ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರ 'ಗೀತಾ'

ಮುಂಗಾರು ಮಳೆ ಖ್ಯಾತಿಯ ನಟ ಗಣೇಶ್ ಹಾಗೂ ವಿಜಯ್ ನಾಗೇಂದ್ರ ಅವರ ಸಹಯೋಗದಲ್ಲಿ ಗೀತಾ ಹೆಸರಿಲ್ಲಿ ಮತ್ತೊಂದು ಚಿತ್ರ ಬರುತ್ತಿದೆ. ಗೋಲ್ಡನ್ ಫಿಲಂ ಅಸೊಸಿಯೇಷನ್ ಯೊಂದಿಗೆ ಸಯ್ಯದ್ ಸಲಾಮ್ ಈ ಚಿತ್ರ ನಿರ್ಮಿಸುತ್ತಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರ 'ಗೀತಾ'
ನಟ ಗಣೇಶ್
Published On :
ಬೆಂಗಳೂರು:  ನಟ, ನಿರ್ದೇಶಕ, ಶಂಕರ್ ನಾಗ್ ಕನ್ನಡ ಚಿತ್ರರಂಗ ಕಂಡ  ದಿಗ್ಗಜ ನಟರಲ್ಲಿ ಒಬ್ಬರು. ಅವರ ನಿರ್ದೇಶನದಲ್ಲಿ   1981ರಲ್ಲಿ ಮೂಡಿಬಂದ  ಗೀತಾ ಚಿತ್ರ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು.
ಆ ಚಿತ್ರದಲ್ಲಿನ ಅರುಂದತಿ ನಾಗ್ ಸಾಹಿತ್ಯ ರಚನೆಯ  ಕರಾಟೆ ಕಿಂಗ್ ಶಂಕರ್ ನಾಗ್ ನಿರ್ದೇಶನದ  ಇಳಿಯರಾಜ ಸಂಗೀತ ಸಂಯೋಜನೆಯ ಸಂತೋಷಕ್ಕೆ , ಕೇಳದೆ ನಿಮ್ಮಗೀಗಾ, ಯೇನು ಕೇಳು,  ಗೀತೆಗಳು ಇಂದಿಗೂ ಚಿತ್ರಪ್ರೇಮಿಗಳ ಬಾಯಲ್ಲಿ ಗುನುಗುತ್ತಿರುತ್ತದೆ.
 ಈ ಮಧ್ಯೆ ಮುಂಗಾರು ಮಳೆ ಖ್ಯಾತಿಯ ನಟ ಗಣೇಶ್ ಹಾಗೂ ವಿಜಯ್ ನಾಗೇಂದ್ರ ಅವರ ಸಹಯೋಗದಲ್ಲಿ  ಗೀತಾ ಹೆಸರಿಲ್ಲಿ ಮತ್ತೊಂದು ಚಿತ್ರ ಬರುತ್ತಿದೆ. ಗೋಲ್ಡನ್ ಫಿಲಂ ಅಸೊಸಿಯೇಷನ್ ಯೊಂದಿಗೆ ಸಯ್ಯದ್ ಸಲಾಮ್ ಈ   ಚಿತ್ರ ನಿರ್ಮಿಸುತ್ತಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
ಸಯ್ಯದ್  ಸಲಾಮ್,   ಗಣೇಶ್ ಅವರೊಂದಿಗೆ ಮಾಡುತ್ತಿರುವ ಎರಡನೇ ಚಿತ್ರ ಇದಾಗಿದೆ.  ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆಯಲ್ಲಿ ಈ ಹಿಂದೆ ಗಣೇಶ್ ಜೊತೆಗೆ ಕೆಲಸ ಮಾಡಿದ್ದರು
 ಮೂಲ ಕಥೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲಾ, ಶಂಕರ್ ನಾಗ್ ವ್ಯಕ್ತಿತ್ವವನ್ನು ರೀಲ್ ಪಾತ್ರದಲ್ಲಿ ಗಣೇಶ್ ನಿರ್ವಹಿಸಲಿದ್ದಾರೆ ಆದರೆ, ಕಥೆ ಹೊಸತನದಿಂದ ಕೂಡಿಗೆ ಎಂದು ಮೂಲಗಳು ತಿಳಿಸಿವೆ.
Story image
ವಿಜಯ್ ನಾಗೇಂದ್ರ  ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ, ಮತ್ತು ರಾಜಕುಮಾರ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.  ಈ ಚಿತ್ರಗಳ ತಂಡವೇ  ಗೀತಾ ಚಿತ್ರದಲ್ಲೂ ಜೊತೆಯಾಗಿದೆ. ಸಂತೋಷ್ ಕಥೆಯಲ್ಲಿ ಮ್ಯಾಜಿಕ್ ಟಚ್ ನೀಡಿದ್ದು, ಈ ಚಿತ್ರ ಈಗಾಗಲೇ ತೀವ್ರ ಕುತೂಹಲ ಕೆರಳಿಸಿದೆ.
ಮಿಸ್ಟರ್ ಅಂಡ್ ಮಿಸಸ್ ರಾಜಕುಮಾರಿ ಚಿತ್ರದಲ್ಲಿ  ಯಶ್ ವಿಷ್ಣುವರ್ಧನ್  ಪ್ರತಿರೂಪದಲ್ಲಿ ಕಾಣಿಸಿಕೊಂಡಿದ್ದರೆ,  ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ , ರಾಜ್ ಕುಮಾರ್  ವ್ಯಕ್ತಿತ್ವದ ಬಗ್ಗೆ ಬಿಂಬಿಸಲಾಗಿದೆ. ಇಂತಹದ್ದೇ ಪಾತ್ರವನ್ನು ಗಣೇಶ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಪಾರ ಅಭಿಮಾನಿಗಳ ಹೊಂದಿರುವ ಶಂಕರ್ ನಾಗ್  ಗಣೇಶ್ ಪಾತ್ರದ ಮೂಲಕ ಮತ್ತೆ ಮರಳಲಿದ್ದಾರೆ. ನಾಗಣ್ಣ ಹಾಗೂ ಪ್ರಶಾಂತ್ ರಾಜ್ ನಿರ್ದೇಶನದ ಚಿತ್ರಗಳನ್ನು ಗಣೇಶ್ ಒಪ್ಪಿಕೊಂಡಿದ್ದಾರೆ. ಆದರೆ, ಗೀತಾ ಸಿನಿಮಾ ಗಣೇಶ್ ಅವರ ಭವಿಷ್ಯಕ್ಕೆ ಮತ್ತೊಂದು  ಹಂತವಾಗಿರಲಿದೆ ಎಂದು ಚಿತ್ರರಂಗದೊಳಗಿರುವವರು ಹೇಳುತ್ತಿದ್ದಾರೆ.
ಗಣೇಶ್ ಜನ್ಮದಿನ ಜು.12 ರಂದು ಈ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.