ಅಭಿಷೇಕ್ ನಟನೆಯ 'ಅಮರ್' ಸಿನಿಮಾ ಶೂಟಿಂಗ್ ಆರಂಭಕ್ಕೆ ಕ್ಷಣಗಣನೆ!
: ಅಂಬರೀಷ್ ಪುತ್ರ ಅಭಿಷೇಕ್ ನಟನೆಯ ಅಮರ್ ಚಿತ್ರಕ್ಕೆ ಮೇ 28 ರಂದು ಮುಹೂರ್ತ ನಡೆದಿದ್ದು, ಶೂಟಿಂಗ್ ಗಾಗಿ ಎಲ್ಲಾ ಸಿದ್ದತೆ ನಡೆದಿದೆ..

Published On :
ಬೆಂಗಳೂರು: ಅಂಬರೀಷ್ ಪುತ್ರ ಅಭಿಷೇಕ್ ನಟನೆಯ ಅಮರ್ ಚಿತ್ರಕ್ಕೆ ಮೇ 28 ರಂದು ಮುಹೂರ್ತ ನಡೆದಿದ್ದು, ಶೂಟಿಂಗ್ ಗಾಗಿ ಎಲ್ಲಾ ಸಿದ್ದತೆ ನಡೆದಿದೆ. ಜೂನ್ 28 ರಂದು ಕೊಯಂಬತ್ತೂರಿನಲ್ಲಿ ರೇಸ್ ಟ್ರಾಕ್ ಸೆಟ್ ಅಪ್ ಮಾಡಿಈ ತಿಂಗಳ ಆಂತ್ಯದೊಳಗೆ ಶೂಟಿಂಗ್ ಆರಂಭವಾಗಲಿದೆ, ನಟಿ ತಾನ್ಯ ಹೋಪ್ ಕೂಡ ಸೆಟ್ ಗೆ ಹಾಜರಾಗಲಿದ್ದಾರೆ.
ಅಮರ್ ಚಿತ್ರದಲ್ಲಿ ಅಭಿಷೇಕ್ ಬೈಕ್ ರೈಡರ್ ಆಗಿದ್ದು, ಅಂತರರಾಷ್ಟ್ರೀಯ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿದೆ, ಹೀಗಾಗಿ ನಿರ್ದೇಶಕರು ಅಂತರರಾಷ್ಟ್ರೀಯ ಮಟ್ಟದ ರೇಸಿಂಗ್ ಟೀಮ್ ಅನ್ನು ಸಂಪರ್ಕಿಸಿದೆ, ಅವರ ಸಲಹೆ ಮೇರೆಗೆ ಟ್ರ್ಯಾಕ್ ಸಿದ್ದವಾಗಲಿದೆ.
40 ದಿನಗಳ ಶೂಟಿಂಗ್ ನಡೆಯಲಿದ್ದು, ಕೊಯಂಬತ್ತೂರಿನಿಂದ ಮೈಸೂರಿಗೆ, ನಂತರ ಮಂಗಳೂರು, ಸಕಲೇಶಪುರ ನಡುವೆ ರೇಸ್ ಸಂಚರಿಸಲಿದೆ. ನಡುವೆ ಸಣ್ಣ ಸಣ್ಣ ಬ್ರೇಕ್ ತೆಗೆದುಕೊಳ್ಳಲಾಗುವುದು. ಸ್ಕಾಟ್ ಲ್ಯಾಂಡ್ ನಲ್ಲಿ ಶೂಟಿಂಗ್ ಗೆ ಸಿನಿಮಾ ತಂಡ ನಿರ್ಧರಿಸಿದೆ.
ಮೊದಲ ಹಂತದ ಶೂಟಿಂಗ್ ನಲ್ಲಿ ಚಿಕ್ಕಣ್ಣ ಮತ್ತ ಸಾಧು ಕೋಕಿಲಾ ಭಾಗವಹಿಸಲಿದ್ದಾರೆ. ಉಳಿದ ಪ್ರಮುಖ ಪಾತ್ರಗಳ ಕಲಾವಿದರ ಆಯ್ಕೆ ಶೀಘ್ರವೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


