ಮುಂದಿನ ಸಿನಿಮಾಗಾಗಿ ಕ್ರಿಕೆಟ್ ಕಲಿಯುತ್ತಿರುವ ರಶ್ಮಿಕಾ ಮಂದಣ್ಣ
ಹಲವು ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ , ವಿಜಯ ದೇವರಕೊಂಡ ಜೊತೆ ಕ್ರಿಕೆಟ್ ಕಥೆ ಆಧರಿತ ಸಿನಿಮಾದಲ್ಲಿ ನಟಿಸಲಿದ್ದಾರೆ....

Published On :
ಬೆಂಗಳೂರು: ಒಂದು ವೇಳೆ ರಶ್ಮಿಕಾ ಮಂದಣ್ಣ ಯಜಮಾನ ಸಿನಿಮಾದಲ್ಲಿ ನಟಿಸದಿದ್ದರೇ ಇಷ್ಟೊತ್ತಿಗಾಗಲೇ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು,
ಸದ್ಯ ಹಲವು ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ , ವಿಜಯ ದೇವರಕೊಂಡ ಜೊತೆ ಕ್ರಿಕೆಟ್ ಕಥೆ ಆಧರಿತ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದಕ್ಕಾಗಿ ಅವರು ಬಾಲ್ ಮತ್ತು ಬ್ಯಾಟ್ ಹಿಡಿದು ತರಬೇತಿ ಪಡೆಯುತ್ತಿದ್ದಾರೆ, ಮುಂದಿನ ಸಿನಿಮಾದಲ್ಲಿ ವಿಜಯ ದೇವರಕೊಂಡ ಜೊತೆ ನಟಿಸುತ್ತಿದ್ದಾರೆ, ಅದರಲ್ಲಿ ಮಹಿಳಾ ಲೀಗ್ ನಲ್ಲಿ ಕ್ರಿಕೆಟರ್ ಆಗಿ ನಟಿಸಲಿದ್ದಾರೆ.
ಸದ್ಯ ಮುಂಬಯಿಯ ಬೀಚ್ ನಲ್ಲಿ ದರ್ಶನ್ ಜೊತೆ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ, ಮುಂಬಯಿಯ ವಾತಾವರಣದ ಬಗ್ಗೆ ಹೇಳಿದ್ದಾರೆ, ಅದು ಭಯಂಕರ ವಾತಾವರಣ ಆದರೆ ಶೆಡ್ಯೂಲ್ ಗಾಗಿ ನಾವು ಕೆಲಸ ಮಾಡುತ್ತಿದ್ದೇವೆ,ಬೆಳಗ್ಗೆ ಚಿತ್ರೀಕರಣವಿದ್ದರೇ ಅದನ್ನು ಮುಗಿಸಿ, ಸಂಜೆ ರಿಹರ್,ಲ್ ಮಾಡುತ್ತೇನೆ, ನನ್ನ ಜೀವನದಲ್ಲಿ ಇದೊಂದು ಸುಂದರ ಹಂತ,ನಾನು ವಿಭಿನ್ನವಾದದ್ದನ್ನು ಮಾಡುತ್ತಿದ್ದೇನೆ ಎಂದು ನನಗೆ ತೃಪ್ತಿ ಇದೆ,
ರೊನಾಲ್ಡ್ ಎಂಬುವರು ರಶ್ಮಿಕಾಗೆ ತರಬೇತಿ ನೀಡುತ್ತಿದ್ದಾರೆ, ಅವರು ಕಲಾವಿದರಿಗೆ ತರಬೇತಿ ನೀಡುತ್ತಾರೆ,ರೊನಾಲ್ಜ್ ಹೊಸತನ್ನು ಕಲಿಸುತ್ತಾರೆ, ಮೊದಲ ಬಾರಿಗೆ ಕ್ರಿಕೆಟ್ ಆಡುತ್ತಿರುವ ರಶ್ಮಿಕಾ ಈಗಾಗಲೇ ಕ್ರಿಕೆಟ್ ನೋಡಲು ಆರಂಭಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳಾ ಆಟಗಾರರ ಕ್ರಿಕೆಟ್ ವೀಕ್ಷಿಸುವ ಅವರು, ಅವರ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ,
ನನ್ನ ಜೀವನದಲ್ಲಿ ನಾನು ಎಂದೂ ಕ್ರಿಕೆಟ್ ಬ್ಯಾಟ್ ಬಾಲ್ ಹೊಂದಿರಲಿಲ್ಲ, ಆದರೆ ಇದ್ದಕ್ಕಿದ್ದಂತೆ ನಾನು ಕಲಿಯುವ ಸಮಯ ಬಂದಿತು, ತರಬೇತಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ, ಕೈ, ಕಾಲು ಮತ್ತು ತಲೆ ಒಟ್ಟಿಗೆ ಕೆಲಸ ಮಾಡಬೇಕು, ಇದೊಂದು ಕಠಿಣ ಗೇಮ್, ಮಹಿಳಾ ಕ್ರಿಕೆಟ್ ಟೀಮ್ ಬಗ್ಗೆ ನನಗೆ ಗೌರವ ವಿದೆ ಎಂದು ಹೇಳಿದ್ದಾರೆ.
ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸಾಕಷ್ಟು ಬ್ಯುಸಿಯಾಗಿರುವ ರಶ್ಮಿಕಾ ಮುಂದಿನ ಕೆಲವು ತಿಂಗಳ ಕಾಲ ಫುಲ್ ಬ್ಯುಸಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


