ಸಿನಿಮಾ ಸುದ್ದಿ

ವಿಭಿನ್ನ ಗೆಟಪ್ ನಲ್ಲಿ ಸೆಂಚುರಿ ಸ್ಟಾರ್: 'ದ್ರೋಣಾಚಾರ್ಯ'ನಾಗಿ ಶಿವಣ್ಣ

ಪ್ರಮೋದ್ ಚಕ್ರವರ್ತಿ ನಿರ್ದೇಶನದ ದ್ರೋಣ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅಭಿನಯವಿದೆ. ಭರ್ಜರಿ ಫೋಟೋಶೂಟ್ ಸಹ ನಡೆದಿದ್ದು, ..

ವಿಭಿನ್ನ ಗೆಟಪ್ ನಲ್ಲಿ ಸೆಂಚುರಿ ಸ್ಟಾರ್: 'ದ್ರೋಣಾಚಾರ್ಯ'ನಾಗಿ ಶಿವಣ್ಣ
ಶಿವರಾಜ್ ಕುಮಾರ್
Published On :
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ವಿಭಿನ್ನ ಚಿತ್ರಕ್ಕೆ ವೇದಿಕೆ ಸಿದ್ಧವಾಗಿದೆ.
ಶಿವಣ್ಣನ ದಿ ವಿಲನ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್​ಜೋರಾಗಿ ನಡೀತಿದೆ.. ಮತ್ತೊಂದೆಡೆ ಕವಕ ಮತ್ತು ರುಸ್ತುಂ ಸಿನಿಮಾಗಳಲ್ಲಿ ಶಿವಣ್ಣ ಬಿಡುವಿಲ್ಲದೇ ನಟಿಸ್ತಿದ್ದಾರೆ. 
ಸುಗ್ರೀವ ನಂತರ ಪ್ರಮೋದ್ ಚಕ್ರವರ್ತಿ ನಿರ್ದೇಶನದ ಎರಡನೇ ಚಿತ್ರ ದ್ರೋಣ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅಭಿನಯವಿದೆ. ಭರ್ಜರಿ ಫೋಟೋಶೂಟ್ ಸಹ ನಡೆದಿದ್ದು, ಶೀಘ್ರದಲ್ಲೇ ದ್ರೋಣನ ದರ್ಬಾರ್ ಶುರುವಾಗಲಿದೆ.
ಇತ್ತೀಚೆಗಷ್ಟೆ ಪ್ರಮೋದ್ ಚಕ್ರವರ್ತಿ ನಿರ್ದೇಶನದ ಚಿತ್ರದಲ್ಲಿ ಶಿವರಾಜ್​ಕುಮಾರ್ ನಟಿಸೋ ಸುದ್ದಿ ಕೇಳಿಬಂದಿತ್ತು. ನಟ ಕಮ್ ನಿರ್ದೇಶಕ ಪ್ರಮೋದ್​ ಈ ಬಾರಿ ಒಂದು ವಿಭಿನ್ನ ಪಾತ್ರದಲ್ಲಿ ಶಿವಣ್ಣನನ್ನ ತೋರಿಸೋ ಪ್ರಯತ್ನ ಮಾಡಿದ್ದಾರೆ. 
ಮಹಾಭಾರತದ ಗುರುಗಳಾದ ದ್ರೋಣಚಾರ್ಯರ ಹೆಸರಿನಲ್ಲಿ ನಿರ್ಮಾಣವಾಗ್ತಿರೋ ಈ ಚಿತ್ರದಲ್ಲಿ ಶಿವಣ್ಣ ಪ್ರೈಮರಿ ಸ್ಕೂಲ್ ಟೀಚರ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಕಥೆ. ರಿವೇಂಜ್‌, ಸೆಂಟಿಮೆಂಟ್, ಕಾಮಿಡಿಯಾಗಿದ್ದು ಜೂನ್ 22ರಂದು ಮೂಹೂರ್ಥ ನಡೆಯಲಿದೆ, ಆಗಸ್ಟ್ ತಿಂಗಳಿನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ,.
ಡಾಲ್ಫಿನ್ ಮೀಡಿಯಾ ಹೌಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಸ್ವಾತಿ ಶರ್ಮಾ, ರಂಘಾಯಣ ರಘು ಮುಂತಾದವರು ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.