ಸಿನಿಮಾ ಸುದ್ದಿ

ಆರ್.ಜಿ.ವಿ. ನಿರ್ಮಾಣದ ದ್ವಿಭಾಷಾ ಚಿತ್ರದಲ್ಲಿ ಧನಂಜಯ್

''ಟಗರು'' ಚಿತ್ರದಲ್ಲಿನ ಡಾಲಿ ಪಾತ್ರದಲ್ಲಿ ಧನಂಜಯ್ ಅಭಿನಯ ಪ್ರೇಕ್ಷಕರು ಹಾಗೂ ಚಿತ್ರೋದ್ಯಮಿಗಳ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಆರ್.ಜಿ.ವಿ. ನಿರ್ಮಾಣದ ದ್ವಿಭಾಷಾ ಚಿತ್ರದಲ್ಲಿ ಧನಂಜಯ್
ಧನಂಜಯ್
Published On :
ಬೆಂಗಳೂರು: ''ಟಗರು'' ಚಿತ್ರದಲ್ಲಿನ ಡಾಲಿ ಪಾತ್ರದಲ್ಲಿ ಧನಂಜಯ್ ಅಭಿನಯ ಪ್ರೇಕ್ಷಕರು ಹಾಗೂ ಚಿತ್ರೋದ್ಯಮಿಗಳ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಖ್ಯಾತ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ತಮ್ಮ ಬ್ಯಾನರ್ನಡಿಯ ಮುಂದಿನ ಚಿತ್ರದಲ್ಲಿಲ್ಲಿ ಧನಂಜಯ್ ಗೆ ಮುಖ್ಯ ಪಾತ್ರವೊಂದನ್ನು ನೀಡುವ ಭರವಸೆ ಕೊಟ್ಟಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ವರ್ಮಾ ತಮ್ಮ ಬ್ಯಾನರ್ ಹಾಗೂ ರಾಶಿ ಕಂಬೈನ್ಸ್ ನ ಸಹಯೋಗದಲ್ಲಿ ಚಿತ್ರವೊಂದನ್ನು ತಯಾರಿಸುತ್ತಿದ್ದು ಇದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆರ್.ಜಿ.ವಿ. ಸಹವರ್ತಿಯಾಗಿ ದೀರ್ಘಕಾಲ ಕೆಲಸ ಮಾಡಿದ್ದ ಯುವ ನಿರ್ದೇಶಕ ಸಿದ್ಧಾರ್ಥ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಇದು ಸಿದ್ಧಾರ್ಥ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ರಥಮ ಚಲನಚಿತ್ರವಾಗಿದೆ. ಇದು ದ್ವಿಭಾಷಾ ಚಿತ್ರವಾಗಿ ಮೂಡಿಬರುತ್ತಿರುವುದು ಇನ್ನೊಂದು ವಿಶೇಷ. ಜೂನ್ 15ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಮೂಲಗಳು ಹೇಳಿದೆ.
ಚಿತ್ರತಂಡ ಈ ಹೊಸ ಯೋಜನೆಗೆ ಇನ್ನೂ ಹೆಸರು ಅಂತಿಮಗೊಳಿಸಿಲ್ಲ, ’ಭೈರವ ಗೀತಾ’ ಎನ್ನುವ ಹೆಸರು ಸೂಚಿಸಿದೆಯಾದರೂ ಇದಿನ್ನೂ ಅಂತಿಮವಾಗಿಲ್ಲ. ಆದರೆ ಹಳ್ಳಿಯಲ್ಲಿ ನಡೆವ ಕಥೆ ಹೊಂದಿರುವ ಈ ಚಿತ್ರ ಎರಡೂ ರಾಜ್ಯಗಳ ಸನ್ನಿವೇಶಕ್ಕೆ ತಕ್ಕಂತೆ ಇರಲಿದೆ. ಚಿತ್ರೀಕರಣ ಜುಲೈ 30ರೊಳಗೆ ಪೂರ್ಣಗೊಳ್ಳಲಿದೆ ಎಂದು ಚಿತ್ರತಂಡದ ಮಾಹಿತಿ ತಿಳಿಸಿದೆ.
ಜೂನ್ 21 ರಂದು ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಯೋಜನೆ ಇದ್ದು ಅಂದು ಚಿತ್ರದ ಕುರಿತಂತೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಅಂದು ಚಿತ್ರದ ಶೀರ್ಷಿಕೆ, ನಟನಾವರ್ಗ, ತಂತ್ರಜ್ಞರ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು  ಆಯೋಜಕರು ತೀರ್ಮಾನಿಸಿದ್ದಾರೆ.
"ಇದೊಂದು ದ್ವಿಭಾಷಾ ಚಿತ್ರವಾಗಿ ಖಂಡಿತವಾಗಿ ಧನಂಜಯ್ ಗೆ ವಿಶೇಷವಾಗಿ ತೆಲುಗು ಉದ್ಯಮದಲ್ಲಿ ಒಳ್ಳೆಯ ಹೆಸರು ತಂದುಕೊಡಲಿದೆ" ಮೂಲಗಳು ಹೇಳಿದೆ. 
ಸಧ್ಯ ಧನಂಜಯ್ ಟಗರು ನಿರ್ದೇಶಕ ಸೂರಿಯ ಮುಂದಿನ ಚಿತ್ರ ’ಸೂರಿ ಪಾಪ್ಕಾರ್ನ್ ಮಂಕಿ ಟೈಗರ್’ ದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.