'ಒಂದಲ್ಲ ಎರಡಲ್ಲ' ಸಿನಿಮಾ ನೋಡಿದವರು ಮುಗ್ದರಾಗುತ್ತಾರೆ: ಸತ್ಯ ಪ್ರಕಾಶ್
ರಾಮಾ ರಾಮಾ ರೇ ಯಂತ ಸದಭಿರುಚಿಯ ಸಿನಿಮಾ ನೀಡಿದ್ದ ಡಾ. ಸತ್ಯಪ್ರಕಾಶ್ ಸದ್ದಿಲ್ಲದೇ ತಮ್ಮ 2ನೇ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ...

Published On :
ಬೆಂಗಳೂರು: ರಾಮಾ ರಾಮಾ ರೇ ಯಂತ ಸದಭಿರುಚಿಯ ಸಿನಿಮಾ ನೀಡಿದ್ದ ಡಾ. ಸತ್ಯಪ್ರಕಾಶ್ ಸದ್ದಿಲ್ಲದೇ ತಮ್ಮ 2ನೇ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.
37 ದಿನಗಳಲ್ಲಿ ಒಂದಲ್ಲ-ಎರಡಲ್ಲ ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಸೋಮವಾರ ಫರ್ಸ್ಟ್ ಲುಕ್ ರಿಲೀಸ್ ಆಗಲಿದೆ.ಹುಡುಗನೊಬ್ಬನಿಗೆ ಬಾಲ ಇರುವ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಜೊತೆಗೆ ಹಸುವಿನ ರೀತಿಯ ಕಿವಿ ಮತ್ತು ಎರಡು ಕೊಂಬು ಇದೆ.
ಈ ಸಿನಿಮಾವನ್ನು ಮುಗ್ದ ಜನರು ಹಾಗೂ ಪ್ರೇಮಿಗಳು ಇಷ್ಟ ಪಡುತ್ತಾರೆ, ಸಿನಿಮಾ ನೋಡಿದ ಮೇಲೆ ಅವರು ಕೂಡ ಮುಗ್ಧರಾಗುತ್ತಾರೆ,
ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಸತ್ಯ ಪ್ರಕಾಶ್ ಸಿನಿಮಾ ಪೋಸ್ಟರ್ ಎಲ್ಲವನ್ನೂ ಹೇಳುತ್ತದೆ ಎಂದು ತಿಳಿಸಿದ್ದಾರೆ. ಡಿ ಸತ್ಯ ಪ್ರಕಾಶ್ ಅವರು ಸಹ ನಿರ್ಮಾಪಕರಾಗಿದ್ದು, ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. ಸ್ಮಿತಾ ಉಮಾಪತಿ ಅವರ ಡಿ.ಎನ್ ಸಿನಿಮಾ ಬ್ಯಾನರ್ ನಲ್ಲಿ ಸಿನಿಮಾ ಸಿದ್ದವಾಗಿದೆ.
ರಾಮಾ ರಾಮಾ ರೇ ಸಿನಿಮಾ ತಂತ್ರಜ್ಞರೇ ಈ ಸಿನಿಮಾಗೂ ಕೆಲಸ ಮಾಡಿದ್ದಾರೆ. ಹೊಸ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ, ರೋಹಿತ್ ಪಾಂಡವಪುರ ವಿಲ್ಲನ್ ಪಾತ್ರದಲ್ಲಿ ನಟಿಸಿದ್ದು, ಮುಂದಿನ 20 ದಿನಗಳಲ್ಲಿ ಮೊದಲ ಕಾಪಿ ತಯಾರಾಗಿ ಆಗಸ್ಟ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


