ಅತ್ಯುತ್ತಮ ಸ್ಕ್ರಿಪ್ಟ್ ಚಿತ್ರವನ್ನು ಗೆಲ್ಲಿಸುತ್ತದೆ: ರಕ್ಷಿತ್ ಶೆಟ್ಟಿ
ಕಿರಿಕ್ ಪಾರ್ಟಿ ಚಿತ್ರದ ಭರ್ಜರಿ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ಇದೀಗ ಅವನೇ ಶ್ರೀಮನ್ನಾರಾಯಣ ಹಾಗೂ ಚಾರ್ಲಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ....

Published On :
ಕಿರಿಕ್ ಪಾರ್ಟಿ ಚಿತ್ರದ ಭರ್ಜರಿ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ಇದೀಗ ಅವನೇ ಶ್ರೀಮನ್ನಾರಾಯಣ ಹಾಗೂ ಚಾರ್ಲಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ರಕ್ಷಿತ್ ಶೆಟ್ಟಿ 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ಯೋಜನೆಗಳ ಕುರಿತು ಮಾತನಾಡಿದ್ದಾರೆ. ನಾನು ಶ್ರೀಮನ್ನಾರಾಯಣ ಹಾಗೂ ಚಾರ್ಲಿ ಚಿತ್ರಗಳಲ್ಲಿ ಅಭಿಯಿಸುತ್ತಿದ್ದೇನೆ. ಹೇಳಬೇಕೆಂದರೆ ಈ ಹಿಂದೆ ನನ್ನ ಯಾವ ಚಿತ್ರದು ಬಜೆಟ್ 3 ಕೋಟಿಗಿಂತ ದಾಟಿರಲಿಲ್ಲ. ಆದರೆ ನನ್ನ ಶ್ರೀಮನ್ನಾರಾಯಣ ಚಿತ್ರದ ಬಜೆಟ್ ಜಾಸ್ತಿಯಾಗಿದ್ದು ಇದು ನನ್ನ ವೃತ್ತಿ ಬದುಕಿನ ಅತೀ ದೊಡ್ಡ ಬಜೆಟ್ ಚಿತ್ರವಾಗಿದೆ ಎಂದರು.
ಶ್ರೀಮನ್ನಾರಾಯಣ ಚಿತ್ರ ಸದ್ಯ ಚಿತ್ರೀಕರಣದ ಹಂತದಲ್ಲಿದೆ. ಈ ಮಧ್ಯೆ ನನ್ನ ಹುಟ್ಟುಹಬ್ಬಕ್ಕಾಗಿ ಚಿತ್ರ ತಂಡ ಟ್ರೈಲರ್ ಬಿಡುಗಡೆ ಮಾಡುವ ಹುಮ್ಮಸ್ಸಿನಲ್ಲಿದೆ. ಈ ಚಿತ್ರವನ್ನು ನವ ನಿರ್ದೇಶಕ ಸಚಿನ್ ನಿರ್ದೇಶಿಸುತ್ತಿದ್ದಾರೆ. ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಕ್ರಿಯಾಶೀಲತೆ ಸಚಿನ್ ಅವರಲ್ಲಿದೆ. ಇನ್ನು ಚಿತ್ರದ ಛಾಯಾಗ್ರಾಹಕ ಕರ್ಮ್ ಚಾಲ್ವಾ ಅವರು ಅತ್ಯುತ್ತಮವಾಗಿ ಛಾಯಾಗ್ರಾಹಣ ಮಾಡುತ್ತಿದ್ದಾರೆ. ನನ್ನ ಉಳಿದವರು ಕಂಡಂತೆ ಚಿತ್ರಕ್ಕಿಂತ ಈ ಚಿತ್ರ ಮತ್ತಷ್ಟು ಉನ್ನತವಾಗಿ ಕಾಣಲಿದೆ ಎಂದರು.
ಇನ್ನು ಚಾರ್ಲಿ ಚಿತ್ರದ ಕುರಿತಂತೆ ಮಾತನಾಡಿರುವ ರಕ್ಷಿತ್ ಶೆಟ್ಟಿ, ಶ್ವಾನದೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಚಿತ್ರತಂಡ ಹೆಚ್ಚು ಉತ್ಸುಕವಾಗಿದೆ. ಇನ್ನು ನಿರ್ದೇಶಕರಿಗೆ ಶಾರ್ಟ್ಸ್ ಗಳನ್ನು ತೆಗೆದುಕೊಳ್ಳುವುದಕ್ಕೆ ಸ್ವಲ್ಪ ಕಷ್ಟವಾಗಬಹುದು. ಸಾಕುಪ್ರಾಣಿಗಳನ್ನು ಚಿತ್ರೀಕರಣದ ಸಂದರ್ಭದಲ್ಲಿ ಸಂಭಾಳಿಸುವುದು ಚಿಕ್ಕ ಮಗುವನ್ನು ಸಂಭಾಳಿಸಿದಂತೆ ಎಂದರು ರಕ್ಷಿತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sandalwoodರಕ್ಷಿತ್ ಶೆಟ್ಟಿRakshit Shettyಸ್ಯಾಂಡಲ್ವುಡ್Avane Srimannarayanaಅವನೇ ಶ್ರೀಮನ್ನಾರಾಯಣ777 Charlie777 ಚಾರ್ಲಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


