ಏತನ್ಮಧ್ಯೆ ಸತೀಶ್ ಅವರ ಹುಟ್ಟು ಹಬ್ಬದ ನಿಮಿತ್ತ ಅಯೋಗ್ಯ ಚಿತ್ರತಂಡ ಜೂನ್ 20ರ ಮಧ್ಯರಾತ್ರಿ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ.
ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Rachita Ramರಚಿತಾ ರಾಮ್ಅರುಣ್ ಕುಮಾರ್Old madras roadSathish Ninasamಸತೀಶ್ ನಿನಾಸಮ್Arunkumarಓಲ್ಡ್ ಮದ್ರಾಸ್ ರೋಡ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


